Sandalwood Leading OnlineMedia

‘ಆನ’ ನಿರ್ದೇಶಕರ ಮತ್ತೊಂದು ಪ್ರಯತ್ನ ‘ಮೇರಿ’ – ಸ್ಯಾಂಡಲ್ ವುಡ್ ಸ್ಟಾರ್ ನಿರ್ದೇಶಕರಿಂದ ‘ಮೇರಿ’ ಫಸ್ಟ್ ಲುಕ್ ರಿಲೀಸ್

ಆನಸಿನಿಮಾ ಮೂಲಕ ಸ್ಯಾಂಡಲ್ ವುಡ್ ಅಂಗಳದಲ್ಲಿ ಗುರುತಿಸಿಕೊಂಡಿರುವ ಮನೋಜ್ ಪಿ ನಡಲುಮನೆ  ಹೊಸದೊಂದು ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆಮೇರಿಎಂದು ಹೆಸರಿಡಲಾಗಿದ್ದು ಮೇರಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಇಂದು ಬಿಡುಗಡೆಯಾಗಿದೆ. ಸಿಂಪಲ್ ಸುನಿ, ಅನೂಪ್ ಭಂಡಾರಿ, ಹೇಮಂತ್ ರಾವ್, ದಯಾನಂದ್ ಟಿ.ಕೆ. ಮಂಸೋರೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಮೇರಿಪಶ್ಚಿಮ ಘಟ್ಟದ ಗ್ರಾಮಾಂತರ ಠಾಣೆಯಲ್ಲಿ ನಡೆಯುವ ಕಥೆಯನ್ನು ಒಳಗೊಂಡಿದ್ದು, ಥ್ರಿಲ್ಲರ್ ಡ್ರಾಮ  ಸಬ್ಜೆಕ್ಟ್ ಒಳಗೊಂಡಿದೆ. ವಿಕಾಶ್ ಉತ್ತಯ್ಯ, ಅನುಷ ಭಟ್, ಚೇತನ್ ವಿಕ್ಕಿ, ತೇಜಸ್ವಿನಿ ಶರ್ಮ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

 

ಮನೋಜ್ ಪಿ ನಡಲುಮನೆ ಎರಡನೇ ಸಿನಿಮಾ ಇದು. ‘ಆನನಂತರ ಸದ್ದಿಲ್ಲದೇ ಸೆಟ್ಟೇರಿದಮೇರಿಚಿತ್ರ ಚಿತ್ರೀಕರಣ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಸದ್ಯದಲ್ಲೇ ಟ್ರೇಲರ್ ಮೂಲಕ ಪ್ರೇಕ್ಷಕರನ್ನು ಸೆಳೆಯಲು ಸಜ್ಜಾಗಿದೆ. ‘ಮೇರಿಪಕ್ಕಾ ಕಮರ್ಶಿಯಲ್ ಸಿನಿಮಾವಾಗಿದ್ದು, ಜನವರಿಯಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ಮಾಡಿಕೊಂಡಿದೆ.

 

‘ಧರಣಿ ಮಂಡಲ ಮಧ್ಯದೊಳಗೆ’ ಟ್ರೇಲರ್ ರಿಲೀಸ್ – ಚಿತ್ರ್ಕಕೆ ಹ್ಯಾಟ್ರಿಕ್ ಹೀರೋ, ವಸಿಷ್ಠ ಸಿಂಹ ಸಾಥ್

 

ಸಂದೀಪ್ ನೀನಾಸಂ, ಭಾರ್ಗವ್ ವೆಂಕಟೇಶ್, ಸುಶಾಂತ್, ದೀಪಕ್ ಗೌಡ ಒಳಗೊಂಡ ಕಲಾವಿದರ ಬಳಗ ಚಿತ್ರದಲ್ಲಿದೆ. ವಿನೋದ್ ಭಾರತಿ ಛಾಯಾಗ್ರಹಣ, ಸೂರಜ್ ಜೋಯ್ಸ್ ಸಂಗೀತ ನಿರ್ದೇಶನ, ನಾಗೇಂದ್ರ ಉಜ್ಜನಿ ಸಂಕಲನ ಚಿತ್ರಕ್ಕಿದೆ. ರನ್ವಿತ್ ಶಿವಕುಮಾರ್, ಹರೀಶ್ ಜಿ.ಬಿ ನಿರ್ಮಾಣ ಮಾಡಿದ್ದಾರೆ.

 

 

 

Share this post:

Related Posts

To Subscribe to our News Letter.

Translate »