ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ‘ಮಾರ್ಟಿನ್’ ಟೀಸರ್ ಹೈವೋಲ್ಟೇಜ್ ಆಕ್ಷನ್ ಸೀನ್ಸ್ ಹೊಂದಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಟೀಸರ್ ಬಿಡುಗಡೆಯಾಗಿದೆ. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ‘ಮಾರ್ಟಿನ್’ ಸಿನಿಮಾ ರಿಲೀಸ್ ಆಗಲಿದ್ದು, ಟೀಸರ್ ಲಾಂಚ್ ಕಾರ್ಯಕ್ರಮ ಕೂಡ ಭರ್ಜರಿಯಾಗಿ ನೆರವೇರಿದೆ. ಹಾಗ್ನೋಡಿದ್ರೆ, ‘ಮಾರ್ಟಿನ್’ ಸಿನಿಮಾ ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ಆದರೆ, ಬಿಗ್ ಬಜೆಟ್ ಹಾಗೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಮಾರ್ಟಿನ್’ ತಯಾರಾಗುತ್ತಿರುವುದರಿಂದ ಕೊಂಚ ಸಮಯ ಹಿಡಿದಿದೆ.
ಶಿಡ್ಲಘಟ್ಟದಲ್ಲಿ ಫೆಬ್ರವರಿ 26 ರಂದು `ಕಬ್ಜ’ ಮೇನಿಯಾ!
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಚಿತ್ರದ ಟೀಸರ್ ನಿರೀಕ್ಷೆ ಮಾಡದಷ್ಟು ಕ್ರೇಜ್ ಹುಟ್ಟಿಸಿದೆ. ಟೀಸರ್ ವೀಕ್ಷಿಸಿದ ಪ್ರತಿಯೊಬ್ಬರು ವಾರೆ ವ್ಹಾ ಅಂತಲೇ ಹೇಳುತ್ತಿದ್ದಾರೆ. ಪ್ರತಿ ಪ್ರೇಕ್ಷಕರಲ್ಲೂ ಒಂದು ಥ್ರಿಲ್ ಮೂಡುತ್ತಿದೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಚಿತ್ರ ಜೀವನದಲ್ಲಿ ಮಾರ್ಟಿನ್ ಬೇರೆ ಲೆವಲ್ನ ಸಿನಿಮಾ ಆಗಿದೆ.
ಫೆಬ್ರವರಿ 27ರಂದು ರಿಲೀಸ್ ಆಗಲಿದೆ ಬಹುನಿರೀಕ್ಷಿತ, ಪರಮೇಶ್ ನಿರ್ಮಾಣದ `ಪ್ರಣಯಂ’ ಚಿತ್ರದ ಟೀಸರ್ .
ಇದರ ಟೀಸರ್ ಸಾಮಾನ್ಯವಾಗಿ ಎಲ್ಲ ಸಿನಿಮಾಗಳ ರೀತಿ ಇರುತ್ತದೆ ಅನ್ನುವ ಒಂದು ಅಂದಾಜಿತ್ತು. ಆದರೆ ಮಾರ್ಟಿನ್ ಟೀಸರ್ ಎಲ್ಲವನ್ನೂ ಮೀರಿಸಿದೆ. ಚಿತ್ರದಲ್ಲಿ ಇದೇ ತಾಜಾತನ ಮತ್ತು ನಿರೀಕ್ಷೆ ಮಾಡದೇ ಇರೋ ಸಾಹಸಗಳೂ ಇರಬಹುದು ಅನ್ನುವ ಒಂದು ಅಂದಾಜನ್ನ ಕೂಡ ಮಾರ್ಟಿನ್ ಟೀಸರ್ ಈಗ ಕೊಟ್ಟಿದೆ ಅಂತ ಹೇಳಬಹುದು. ಒಟ್ಟಾರೆ, ಮಾರ್ಟಿನ್ ಹೊಸ ಅಲೆ ಎಬ್ಬಿಸೋ ಸಣ್ಣ ಸೂಚನೆ ಕೊಟ್ಟಿದೆ.
ಶಿವರಾಜ್‌ಕುಮಾರ್ ಚಂದನವನದ ಪಯಣಕ್ಕೆ 37ರ ಹರೆಯ; ಅಭಿಮಾನಿಗಳು `ದೇವರ ಸ್ವರೂಪ’ ಎಂದ ಹ್ಯಾಟ್ರಿಕ್ ಹೀರೋ
ಹೇಳಿ ಕೇಳಿ ಇದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾ. ಅಂದ್ಮೇಲೆ ಸಿನಿಮಾದಲ್ಲಿ ಭರ್ಜರಿ ಆಕ್ಷನ್ ಸೀಕ್ವೆನ್ಸ್ ಇರುತ್ತೆ ಅಂತ ಅಭಿಮಾನಿಗಳು ನಿರೀಕ್ಷೆ ಮಾಡೋದು ಸಹಜ. ಆ ನಿರೀಕ್ಷೆಗೆ ತಕ್ಕ ಹಾಗಿದೆ ‘ಮಾರ್ಟಿನ್’ ಟೀಸರ್. ‘ಮಾರ್ಟಿನ್’ ಸಿನಿಮಾದಲ್ಲಿ ಮೈನವಿರೇಳಿಸುವ ಆಕ್ಷನ್ ಮತ್ತು ಸ್ಟಂಟ್ಸ್ ಇವೆ ಅನ್ನೋದಕ್ಕೆ ಸಾಕ್ಷಿ ಇಂದು ರಿಲೀಸ್ ಆಗಿರುವ ‘ಮಾರ್ಟಿನ್’ ಟೀಸರ್.‘ಮಾರ್ಟಿನ್’ ಸಿನಿಮಾದಲ್ಲಿ ಆಕ್ಷನ್ ಜೊತೆಗೆ ದೇಶಪ್ರೇಮ ಕೂಡ ಇದೆ. ಟೀಸರ್ ಆರಂಭದಲ್ಲೇ ನಾಯಕ ಧ್ರುವ ಸರ್ಜಾ ಪಾಕಿಸ್ತಾನದ ಜೈಲಿನಲ್ಲಿ ಇರುವಂತೆ ತೋರಿಸಲಾಗಿದೆ. ಅಲ್ಲದೇ, ಧ್ರುವ ಸರ್ಜಾ ಅವರನ್ನ ‘ಮಹಾ ಕ್ರೂರಿ’ ಎಂಬ0ತೆ ಬಿಂಬಿಸಲಾಗಿದೆ. ಹಾಗಾದ್ರೆ, ‘ಮಾರ್ಟಿನ್’ ಕಥೆ ಏನು?
‘ಮಾರ್ಟಿನ್’ ಸಿನಿಮಾದಲ್ಲಿ ದೇಶಪ್ರೇಮದ ಕಥೆ ಇದ್ಯಾ? ದುಷ್ಟರನ್ನ ನಾಯಕ ಬಗ್ಗು ಬಡಿಯೋದು ಹೇಗೆ? ‘ಮಾರ್ಟಿನ್’ ಚಿತ್ರದಲ್ಲಿ ಧ್ರುವ ಸರ್ಜಾ ವೀರ ಯೋಧನಾ? ಅಥವಾ ಸ್ಪೈ ಏಜೆಂಟಾ? ಎಂಬಿತ್ಯಾದಿ ಪ್ರಶ್ನೆಗಳು ‘ಮಾರ್ಟಿನ್’ ಟೀಸರ್ ನೋಡಿದವರಿಗೆ ಕಾಡುವುದು ಸಹಜ. ಇ0ಟ್ರೆಸ್ಟಿ0ಗ್ ಅಂದ್ರೆ, ‘ಮಾರ್ಟಿನ್’ ಸಿನಿಮಾದಲ್ಲಿ ಧ್ರುವ ಸರ್ಜಾ ಹೆಸರು ಮಾರ್ಟಿನ್ ಅಲ್ವಂತೆ. ಧ್ರುವ ಸರ್ಜಾ ಹೆಸರು ಅರ್ಜುನ್. ಹಾಗಾದ್ರೆ, ‘ಮಾರ್ಟಿನ್’ ಯಾರು? ಈ ಪ್ರಶ್ನೆಗೆ ಉತ್ತರ ಸಿಗೋದು ನೀವು ಚಿತ್ರ ನೋಡುವಾಗಲೇ..! ದೇಶಪ್ರೇಮದ ಎಳೆ ಹೊಂದಿರುವ ‘ಮಾರ್ಟಿನ್’ ಚಿತ್ರಕ್ಕೆ ಅರ್ಜುನ್ ಸರ್ಜಾ ಕಥೆ ಬರೆದಿದ್ದಾರೆ. ಎ. ಪಿ. ಅರ್ಜುನ್ ಆಕ್ಷನ್ ಕಟ್ ಹೇಳಿದ್ದಾರೆ. ‘ಮಾರ್ಟಿನ್’ ಮೂಲಕ ಎ. ಪಿ. ಅರ್ಜುನ್ ಹಾಗೂ ಧ್ರುವ ಸರ್ಜಾ ಮತ್ತೆ ಒಂದಾಗಿರೋದ್ರಿ0ದ ಸಿನಿಮಾದ ಮೇಲೆ ಹೈ ಹೋಪ್ಸ್ ಇದೆ. ಅಂದ್ಹಾಗೆ, ‘ಮಾರ್ಟಿನ್’ ಚಿತ್ರಕ್ಕೆ ರಾಮ್ – ಲಕ್ಷ್ಮಣ್ ಆಕ್ಷನ್ ಕೊರಿಯೋಗ್ರಾಫ್ ಮಾಡಿದ್ದಾರೆ. ಎಪಿ ಅರ್ಜುನ್ ನಿರ್ದೇಶನದ ಈ ಸಿನಿಮಾದಲ್ಲಿ ಧ್ರುವ ಸರ್ಜಾ, ವೈಭವಿ ಶಾಂಡಿಲ್ಯ, ಮಾಳವಿಕಾ ಅವಿನಾಶ್ ಮೊದಲಾದವರು ಬಣ್ಣ ಹಚ್ಚಿದ್ದಾರೆ. ಮೋನಿ ಶರ್ಮಾ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಟೀಸರ್‌ನ ಮ್ಯೂಸಿಕ್ ಮಾತ್ರ ರವಿ ಬಸ್ರೂರ್ ಅವರದ್ದಾಗಿದೆ. ಸತ್ಯ ಹೆಗ್ಡೆ ಛಾಯಾಗ್ರಹಣ ಚಿತ್ರಕ್ಕಿದೆ.