ಇದೇ ಗುರುವಾರ 6 ರಂದು ನಡೆದ ’ಮರಣ ಮಹೋತ್ಸವ; ಎಂಬ ಚಲನಚಿತ್ರ ಕಥೆ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಯ ಗೌರವ ಕಾರ್ಯದರ್ಶಿ ಶ್ರೀಮಾನ್ ಸುಂದರ್ ರಾಜ್ ಹಾಗು ಅಧ್ಯಕ್ಷರಾದ ಶ್ರೀಮಾನ್ ಭಾ.ಮ.ಹರೀಶ್ರವರ ಸಮಕ್ಷಮದಲ್ಲಿ, ಪುಸ್ತಕ ಬಿಡುಗಡೆ ಮಾಡಿದ ಶ್ರೀಮಾನ್ ಚಿನ್ನೇಗೌಡರು ಈ ಪುಸ್ತಕದ ಹೆಸರಿನಲ್ಲೇ ತಮಗೆ ವಿಶೇಷತೆ ಕಂಡುಬಂದು, ಅದರಲ್ಲಿರುವ ಸನ್ನಿವೇಶಗಳು ಬಹಳ ಕುತೂಹಲಕಾರಿಯಾಗಿದೆ ಎಂದರು. ಹೀಗೆ ಮುಂದುವರೆಸುತ್ತ, ’ನನಗೆ ಈ ನಡುವೆ ಓದುವ ಹವ್ಯಾಸ ಕಮ್ಮಿಯಾದರು, ಈ ಕಥೆಯನ್ನು ಖಂಡಿತ ಓದುತ್ತೇನೆ ಎಂದು ಭರವಸೆಕೊಟ್ಟರು. ಕಾರ್ಯದರ್ಶಿಗಳಾದ ಸುಂದರ್ ರಾಜ್ ರವರು ಮಾತನಾಡಿ, ಇದನ್ನು ರಚಿಸಿದ ಡಾ. ಕಶ್ಯಪ್ ದಾಕೋಜುರವರು ಮೂಲತಃ ಚಿತ್ರ ನಿರ್ಮಾಪಕರು. ಇದುವರೆವಿಗು ಇವರು ನಿರ್ಮಿಸಿದ 5 ಚಲನಚಿತ್ರಗಳ ಅನುಭವದಿಂದ ಈ ರೀತಿಯ ಚಲನಚಿತ್ರ ಕಥೆಯ (script) ರೂಪದಲ್ಲಿ ಬರೆದಿರುವುದು ಬಹುಶಃ ಇದೇ ಮೊದಲಬಾರಿ ಇರಬಹುದು ಎಂದು ಹೇಳಿ, ’ಒಬ್ಬ ನಿರ್ಮಾಪಕರೆ ತಮಗಿರುವ ಚಿತ್ರ ನಿರ್ಮಾಣದ ಅನುಭವದಿಂದ ತಾವೆ ಒಂದು ಇಂತಹ ಸ್ವಾರಸ್ಯಕರವಾದ ವಿಷಯದ ಬಗ್ಗೆಚಿತ್ರಕಥೆ ರೂಪದಲ್ಲಿ ಸೃಷ್ಟಿಸಿದ್ದಾರೆ ಎಂದರೆ, ನಮಗೆ ಇದು ಬಹಳ ಹೆಮ್ಮೆಯಸಂಗತಿಯೆಂದು, ಹೊಗಳಿ ಹಾಡಿದರು.
ಅಧ್ಯಕ್ಷರಾದ ಭಾ.ಮ.ಹರೀಶ್ ರವರು ಮಾತನಾಡುತ್ತ, ಹಿರಿಯ ನಿರ್ಮಾಪಕರಾದ ಡಾ. ಕಶ್ಯಪ್ ದಾಕೋಜುರವರು ತಾವು ಬರೆದ ಈ ಚಲನಚಿತ್ರ ಕಥೆಯ ಬಿಡುಗಡೆಯನ್ನು ಈ ವಾಣಿಜ್ಯ ಮಂಡಲಿಯಲ್ಲಿ ಬಿಡುಗಡೆ ಮಾಡುತ್ತಿರುವು ನಮಗೆ ಹೆಮ್ಮೆಯ ವಿಷಯವೆಂದು, ಇನ್ನು ಮುಂದೆ ಈ ಮಂಡಲಿಯಲ್ಲಿ, ಬರಿ ಚಿತ್ರ ನಿರ್ಮಾಣಗಳಿಗೆ ಸೀಮಿತ ಗೊಳಿಸದೆ, ಇಂತದ ಸತ್ಕಾರ್ಯಗಳಿಗೆ ಪ್ರೋತ್ತ್ಸಾಹಿಸುತ್ತೇವೆಂದು ಭರವಸೆಕೊಟ್ಟರು.

ಪುಸ್ತಕ ರಚಿಸಿದ ಡಾ. ಕಶ್ಯಪ್ ದಾಕೋಜುರವರು ಮಾತನಾಡುತ್ತ, ಮಾನವ ಹುಟ್ಟಿದಾಗಲೆ, ಆತನ ಸಾವಿನ ಮುಹೂರ್ಥವು ತಿಳಿದುಬಿಟ್ಟರೆ ಏನಾಗಬಹುದೆಂಬ ವಿಷಯವನ್ನಿಟ್ಟುಕೊಂಡು ಹೆಣೆದಿರುವ ಕಥೆಯಿದು. ಅಮೆರಿಕಾದಲ್ಲಿ ಸೈಂಟಿಸ್ಟ್ ಆಗಿ ಉದ್ಯೋಗದಲ್ಲಿರುವ ಬ್ರಹ್ಮ, ಹಲವಾರು ಪ್ರಾಣಿಗಳ ಸಂಶೋಧನೆಯಿಂದ ಮಾನವನ ಸಾವಿನ ದಿನ, ಘಳಿಗೆಗಳನ್ನು ಕಂಡುಕೊಳ್ಳುತ್ತಾನೆ. ಮಾನವರಮೇಲೆ ಈ ಪ್ರಯೋಗಕ್ಕಾಗಿ ತನ್ನ ತಂದೆಯವರನ್ನೆ ವಸ್ತುವಾಗಿಟ್ಟುಕೊಳ್ಳುವ ಸಂಧರ್ಭಬಂದು, ತನ್ನ ಮಗನಿಂದಲೆ, ತನ್ನ ತಂದೆಯ ಸಾವಿನ ಮುಹೂರ್ಥ ಇಟ್ಟಾಗ ನಡೆಯುವ ಸನ್ನಿವೇಶಗಳ ಈ ನನ್ನ ಪ್ರಯತ್ನದಲ್ಲಿ, suspense, emotions, comedy, humour, human relationships, friendship, philosophy, character ನಂತಹ ಹಲವಾರು ವಿಶೇಷತೆಗಳಿಂದ ಹೆಣೆಯಲ್ಪಟ್ಟಿದೆ.
ಇದರಲ್ಲಿನ ಪಾತ್ರಧಾರಿಗಳ ಬಾಯಿಂದಲೆ ಅವರವರ ಪಾತ್ರಗಳಿಗೆ ತಕ್ಕಂತೆ ಭಾಷಾಪ್ರಯೋಗ ಮಾಡಿರುವುದರಿಂದ, ಆಆ ಪಾತ್ರಗಳಿಗೆ ಜೀವತುಂಬಿದಹಾಗಿದೆ. ಇದರಲ್ಲಿ ನಿರ್ಮಿಸಿದ ಎಲ್ಲ ಪಾತ್ರಗಳು ತಮ್ಮದೆ ಆದ ವಿಶೇಷತೆಗಳಿಂದ ಕೂಡಿ, ತಮ್ಮತನವನ್ನು ಉಳಿಸಿಕೊಂಡು ಸಾಗುತ್ತದೆ. ಇದೊಂದು ಹೊಸ ಪ್ರಯೋಗ ಎನ್ನಬಹುದು ಎಂದು ಹೇಳಿದರು.
ಇದೊಂದು ಕಾಲ್ಪನಿಕ ಕಥೆಯಾದರು, ಇದೇ ನಿಜವಾದರೆ…….. ಮುಂದೆ ಆಗಬಹುದೇನೊ…. ಈ ಕಲಿಯುಗದಲ್ಲಿ ಆಗಬಾರದ್ದೇನು ಇಲ್ಲವಲ್ಲ !
