16 ವರ್ಷಗಳ ಹಿಂದೆ ‘ನವರಸ ನಾಯಕ‘ ಜಗ್ಗೇಶ್ ಮತ್ತು ಗುರುಪ್ರಸಾದ್ ಕಾಂಬಿನೇಷನ್ನಲ್ಲಿ ‘ಮಠ‘ ಸಿನಿಮಾ ತೆರೆಕಂಡಿತ್ತು. ಅದು ಜಗ್ಗೇಶ್ ನಟನೆಯ 100ನೇ ಸಿನಿಮಾ ಅನ್ನೋದು ಮತ್ತೊಂದು ವಿಶೇಷ. ಆ ಕಾಲಕ್ಕೆ ಸಾಕಷ್ಟು ಸದ್ದು ಮಾಡಿತ್ತು ‘ಮಠ‘ ಸಿನಿಮಾ. ಇದೀಗ ಮತ್ತೊಮ್ಮೆ ತೆರೆಮೇಲೆ ‘ಮಠ‘ ಸಿನಿಮಾ ಬರೋದಕ್ಕೆ ರೆಡಿ ಆಗಿದೆ. ಹಾಗಂದ ಮಾತ್ರಕ್ಕೆ, ಇದು ಜಗ್ಗೇಶ್ ನಟನೆಯ ‘ಮಠ‘ ಅಲ್ಲ. ಇದು ಬೇರೆಯದೇ ಸಿನಿಮಾ. ನಿರ್ದೇಶಕ ರವೀಂದ್ರ ವೆಂಶಿ ಹೊಸದಾಗಿ ‘ಮಠ‘ ಎಂಬ ಸಿನಿಮಾವನ್ನು ಮಾಡಿದ್ದಾರೆ. ಅಂದಿನ ‘ಮಠ‘ ಸಿನಿಮಾಕ್ಕೂ ಈ ‘ಮಠ‘ ಸಿನಿಮಾಕ್ಕೂ ಯಾವುದೇ ಸಂಬಂಧ ಇಲ್ಲ. ಇನ್ನು, ಇಂತಹ ಸಮಾಜವನ್ನು ಎಚ್ಚರಿಸುವಂತಹ ಅಪರೂಪದ ಕಂಟೆ0ಟ್ನ ಚಿತ್ರಕ್ಕೆ ಬಂಡವಾಳ ಹೂಡಿರುವ ನಿರ್ಮಾಪಕ ರಮೇಶ್ ರಮಾನಂದ್ ಅವರ ಸಮಾಜಿಕ ಕಳಕಳಿಯನ್ನು ಮೆಚ್ಚಲೇಬೇಕು.
![](https://chittaranews.com/wp-content/uploads/2022/11/Web_Photo_Editor-1-3-1024x538.jpg)
ಫಿಲಾಸಫಿಕಲ್ ಮತ್ತು ಕಾಮಿಡಿ ಮಿಶ್ರಿತ ಸತ್ಯ ಘಟನೆಯಾಧಾರಿತ ಈ ‘ಮಠ‘ ಸಿನಿಮಾದಲ್ಲಿ ದೊಡ್ಡ ತಾರಾಬಳಗವಿದೆ. ಬರೋಬ್ಬರಿ 82 ಕಲಾವಿದರು ನಟಿಸಿರುವ ಈ ಚಿತ್ರದಲ್ಲಿ ನಿರ್ದೇಶಕ ಗುರುಪ್ರಸಾದ್, ತಬಲ ನಾಣಿ, ಮಂಡ್ಯ ರಮೇಶ್, ಬಿರಾದಾರ್, ಸಾಧು ಕೋಕಿಲ ಸೇರಿದಂತೆ ಹಾಸ್ಯಕಲಾವಿದರ ದಂಡೇ ಇದೆ. ಸುಮಾರು ಮೂರು ವರ್ಷಗಳ ಕಾಲ ಚಿತ್ರೀಕರಣ ನಡೆಸಿರುವ ಚಿತ್ರತಂಡ, 25 ಜಿಲ್ಲೆಗಳ ವಿವಿಧ ಪ್ರವಾಸಿ ತಾಣಗಳಲ್ಲಿ ಕಥೆಗೆ ತಕ್ಕಂತೆ ಶೂಟಿಂಗ್ ಮಾಡಿದೆ. ರಾಜ್ಯದ ಸುಮಾರು ಮುನ್ನೂರು ಮಠಗಳಲ್ಲಿ ಚಿತ್ರೀಕರಣ ನಡೆಸಿರುವುದು ವಿಶೇಷ. ಚಿತ್ರದ trailer ಈಗಾಗಲೇ ಬಿಡುಗಡೆಯಾಗಿದ್ದು ಸಾಕಷ್ಟು ಸದ್ದು ಮಾಡುತ್ತಿದ್ದು, ಸಿನಿಮಾ ನವೆಂಬರ್ ಹದಿನೆಂಟರ0ದು ರಿಲೀಸ್ ಅಗಲಿದೆ.
ಬಹುನಿರೀಕ್ಷಿತ `ಧರಣಿ ಮಂಡಲ ಮಧ್ಯದೊಳಗೆ’ nov25ಕ್ಕೆ ತೆರೆಗೆ
ಅಂದು ತೆರೆಕಂಡ ‘ಮಠ‘ ಸಾಧು ಒಂದೆರಡು ದೃಶ್ಯಗಳಲ್ಲಿ ಕಾಣಿಸಿಕೊಂಡು ಸಖತ್ ಆಗಿ ರಂಜಿಸಿದ್ದರು. ಈ ‘ಮಠ‘ದಲ್ಲೂ ಸಾಧು ಕೋಕಿಲ ನಟಿಸಿದ್ದಾರೆ. ‘ನಾನು ಸುಮಾರು ಸಿನಿಮಾಗಳನ್ನು ಮಾಡಿರಬಹುದು. ಅದರ ಲೆಕ್ಕ ಇಟ್ಟಿಲ್ಲ. ಬಹುಶಃ 600 ರಿಂದ 700 ಸಿನಿಮಾ ಆಗಿರಬಹುದು. ಆದರೆ ಗುರುಪ್ರಸಾದ್ ಅವರ ‘ಮಠ‘ ಸಿನಿಮಾದಲ್ಲಿ ನಾನು ಒಂದೆರಡು ಸೀನ್ನಲ್ಲಿ ಮಾತ್ರ ನಟಿಸಿದ್ದೇನೆ. ಆ ದೃಶ್ಯಗಳು ಸಖತ್ ಹಿಟ್ ಆಗಿವೆ. ಇದೀಗ ಅದೇ ಹೆಸರಲ್ಲಿ ಮತ್ತೊಂದು ಸಿನಿಮಾ ಆಗಿದೆ. ಇದರ ಕಥಾವಸ್ತು ಬೇರೆ. ಇದರಲ್ಲಿ ನಾನು ಮೇಜರ್ ರೋಲ್ ಮಾಡಿದ್ದೇನೆ. ಇದು ನನಗೆ ಕಾಮಿಡಿಯಲ್ಲ. ಇದು ನಿಜ ಜೀವನದ ಕಥೆ. ಒಂದೊಂದು ಪಾತ್ರವೂ ನೈಜವಾಗಿವೆ‘ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು ಸಾಧು.
`ಡೆಡ್ಲಿಕಿಲ್ಲರ್’ ಚಿತ್ರಕ್ಕೆ ನವರಸ ನಾಯಕ ಸಾಥ್
‘ಮನೆ ಕಟ್ಟುವುದು ಸುಲಭ. ಮಠ ಕಟ್ಟುವುದು ಕಷ್ಟ. 290 ದಿನ ಪಯಣ ಮಾಡಿ, 300 ಮಠಗಳಿಗೆ ಭೇಟಿ ಕೊಟ್ಟು ಕಥೆ ಮಾಡಿ ಸಿನಿಮಾ ಮಾಡೋದು ಕಷ್ಟದ ವಿಚಾರ. ಈ ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ‘ ಎಂದು ಹೇಳಿದರು ನಿರ್ದೇಶಕ ಗುರುಪ್ರಸಾದ್. ಈ ಚಿತ್ರಕ್ಕೆ ಜೀವನ್ ಗೌಡ ಛಾಯಾಗ್ರಹಣ ಮಾಡಿದ್ದು, ರಾಜ್ಯ ಪ್ರಶಸ್ತಿ ವಿಜೇತ ಸಿ. ರವಿಚಂದ್ರನ್ ಸಂಕಲನ ಮಾಡಿದ್ದಾರೆ. ವಿ. ಮನೋಹರ್ ಸಂಗೀತ ನಿರ್ದೇಶನವಿದ್ದು, ಹಾಡುಗಳಿಗೆ ಯೋಗರಾಜ್ ಭಟ್, ವಿ. ನಾಗೇಂದ್ರ ಪ್ರಸಾದ್, ಗೌಸ್ ಪೀರ್ ಸಾಹಿತ್ಯ ಬರೆದಿದ್ದಾರೆ.