Rating ; /5
ಒಂದು ಮನೆ, ಆಲ್ಲಿ ನಾಲ್ಕು ಗೆಳೆಯರು.. ಅವರನ್ನು ಬಿಟ್ಟು ಕಣ್ಣಿಗೆ ಕಾಣದ ಯಾರೋ ಒಬ್ಬರು ಅವರ ನಡುವೆಯೇ ಸುಳಿದಾಡುತ್ತಿರುವ ಅನುಭವ ಆ ನಾಲ್ಕು ಜನರದ್ದೂ. ಹೀಗಿರುವಾಗ ಆಗಾಗ ಕೇಳುವ `ಝಲ್ ಝಲ್’ ಸದ್ದಿನ ಬಗ್ಗೆ ಸದ್ದಿಲ್ಲದೆ ಗೆಳಯರ ಗುಂಪಿನಲ್ಲಿರುವ ಒಬ್ಬನಿಗೆ ಸಣ್ಣ ಹಿಂಟ್ ಸಿಕ್ಕಿರುತ್ತದೆ. ಆದರೆ ಉಳಿದ ಮೂವರೂ `ಡೌಟ್ ಪಿಶಾಚಿ’ಗಳಾಗಿ ಸುತ್ತುತ್ತಿರುತ್ತಾರೆ. `ಮ್ಯಾಟ್ನಿ’ ಶೋ ಶುರುವಾದ ಆರಂಭದಲ್ಲೇ ಸಿನಿಮಾದಲ್ಲಿ ಹೇಗೆ ಮನೆಯಲ್ಲಿ `ಯರೋ ಇದ್ದಾರೆ’ ಅನ್ನುವ ಫೀಲ್ ಇರುತ್ತದೆಯೋ, ಸಿನಿಮಾ ನೋಡುವಾಗಲೂ ನಮ್ಮನ್ನು ಬಿಟ್ಟು ಯಾರೋ ಓಡಾಡಿಕೊಂಡಿದ್ದಾರೆ ಎಂಬ ಫೀಲ್ ಪ್ರೇಕ್ಷಕನಿಗೆ ಆಗುತ್ತದೆ. ಸತೀಶ್ ನೀನಾಸಂ ಜೀವನದಲ್ಲಿ ಮೊದಲ ಬಾರಿಗೆ ಮಾಡಿರುವ `ಡೇರ್ ಡೆವಿಲ್ ಸಾಹಸ’ ಸಾಕಷ್ಟು ರಂಜನೆಯನ್ನು ನೀಡುತ್ತದೆ. ಫಸ್ಟ್ಹಾಫ್ `ಇಲ್ಲಿ ಎನೋ ಸಮಸ್ಯೆ ಇದೆ’ ಎಂದು ಹೇಳುವ ಡೈರೆಕ್ಟರ್ ಮನೋಹರ್ ಕಂಪ್ಲಿ, ಸೆಕೆಂಡ್ ಹಾಫ್ ಅನ್ನು ಇನ್ನಷ್ಟು ಮನೋಹರವಾಗಿ ಕಟ್ಟಿಕೊಟಿದ್ದಾರೆ.
ಇದನ್ನೂ ಓದಿ: Ranganayaka Review: ಕಥೆ ತಲೆ ಕೆಡಿಸಿತು, ಮಾತು ಸಿನಿಮಾ ಕೆಡಿಸಿತು!
ಫಸ್ಟ್ಹಾಫ್‌ನಲ್ಲಿ ಪ್ರೇಕ್ಷಕನಿಗೆ ದೆವ್ವದ ಬಗ್ಗೆ `ಹಾಫ್ ಸತ್ಯ’ ಗೊತ್ತಾಗಿ ಬಿಡುತ್ತದೆ. ಆದರೆ `ರಿಯಲ್ ದೆವ್ವ ಯಾರು?’ ಎಂಬುದಕ್ಕೆ ಉತ್ತರ ಸಿಗುವುದಿಲ್ಲ.. ಅದು ಅಸಲಿಗೆ ಸ್ಕಿçÃನ್‌ಪ್ಲೇನ ತಾಕತ್ತು. ದೆವ್ವಗಳ ರೊಮ್ಯಾಂಟಿAಕ್ ದೃಶ್ಯಗಳು ನಗಬೇಕಾ ಇಲ್ಲಾ.. ಭಯ ಪಡಬೇಕಾ.. ಎಂದು ಕನಫ್ಯೂಸ್ ಮಾಡುತ್ತವೆ. ಗೆಳೆಯರಾಗಿ ಶಿವರಾಜ್ ಕೆ.ಆರ್.ಪೇಟೆ, ನಾಗಭೂಷಣ್ ಮತ್ತು ದಿಗಂತ್ ದಿವಾಕರ್ ನೋಡಗುನನ್ನು ಭಯಗೊಳಿಸುತ್ತಲೇ ನಗಿಸುವಲ್ಲಿ ಗೆದ್ದಿದ್ದಾರೆ. ಒಂದು ಹಂತದಲ್ಲಿ, ಸಿನಿಮಾ ನೋಡ್ತಾ ನೋಡ್ತಾ ಒಂದು ಅನುಮಾನ ಬರಲು ಶುರು ಆಗುತ್ತದೆ. ರಚಿತಾ ರಾಮ್ ದೆವ್ವ ಅನ್ನಿಸುತ್ತದೆ, ಇನ್ನೂ ಕೆಲವೊಮ್ಮೆ ಅದಿತಿನೇ ದೆವ್ವ ಅನ್ನಿಸುತ್ತೆ. ಕೆಲವೊಮ್ಮೆ ಸತೀಶ್ ನೀನಾಸಂ ಗೆಳೆಯರ ಮೇಲೂ ಅನುಮಾನ ಬರುತ್ತದೆ. ಕೊನೆ ಕೊನೆಗೆ ಸತೀಶ್ ಮೇಲೂ ಡೌಟ್ ಬರೋಕೆ ಶುರು ಆಗುತ್ತದೆ. ಒಟ್ಟಿನಲ್ಲಿ `ದೆವ್ವ’ದ ಇಂಟ್ರೆಸ್ಟಿoಗ್ ಹುಡುಕಾಟದಲ್ಲಿ ಪ್ರೇಕ್ಷಕ ಮೊಬೈಲ್ ಮರೆತು ಬಿಡುತ್ತಾನೆ. ಮ್ಯಾಟ್ನಿ ಸಿನಿಮಾದ ಕೊನೆಯಲ್ಲಿ `ಮ್ಯಾಟ್ನಿ-2’ ಬಗ್ಗೆ ಹಿಂಟ್ ಕೊಡುವ ನಿರ್ದೇಶಕರು, ಅಚ್ಚರಿ ಮೂಡಿಸುತ್ತಾರೆ. `ಮ್ಯಾಟ್ನಿ-2’ನ ದೆವ್ವ ಯಾರು ಎಂಬ ಕುತೂಹಲ ಪ್ರೆಕ್ಷಕನ ತಲೆಯಲ್ಲಿ ಉಳಿದುಬಿಡುತ್ತದೆ. ಇದು ಒಂದು ರೀತಿಯಲ್ಲಿ ತಲೆಗೆ `ದೆವ್ವ’ ಬಿಡುವ ತಂತ್ರ!
ಇದನ್ನೂ ಓದಿ: Kreem Movie Review: ಜನ ಸಾಮಾನ್ಯನಿಗೆ ನಿಲುಕದ ಅಸಮಾನ್ಯ ಚಿತ್ರ!
`ದೆವ್ವ’ದ ಕಥೆಯಲ್ಲಿ ರಚಿತಾ ರಾಮ್ ಮತ್ತು ಅದಿತಿ ಪ್ರಭುದೇವ ಅದ್ಭುತವಾಗಿ ನಟಿಸಿದ್ದರೆ, ಅಸಮಾನ್ಯ ನಟ ಸತೀಶ್ ನಿನಾಸಂ `ತಾನು ಎಂಥಹ ಜಾನರ್‌ನ ಸಿನಿಮಾವಾದರೂ ನ್ಯಾಯ ಒದಗಿಸಬಲ್ಲೆ’ ಎಂಬುದನ್ನು ನಿರೂಪಿಸಿದ್ದಾರೆ. ಇನ್ನು, ನಾಲ್ಕು ಜನ ಗೆಳೆಯರು ದೆವ್ವದ ಕಥೆಯ ಓಘವನ್ನು ಹೆಚ್ಚಿಸಿದ್ದಾರೆ. ಮ್ಯೂಸಿಕ್ ಡೈರೆಕ್ಟರ್ ಪೂರ್ಣ ಚಂದ್ರ ತೇಜಸ್ವಿ ನೆನಪಿನಲ್ಲಿ ಉಳಿಯುವಂತಹ ಹಾಡುಗಳನ್ನು ಕೊಟ್ಟರೆ, ರೊನಾಡಾ ಬಕ್ಕೇಶ್ ಬಿ.ಜಿ.ಎಮ್ ಕಂಪ್ಲಿಯವರ ಕನಸನ್ನು ಕಂಪ್ಲೀಟ್ ಮಾಡಿದೆ. ಎಡಿಟರ್ ಕೆ.ಎಮ್.ಪ್ರಕಾಶ್ ದೆವ್ವಕ್ಕೆ ಸ್ವಲ್ಪವೂ ಹೆದರದೇ ಕತ್ತರಿ ಪ್ರಯೋಗ ಮಾಡಿದರೆ, ಸುಧಾಕರ್&ಕೀರ್ತನ್ ದೆವ್ವದ ಮುಖಕ್ಕೇ ಕ್ಯಾಮರಾ ಇಟ್ಟು ಗೆದ್ದಿದ್ದಾರೆ.
ಇದನ್ನೂ ಓದಿ: ‘Kerebete’ movie review : ಪ್ರೇಮ `ಬೇಟೆ’ ಯ ಹಿಂದೆ ಮರ್ಯಾದಾ ಹತ್ಯೆ!
ಒಟ್ಟಿನಲ್ಲಿ, ತಮ್ಮ ಚೊಚ್ಚಲ ನಿರ್ಮಾಣದಲ್ಲೇ ನಿರ್ಮಾಪಕಿಯಾದ ಪಾರ್ವತಿ.ಎಸ್.ಗೌಡ ಸೈ ಅನ್ನಿಸಿಕೊಂಡು, ಕನ್ನಡಕೊಬ್ಬರು ಭರವಸೆಯ ನಿರ್ಮಾಪಕಿಯಾಗುವ ಭರವಸೆ ನೀಡಿದ್ದಾರೆ. ಹಾರರ್, ಥ್ರಿಲ್ಲರ್, ಕಾಮಿಡಿ, ರೊಮ್ಯಾಂಟಿಕ್.. ಹೀಗೆ ಸಾಕಷ್ಟು ಮನೋರಂಜನಾತ್ಮಕ ಅಂಶಗಳನ್ನು ಹೊಂದಿರುವ `ಮ್ಯಾಟ್ನಿ’ ಕನ್ನಡದ ಮಟ್ಟಿಗೆ ವಿಶೇಷ ಸಿನಿಮಾ. ಕತ್ತಲೆ ಕತ್ತಲೆ.. ನೆತ್ತರು ನೆತ್ತರು.. ಹಸಿ-ಬಿಸಿ.. ಚಿತ್ರಗಳ ಮಧ್ಯೆ `ಮ್ಯಾಟ್ನಿ’ ಶೋ ಒಂದು ರಿಲಾಕ್ಸ್ ಫೀಲ್ ಕೊಡುವುದು ಖಂಡಿತಾ.
By -ಬಿ.ನವೀನ್‌ಕೃಷ್ಣ.ಪುತ್ತೂರು