ನೀನಾಸಂ ಸತೀಶ್ ಹಾಗೂ ರಚಿತಾರಾಮ್ “ಅಯೋಗ್ಯ” ಚಿತ್ರದ ನಂತರ ನಟಿಸಿರುವ ಬಹು ನಿರೀಕ್ಷಿತ “ಮ್ಯಾಟ್ನಿ” ಚಿತ್ರ ಈ ವಾರ(ಏಪ್ರಿಲ್ 5) ಬಿಡುಗಡೆಯಾಗುತ್ತಿದೆ. ಈಗಾಗಲೇ ಟೀಸರ್, ಟ್ರೇಲರ್ ಹಾಗೂ ಹಾಡುಗಳ ಮೂಲಕ ಚಿತ್ರ ಜನರ ಮನ ಗೆದ್ದಿದೆ. F3 ಪ್ರೊಡಕ್ಷನ್ಸ್ ಲಾಂಛನದಲ್ಲಿ ಪಾರ್ವತಿ ಎಸ್ ಗೌಡ ನಿರ್ಮಿಸಿರುವ ಹಾಗೂ ಮನೋಹರ್ ಕಾಂಪಲ್ಲಿ ನಿರ್ದೇಶನದ ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ, ಸುಧಾಕರ್ ಎಸ್ ರಾಜ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನವಿದೆ. ನೀನಾಸಂ ಸತೀಶ್, ರಚಿತಾ ರಾಮ್, ಅದಿತಿ ಪ್ರಭುದೇವ, ನಾಗಭೂಷಣ, ಶಿವರಾಜ ಕೆ.ಆರ್ ಪೇಟೆ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
Read More : ‘ಜಾಜಿ’ ಹಾಡು ಬಿಡುಗಡೆ ಮಾಡಿ ಶುಭಕೋರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ .
ಹಾಡು ಮತ್ತು ಟ್ರೇಲರ್ ಮೂಲಕ ಗಮನ ಸೆಳೆದಿರುವ ‘ಮ್ಯಾಟ್ನಿ’ ಸಿನಿಮಾ ಕಥೆಯಲ್ಲಿ ನಾಲ್ಕು ಪಾತ್ರಗಳು ಬಹುಮುಖ್ಯವಾಗಿದ್ದು, ಇವು ಈ ಚಿತ್ರದ ಪಿಲ್ಲರ್‌ಗಳಿದ್ದಂತೆ ಎಂದು ನಿರ್ದೇಶಕ ಮನೋಹರ್ ಕಾಂಪಲ್ಲಿ ಮತ್ತು ನಾಯಕ ನಟ ಸತೀಶ್ ನೀನಾಸಂ ಹೇಳಿದ್ದಾರೆ. ಇದರಲ್ಲಿ ರಚಿತಾ ರಾಮ್ ಮತ್ತು ಅದಿತಿ ಪ್ರಭುದೇವ ನಾಯಕಿಯರಾಗಿ ನಟಿಸಿದ್ದಾರೆ.
Read More : ಕಮಾಂಡ್ ಆಸ್ಪತ್ರೆಯ ಮುಂದೆ ಯೂಟರ್ನ್ ಬೆಡಗಿಯ ಹುಟ್ಟಿನ ರಹಸ್ಯ ಬಯಲು
ನಟ ಶಿವರಾಜ್ ಕೆ ಆರ್ ಪೇಟೆ ಸಹ ‘ಮ್ಯಾಟ್ನಿ’ ಚಿತ್ರದಲ್ಲಿ ವಿಶಿಷ್ಟ ಪಾತ್ರ ನಿರ್ವಹಿಸಿದ್ದಾರೆ. ರಿಯಲ್ ಎಸ್ಟೇಟ್‌ನಿಂದ ಸಿಕ್ಕಾಪಟ್ಟೆ ಹಣ ಮಾಡಬೇಕು ಎಂಬ ಯೋಚನೆ ಇರುವ ಮಂಡ್ಯದ ರಿಯಲ್ ಎಸ್ಟೇಟ್ ಏಜೆಂಟ್‌ನ ಪಾತ್ರ ಅವರದ್ದಾಗಿದೆ. ಈವರೆಗೆ ಕಾಮಿಡಿ, ಸೀರಿಯಸ್, ಪುಡಿ ರೌಡಿ ಮುಂತಾದ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿರುವ ನಟ ಪೂರ್ಣಚಂದ್ರ ಮೈಸೂರು ‘ಮ್ಯಾಟ್ನಿ’ ಸಿನಿಮಾದಲ್ಲಿ ಆಧ್ಯಾತ್ಮದ ಮೂಲಕ ಹಣ ಮಾಡುವ ಐಡಿಯಾ ಹೊಂದಿರುವ ಗುರುವಿನ ಪಾತ್ರದಲ್ಲಿದ್ದಾರೆ.
Read More : `ಮಹಾತ್ಮ ಕಬೀರ್’.. ರಾಜ್ ನಟನೆಗೆ ಕಟ್ ಹೇಳೋದನ್ನೇ ಮರೆತಿದ್ದರು ನಿರ್ದೇಶಕರು..!
ಈ ಮೊದಲು ಕೆಲವು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿಕಾಣಿಸಿರುವ ದಿಗಂತ್ ದಿವಾಕರ್, ಈ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಡಿಟೆಕ್ಟಿವ್ ಆಗಬೇಕು ಎಂಬ ಕನಸು ಹೊತ್ತಿರುವ ಯುವಕನ ಪಾತ್ರ ಇದಾಗಿದೆ.