ಎ.ಪಿ.ಅರ್ಜುನ್ (AP Arjun) ಹಾಗೂ ಧ್ರುವ ಸರ್ಜಾ(Dhruva Sarja) ಜೋಡಿ ಈಗಾಗಲೇ ಅದ್ಧೂರಿ (Addhuri) ಸಿನಿಮಾ ಮೂಲಕ ಜನರಿಗೆ ಮೋಡಿ ಮಾಡಿದೆ. ಈಗ ಮತ್ತೆ ಮಾರ್ಟಿನ್ (Martin) ಸಿನಿಮಾ ಮೂಲಕ ಜನರಿಗೆ ಮನರಂಜನೆ ನೀಡಲು ಸಜ್ಜಾಗುತ್ತಿದ್ದಾರೆ. ಧ್ರುವ ಸರ್ಜಾ ಅವರ ಮೊದಲ ಸಿನಿಮಾ ಅದ್ದೂರಿಯನ್ನು ಎ.ಪಿ.ಅರ್ಜುನ್ ನಿರ್ದೇಶನ ಮಾಡಿದ್ದರು. ಆ ಸಿನಿಮಾದಿಂದಲೇ ಅವರಿಗೆ ಸ್ಯಾಂಡಲ್ವುಡ್ನಲ್ಲಿ ಆ್ಯಕ್ಷನ್ ಪ್ರಿನ್ಸ್ ಆಗಿ ಮೆರೆಯುತ್ತಿದ್ದಾರೆ.
ಇಷ್ಟು ದಿನ ‘ಮಾರ್ಟಿನ್’ (Martin) ಸಿನಿಮಾದ ಬಗ್ಗೆ ಯಾವುದೇ ಹೆಚ್ಚಿನ ಅಪ್ಡೇಟ್ ಬಂದಿರಲಿಲ್ಲ. ಧ್ರುವ ಅಭಿಮಾನಿಗಳು ‘ಮಾರ್ಟಿನ್’ ಅಪ್ಡೇಟ್‌ಗಾಗಿ ಕಾಯ್ತಿದ್ದಾರೆ. ಸದ್ಯ ಚಿತ್ರತಂಡ ಸಿಹಿ ಸುದ್ದಿ ಕೊಟ್ಟಿದೆ. ಚಿತ್ರದ ಬಹುತೇಕ ಶೂಟಿಂಗ್ ಮುಗಿದೆ. ಇನ್ನೂ ಆ್ಯಕ್ಷನ್ ದೃಶ್ಯಗಳು ಮಾತ್ರವೇ ಬಾಕಿ ಇದೆ. ಮುಂದಿನ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಜ್ಜಾಗಿದೆ. ಆ್ಯಕ್ಷನ್ ಮಾತ್ರ ಬಾಕಿ! ಸದ್ಯ ‘ಮಾರ್ಟಿನ್’ ಬಹುತೇಕ ಶೂಟಿಂಗ್ ಮುಗಿದಿದ್ದು, ಆಕ್ಷನ್ಸೀನ್ಗಳು ಮಾತ್ರ ಬಾಕಿ ಇದೆಯಂತೆ.
ತೆಲುಗಿನಲ್ಲಿ ಬ್ಯಾನ್ ಆಗ್ತಾರ ಚಂದನ್?
ಸ್ಟಂಟ್ ಮಾಸ್ಟರ್ ರವಿ ವರ್ಮಾ(Ravi Varma) ಈ ಆಕ್ಷನ್ಸೀನ್ಗಳನ್ನು ನಿರ್ದೇಶನ ಮಾಡುತ್ತಿದ್ದಾರೆ. ರವಿ ವರ್ಮಾ ಮಾತ್ರ ಅಲ್ಲ, ದಕ್ಷಿಣ ಭಾರತೀಯ ಹೆಸರಾಂತ ಸ್ಟಂಟ್ ಮಾಸ್ಟರ್‌ಗಳಾದ ರಾಮ- ಲಕ್ಷ್ಮಣ (Rama-Lakshmana) ಕೂಡ ಈ ಚಿತ್ರತಂಡಕ್ಕೆ ಸಾಥ್ಕೊಡುತ್ತಿದ್ದಾರೆ. ಕೆಲವು ಆ್ಯಕ್ಷನ್‌ಗಳನ್ನು ಇವರೂ ಕೂಡ ಕಂಪೋಸ್ ಮಾಡುತ್ತಿದ್ದಾರೆ.
ಇದೇ ಆಗಸ್ಟ್ 5ರಿಂದ ಸಿನಿಮಾದ ಆ್ಯಕ್ಷನ್ ಚಿತ್ರೀಕರಣ ಶುರುವಾಗಲಿದೆ. ಆದಷ್ಟು ಬೇಗ ಚಿತ್ರವನ್ನು ಪೂರ್ಣ ಮಾಡುವ ತವಕದಲ್ಲಿದೆ ಚಿತ್ರತಂಡ. ಇನ್ನು ಈ ಚಿತ್ರದಲ್ಲಿ ನಟ ಧ್ರುವ ಸರ್ಜಾ ಮಸ್ತ್ ಆ್ಯಕ್ಷನ್ ಸೀನ್‌ಗಳಲ್ಲಿ ಕಾಣಿಸಿಕೊಳ್ಳುವುದರಲ್ಲಿ ನೋ ಡೌಟ್. ಇನ್ನು ನಿರ್ದೇಶಕ ಅರ್ಜುನ್‌ಗೂ ಕೂಡ ಇದು ಹೊಸ ರೀತಿಯ ಸಿನಿಮಾ ಆಗಿರಲಿದೆ.
ಇನ್ನು ಈಗ ಆ್ಯಕ್ಷನ್ ಚಿತ್ರೀಕರಣವನ್ನು ಸಿನಿಮಾ ತಂಡ ಹಮ್ಮಿಕೊಂಡಿದೆ. ಹಾಗಾಗಿ ಸಿನಿಮಾವನ್ನು ಅಂದುಕೊಂಡ ದಿನ ರಿಲೀಸ್ ಮಾಡಲು ಸಾಧ್ಯ ಆಗುವುದಿಲ್ಲ. ಸೆಪ್ಟೆಂಬರ್ 30ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ಈಗಾಗಲೇ ‘ಮಾರ್ಟಿನ್’ ತಂಡ ಪ್ರಕಟ ಮಾಡಿದೆ.
18ನೇ ವಯಸ್ಸಿನ ಫೋಟೊ ಶೇರ್ ಮಾಡಿದ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ: ಸೋ ಕ್ಯೂಟ್ ಅಂದ್ರು ಫ್ಯಾನ್ಸ್
ಆದರೆ ಚಿತ್ರದ ಶೂಟಿಂಗ್ ಇನ್ನು ಬಾಕಿ ಇರುವುದರಿಂದ ಸಿನಿಮಾವನ್ನು ಸೆಪ್ಟೆಂಬರ್‌ನಲ್ಲಿ ರಿಲೀಸ್ ಮಾಡುವುದು ಕಷ್ಟ ಸಾಧ್ಯ. ಹಾಗಾಗಿ ಸಿನಿಮಾದ ರಿಲೀಸ್ ದಿನವನ್ನು ಬದಲು ಮಾಡುವ ಸಾಧ್ಯತೆ ಇದೆ. ಧ್ರುವನಿಗೆ ನಾಯಕಿಯಾಗಿ ವೈಭವಿ ನಟಿಸುತ್ತಿದ್ದು, ಬಾಲಿವುಡ್ ನಟ ನಿಕಿತ್, ಅನ್ವೇಶಿ ಜೈನ್ ಸಹ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.