ರಿಚ್ಚಿ(ಹೇಮಂತ್ ಕುಮಾರ್) ನಾಯಕನಾಗಿ ನಟಿಸಿ, ನಿರ್ದೇಶಿಸುತ್ತಿರುವ “ರಿಚ್ಚಿ” ಚಿತ್ರದಲ್ಲಿ “ಟಗರು” ಖ್ಯಾತಿಯ ಮಾನ್ವಿತ ಕಾಮತ್ ನಟಿಸುತ್ತಿದ್ದಾರೆ.
ಇದನ್ನೂ ಓದಿ ಯುವ ಪ್ರತಿಭೆ ಜೊತೆ ಕೈ ಜೋಡಿಸಿದ ನಿರೂಪ್ ಭಂಡಾರಿ…ಜನವರಿಯಿಂದ ಶೂಟಿಂಗ್ ಚಾಲು
ಖ್ಯಾತ ಗಾಯಕ ಸೋನು ನಿಗಮ್ ಹಾಡಿರುವ, ಅಗಸ್ತ್ಯ ಅವರು ಸಂಗೀತ ಸಂಯೋಜಿಸಿರುವ “ಸನಿಹ ನೀ ಇರುವಾಗ” ಎಂಬ ಹಾಡಿಗೆ ಮಾನ್ವಿತ ಹೆಜ್ಜೆ ಹಾಕಲಿದ್ದಾರೆ. ಜೊತೆಗೆ ಕೆಲವು ಮಾತಿನ ಭಾಗದ ಸನ್ನಿವೇಶಗಳಲ್ಲೂ ಅವರು ಅಭಿನಯಿಸಲಿದ್ದಾರೆ ಎಂದು ರಿಚ್ಚಿ ತಿಳಿಸಿದ್ದಾರೆ.ಅಗಸ್ತ್ಯ ಕ್ರಿಯೇಷನ್ಸ್ ಲಾಂಛನದಲ್ಲಿ ವೆಂಕಟಾಚಲಯ್ಯ ಅವರು ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ರಾಕೇಶ್ ರಾವ್ ಅವರ ಸಹ ನಿರ್ಮಾಣವಿದೆ.
ಇದನ್ನೂ ಓದಿ ಸಂಗೀತ ಭಟ್ ಹಾಗೂ ಸುದರ್ಶನ್ ರಂಗಪ್ರಸಾದ್ ಧ್ವನಿಯಲ್ಲಿ ಮೂಡಿಬಂದಿದೆ “ಆಪರೇಷನ್ ಡಿ” ಚಿತ್ರದ ಟೀಸರ್ * ..
“ರಿಚ್ಚಿ” ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಒಂದು ಹಾಡು ಹಾಗೂ ಕೆಲವು ಮಾತಿನ ಭಾಗದ ಚಿತ್ರೀಕರಣ ಮಾತ್ರ ಬಾಕಿಯಿದೆ. ಅಜಿತ್ ಕುಮಾರ್ ಅವರ ಛಾಯಾಗ್ರಹಣ “ರಿಚ್ಚಿ” ಚಿತ್ರಕ್ಕಿದೆ.