ಸೆಲೆಬ್ರಿಟಿ ಸ್ಟಾರ್‌ಗಳ ಲೈಫ್ ಬಗ್ಗೆ ಅವರ ಅಭಿಮಾನಿಗಳಿಗೆ ಸಹಜವಾಗಿಯೇ ಒಂದಷ್ಟು ಕುತೂಹಲಗಳಿರುತ್ತದೆ. ತೆರೆಯ ಮುಂದೆ ಮಿಂಚುವ ತಮ್ಮ ನೆಚ್ಚಿನ ಸೆಲಬ್ರಿಟಿಗಳು ತೆರೆಯ ಹಿಂದೆ ಹೇಗಿರುತ್ತಾರೆ ಎಂಬ ಒಂದಷ್ಟು ಕುತೂಹಲಗಳು ಅಭಿಮಾನಿಗಳನ್ನು ಸದಾ ಕಾಡುತ್ತಲೇ ಇರುತ್ತವೆ. ಇನ್ನು ಸ್ಲಿಮ್ ಅಂಡ್ ಫಿಟ್ ಆಗಿರುವ ತಮ್ಮ ನೆಚ್ಚಿನ ಸ್ಟಾರ್‌ಗಳು ಏನು ತಿಂತಾರೆ, ಯಾವ ಅಡುಗೆ ಇಷ್ಟಪಡುತ್ತಾರೆ, ಅಡುಗೆ ಬಗ್ಗೆ ಅವರಿಗೆಷ್ಟು ಗೊತ್ತು, ಯಾವ ಫುಡ್ ಅವರಿಗೆ ಫೇವರೆಟ್ ಎಂಬ ಕುತೂಹಲವು ಅಭಿಮಾನಿಗಳಲ್ಲಿರುತ್ತದೆ. ಅಭಿಮಾನಿಗಳ ಈ ಕುತೂಹಲವನ್ನು ಕೊಂಚ ಮಟ್ಟಿಗೆ ತಣಿಸುವ ಅಂಕಣವೇ ‘ಚಿತ್ತಾರ ಸ್ಟಾರ್ ಕಿಚನ್’. ಈ ಬಾರಿಯ ‘ಚಿತ್ತಾರ ಸ್ಟಾರ್ ಕಿಚನ್’ನ ಸ್ಟಾರ್ ಸ್ಯಾಂಡಲ್‌ವುಡ್‌ನ ಚೆಲುವೆ, ಟಗರು ಪುಟ್ಟಿ ಮಾನ್ವಿತಾ ಹರೀಶ್
ಅಮ್ಮನ ಕೈ ಅಡುಗೆ ಅಂದರೇ ಮಾನ್ವಿತಾಗೆ ಅಚುಮೆಚ್ಚು. ಈಗಲೂ ಅಮ್ಮನ ಕೈ ರುಚಿಯನ್ನು ನೆನೆದು ಭಾವುಕರಾಗುವ ಇವರಿಗೆ, ಅಮ್ಮ ಮಾಡುವ ಎಲ್ಲಾ ಕೊಂಕಣಿ ಶೈಲಿಯ ಅಡುಗೆಗಳು ಪ್ರಾಣ. ಅದರಲ್ಲೂ ಸಾಂಬ್ರಾಣಿ ಗಟ್ಟಿ ಮತ್ತು ಬಸಲೆ ಸಾಂಬಾರು ಅಂದರೇ ಇವರಿಗೆ ಚಿಕ್ಕಂದಿನಿAದಲೂ ಅಚು ಮೆಚ್ಚು. ಹಸಿ ತರಕಾರಿಗಳು, ತಾಜಾ ಹಣ್ಣಿನ ರಸ, ನೆನೆಸಿಟ್ಟ ಕಾಳುಗಳು ಪ್ರತಿದಿನ ಇವರ ಊಟದ ಒಂದು ಭಾಗವಾಗಿರುತ್ತದೆ. ಅದಷ್ಟು ಮಸಾಲಾ ಪದಾರ್ಥಗಳನ್ನು ದೂರವಿಡುವ ಇವರು, ತೆಂಗಿನ ಎಣ್ಣೆಯಲ್ಲಿ ಕರಿದ ಹಲಸಿನಕಾಯಿ ಚಿಪ್ಸ್, ಬಾಳೆ ಕಾಯಿ ಚಿಪ್ಸ್ಗಳನ್ನು ಸ್ನಾಕ್ಸ್ ರೂಪದಲ್ಲಿ ಉಪಯೋಗಿಸುತ್ತಾರೆ. ರುಚಿಗಿಂತ ಆರೋಗ್ಯಕರ ಆಹಾರ ಪದಾರ್ಥಗಳನ್ನು ಬಳಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ ಅಭ್ಯಾಸ ಅನ್ನುವ ಇವರು, ಅಮ್ಮ ಮಾಡುವ ಮೀನು ಸಾರು, ಕೋಳಿ ಸಾರನ್ನು ಇಷ್ಟ ಪಟ್ಟು ಚಪ್ಪರಿಸುತ್ತಿದ್ದರು. ಆದರೀಗ, ಆದಷ್ಟು ಸಸ್ಯಾಹಾರವನ್ನಷ್ಟೇ ಉಪಯೋಗಿಸುವ ಮಾನ್ವಿತಾ, ಎಲ್ಲಾ ರೀತಿಯ ಅಡುಗೆ ಮಾಡುವುದರಲ್ಲೂ ಎತ್ತಿದ ಕೈ. ಅದರಲ್ಲೂ ಇವರು ಮಾಡುವ ಜೀರಾ ರೈಸ್, ಚಿಕನ್ ಮತ್ತು ಮಟನ್ ಅಡುಗೆಗಳು ಮನೆ ಮಂದಿಗೆಲ್ಲಾ ಹಾಟ್ ಫೇವರೇಟ್.
ಧ್ಯಾನ, ಯೋಗ ಮತ್ತು ಪ್ರತಿದಿನದ ಜಿಮ್ ವರ್ಕ್ಔಟ್ ಇವರ ಫಿಟ್‌ನೆಸ್‌ನ ಸೀಕ್ರೆಟ್. ಪ್ರತಿ ದಿನ ಮುಂಜಾನೆ ನಾಲ್ಕಕ್ಕೇ ಎದ್ದು ಧ್ಯಾನದ ಮೂಲಕ ತಮ್ಮ ದಿನಚರಿಯನ್ನು ಆರಂಭಿಸುವ ಇವರ ದಿನಚರಿಯೇ ಹಲವರಿಗೆ ಪ್ರೇರಣೆಯಾಗಬಲ್ಲುದು. ಅತೀ ಕಡಿಮೆ ಸಮಯದಲ್ಲಿ ಹೆಚ್ಚಿನ ಫಲಿತಾಂಶವನ್ನು ಬಯಸಿ ತಮ್ಮ ದೇಹಕ್ಕೆ ಹೊಂದಿಕೆಯಾಗದ ಡಯಟ್ ಪಾಲಿಸುವುದು ದೇಹಕ್ಕೆ ಮತ್ತು ಮನಸ್ಸಿಗೆ ಒತ್ತಡ ನೀಡಬಲ್ಲುದು ಅನ್ನುವ ಇವರು, ತಮ್ಮ ದೇಹಕ್ಕೆ ಒಪ್ಪುವ ಸಾಂಪ್ರದಾಯಿಕ ಆಹಾರ ಪದ್ಧತಿ ಮತ್ತು ದೇಹ ಪೃಕೃತಿಗನುಗುಣವಾದ ವ್ಯಾಯಾಮವನ್ನು ರೂಢಿಸಿಕೊಳ್ಳುವುದಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಮನೆಯಲ್ಲದೆ ಹೊರಗಡೆಯ ಊಟ ತಿಂಡಿಗಳನ್ನು ಇಷ್ಟಪಡದ ಇವರು, ಸಾಧ್ಯವಾದಷ್ಟೂ ಸೆಟ್‌ಗೂ ಮನೆ ಊಟ ಕೊಂಡೊಯ್ಯುತ್ತಾರೆ.
ಸಿನಿಮಾ, ಆರೋಗ್ಯ, ನಿಯಮಿತ ವ್ಯಾಯಾಮ, ಉತ್ತಮ ಆಹಾರ.. ಇವೆಲ್ಲದ್ದಕ್ಕೂ ಒಂದಕ್ಕೊAದು ಸಂಬAಧವಿದೆ. ನಾವು ಯಾವ ರೀತಿಯ ಆಹಾರವನ್ನು ಸೇವಿಸುತ್ತೇವೆಯೋ ನಮ್ಮ ಯೋಚೆಗಳೂ ಅದೇ ರೀತಿಯಲ್ಲಿರುತ್ತದೆ. ನಮ್ಮ ಮನಸ್ಸಿನ ಮೇಲೆ ನಾವು ಬಳಸುವ ಆಹಾರ ಸಾಕಷ್ಟು ಪರಿಣಾಮ ಬೀರುತ್ತದೆ. ನಮ್ಮ ಪ್ರತಿ ದಿನದ ದಿನಚರಿ ನಮ್ಮ ಗುರಿಯನ್ನು ತಲುಪುವ ಒಂದೊAದು ಪ್ರಮುಖ ಹೆಜ್ಜೆಗಳಾಗಿರುತ್ತವೆ. ಆದುದರಿಂದ ಪ್ರತಿಯೊಂದು ದಿನವೂ ಅತ್ಯಮೂಲ್ಯವಾದುದು ಎಂದಿದ್ದಾರೆ.