ನಟಿ ಮಾನ್ವಿತಾ ಕಾಮತ್ ಮದುವೆ ಇಂದು ಚಿಕ್ಕಮಗಳೂರಿನ ಕಳಸದಲ್ಲಿ ನೆರವೇರಿದೆ. ಮೈಸೂರು ಹುಡುಗ ಅರುಣ್ ಕುಮಾರ್ ಜೊತೆ ಇಂದು ಅವರು ಸಪ್ತಪದಿ ತುಳಿದಿದ್ದಾರೆ. ಎರಡು ಕುಟುಂಬದ ಸದಸ್ಯರು ಮತ್ತು ಸಿನಿಮಾ ರಂಗದ ಗಣ್ಯರು ಹಾಗೂ ಆಪ್ತರು ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು.
ನಿನ್ನೆ ನವಜೋಡಿಯ ಅರಿಶಿನ ಶಾಸ್ತ್ರ, ಮೆಹಂದಿ ಮತ್ತು ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದೆ. ಚಿಕ್ಕಮಗಳೂರಿನ ಕಳಸದಲ್ಲಿ ಮದುವೆಯ ಶಾಸ್ತ್ರಗಳು ನಡೆಯುತ್ತಿವೆ. ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ನವಜೋಡಿ ನೇರಳೆ ಬಣ್ಣದ ಧಿರಿಸಿನಲ್ಲಿ ಮಿಂಚಿದ್ದರು. ಮಾನ್ವಿತಾ ಮದುವೆ ಸಂಭ್ರಮದಲ್ಲಿ ನಿಧಿ ಸುಬ್ಬಯ್ಯ, ಶ್ರುತಿ ಹರಿಹರನ್, ರಿಲಾಕ್ಸ್ ಸತ್ಯ ನಟ ಪ್ರಭು ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಅಂದಹಾಗೆ, ಮಾನ್ವಿತಾ ಮತ್ತು ಅರುಣ್ ಅವರದ್ದು ಅರೇಂಜ್ ಮ್ಯಾರೇಜ್ ಆಗಿದ್ದು, ಅಮ್ಮ ನೋಡಿದ ವರನನ್ನೇ ಮಾನ್ವಿತಾ ಮದುವೆಯಾಗುತ್ತಿದ್ದಾರೆ. ನನ್ನ ಮದುವೆ ನೋಡೋದು ಅಮ್ಮನ ಕನಸಾಗಿತ್ತು. ಅದರಂತೆಯೇ ಮದುವೆ ನೆರವೇರುತ್ತಿದೆ ಎನ್ನುತ್ತಾರೆ ಮಾನ್ವಿತಾ. ನನ್ನ ಅಮ್ಮ ನನ್ನ ಮದುವೆ ಪ್ರೊಫೈಲ್ ಅನ್ನು ನಮ್ಮ ಸಮುದಾಯದ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳುತ್ತಿದ್ದರು.