ಜಾಮ್ ನಗರ: ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಪ್ರಿ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಫೇಸ್ ಬುಕ್ ಸಹ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಅವರ ಪತ್ನಿ ಪ್ರಿಸ್ಸಿಲಾ ಚಾನ್ ಕೂಡಾ ಭಾಗಿಯಾಗಿದ್ದರು. ಈ ವೇಳೆ ಅವರು ಅನಂತ್ ಅಂಬಾನಿ ದುಬಾರಿ ವಾಚ್ ನೋಡಿ ದಂಗಾಗಿದ್ದಾರೆ.ಈ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅನಂತ್-ರಾಧಿಕಾ ವಿವಾಹ ಪೂರ್ವ ಕಾರ್ಯಕ್ರಮಕ್ಕೆ ದೇಶ ವಿದೇಶದ ಅನೇಕ ಗಣ್ಯರು ಬಂದಿದ್ದಾರೆ. ಅವರಲ್ಲಿ ಜುಕರ್ ಬರ್ಗ್ ದಂಪತಿ ಕೂಡಾ ಒಬ್ಬರು. ಬಂದ ಎಲ್ಲಾ ವಿಐಪಿ ಅತಿಥಿಗಳನ್ನು ಅಂಬಾನಿ ಕುಟುಂಬ ಖುದ್ದಾಗಿ ಮಾತನಾಡಿಸಿದೆ.
ಅದೇ ರೀತಿ ಮಾರ್ಕ್ ಜುಗರ್ ಬರ್ಗ್ ಮತ್ತು ಅವರ ಪತ್ನಿ ಪ್ರಿಸ್ಸಿಲಾರನ್ನು ಅನಂತ್ ಅಂಬಾನಿ ಮಾತನಾಡಿಸಿದ್ದಾರೆ. ಈ ವೇಳೆ ಅನಂತ್ ಅಂಬಾನಿ ಕೈಯಲ್ಲಿದ್ದ ದುಬಾರಿ ವಾಚ್ ಕಡೆಗೆ ಪ್ರಿಸ್ಸಿಲಾ ಗಮನಹರಿಸಿದ್ದಾರೆ. ಅನಂತ್ ಕೈ ಹಿಡಿದು ವಾಚ್ ಪರಿಶೀಲಿಸಿದ ಪ್ರಿಸ್ಸಿಲಾ ನಾನಂತೂ ಈವರೆಗೆ ಈ ವಾಚ್ ಖರೀದಿಸಲು ಮನಸ್ಸು ಮಾಡಿರಲಿಲ್ಲ. ಆದರೆ ನಿಮ್ಮ ಕೈಗೆ ಈ ವಾಚ್ ಚೆನ್ನಾಗಿ ಒಪ್ಪುತ್ತದೆ. ಈಗ ನನಗೂ ವಾಚ್ ಖರೀದಿಸುವ ಮನಸ್ಸಾಗುತ್ತಿದೆ’ ಎಂದಿದ್ದಾರೆ.
ಅಂದ ಹಾಗೆ ಅನಂತ್ ಕೈಯಲ್ಲಿದ್ದ ಆ ವಾಚ್ ಬೆಲೆಯೆಷ್ಟು ಗೊತ್ತೇ? ರಿಶಾರ್ ಮಿಲ್ ಎಂಬ ಸ್ವಿಜರ್ ಲ್ಯಾಂಡ್ ಮೂಲದ ಕಂಪನಿ ತಯಾರಿಸುವ ದುಬಾರಿ ವಾಚ್ ಇದಾಗಿದೆ. ಇದರ ಬೆಲೆ ಸುಮಾರು 10 ಕೋಟಿ ರೂ.ಗಳಿಗೂ ಹೆಚ್ಚು. ಹೇಳಿ, ಕೇಳಿ ಅಂಬಾನಿ ಕುಟುಂಬ ವಿಶ್ವದ ಶ್ರೀಮಂತರಲ್ಲಿ ಒಬ್ಬರು. ಹೀಗಾಗಿ ಈ ವಾಚ್ ಅವರಿಗೆ ಲೆಕ್ಕವೇ ಅಲ್ಲ.
ಆದರೆ ನೆಟ್ಟಿಗರಿಗೆ ಗಮನ ಸೆಳೆದಿದ್ದು, ಶ್ರೀಮಂತರೂ ನಮ್ಮಂತೇ ವಾಚ್, ಒಡವೆ ಬಗ್ಗೆ ಈ ರೀತಿ ಮಾತನಾಡುತ್ತಿದ್ದಾರೆ ಎಂದು. ಅಂತೂ ನಾವು ಮದುವೆ ಮನೆಗಳಲ್ಲಿ ಮಾತನಾಡುವ ಹಾಗೆ ಇವರೂ ಮಾತನಾಡುತ್ತಾರೆ ಎಂದು ಕಾಲೆಳೆದಿದ್ದಾರೆ.