Sandalwood Leading OnlineMedia

“ಮಿಸ್ ಗೈಡ್” ಮಾಡಿದ್ದಾರೆ ಮಂಜುಕವಿ.

ಟೀಸರ್ ಬಿಡುಗಡೆ ಮಾಡಿ ಶುಭಕೋರಿದ ಡಾ||ವಿ.ನಾಗೇಂದ್ರ ಪ್ರಸಾದ್ .

ಸೀಟಡೀಲ್ ಫಿಲಂಸ್ ಹಾಗೂ ರಾಜ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಾಗರಾಜ್ ಹಾಗೂ ಸುಬ್ಬು ನಿರ್ಮಿಸಿರುವ ಮಿಸ್ ಗೈಡ್ ಚಿತ್ರಕ್ಕೆ ಮಂಜುಕವಿ ಕಥೆ, ಚಿತ್ರಕಥೆ, ಸಾಹಿತ್ಯ ಹಾಗೂ ಸಂಭಾಷಣೆ ಬರೆದು, ಸಂಗೀತವನ್ನು ನೀಡಿರುವ “ಮಿಸ್ ಗೈಡ್” ಚಿತ್ರದ ಟೀಸರ್ ಇತ್ತೀಚಿಗೆ ಬಿಡುಗಡೆಯಾಯಿತು.

 

 

ಖ್ಯಾತ ಸಾಹಿತಿ ಡಾ||ವಿ.ನಾಗೇಂದ್ರ ಪ್ರಸಾದ್ ಟೀಸರ್ ಬಿಡುಗಡೆ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ಗಗನ್ ರಾಜ್ ಕೂಡ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಂತರ ಚಿತ್ರತಂಡದವರು “ಮಿಸ್ ಗೈಡ್” ಬಗ್ಗೆ ಮಾಹಿತಿ ನೀಡಿದರು.

 

ಇದು ನಾನು ನಿರ್ದೇಶಿಸಿರುವ ಎರಡನೇ ಚಿತ್ರ. ನನ್ನ ಕಥೆ ಮೆಚ್ಚಿ ನಾಗರಾಜ್ ಹಾಗೂ ಸುಬ್ಬು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಹಾವು – ಮುಂಗುಸಿಯ ಕಥೆಯನ್ನು ಆದರ್ಶವಾಗಿಟ್ಟುಕೊಂಡು ಈ ಕಥೆ ಹೆಣೆಯಲಾಗಿದೆ.ಮುಂಗುಸಿಯೊಂದು ಮಗುವನ್ನು ಕಾಪಾಡಲು ಹಾವಿನೊಂದಿಗೆ ಸೆಣೆಸಾಡುತ್ತದೆ.

 

ಇದನ್ನು ಓದು :ಯಶ್‌ ಸಿನಿಮಾದಲ್ಲಿ ಕರೀನಾ ಕಪೂರ್ ಜೊತೆ ಮತ್ತೊಬ್ಬ ನಾಯಕಿ..!

 

ಆದರೆ ಮುಂಗುಸಿಯ ಬಾಯಲ್ಲಿ ರಕ್ತ ನೋಡಿದ ಮಗುವಿನ ತಾಯಿ ಮುಂಗುಸಿ ತನ್ನ ಮಗುವಿಗೆ ಏನೋ ಮಾಡಿದೆ ಅಂದುಕೊಳ್ಳುತ್ತಾಳೆ. ಈ ಕಥೆಯೇ ನಮ್ಮ ಚಿತ್ರಕ್ಕೆ ಸ್ಪೂರ್ತಿ. ಇನ್ನು ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಎಲ್ಲಾ ಮುಕ್ತಾಯವಾಗಿದ್ದು, ಚಿತ್ರ ತೆರೆಗೆ ಬರುವ ಹಂತದಲ್ಲಿದೆ.

ಚಿತ್ರತಂಡದ ಸಹಕಾರದಿಂದ “ಮಿಸ್ ಗೈಡ್” ಅಂದುಕೊಂಡ ಹಾಗೆ ಬಂದಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದೆ. ನಾನೇ ಗೀತರಚನೆ ಮಾಡಿ ಸಂಗೀತ ನೀಡಿದ್ದೀನಿ. ತಾಯಿ – ಮಗನ ಸೆಂಟಿಮೆಂಟ್ ಹಾಡನ್ನು ಜನಪ್ರಿಯ ಗಾಯಕ ಗುರುಕಿರಣ್ ಹಾಡಿದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಮಂಜು ಕವಿ.

 

ಚಿತ್ರದ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾಗಿರುವುದಾಗಿ ನಿರ್ಮಾಪಕರಾದ ನಾಗರಾಜ್ ಹಾಗೂ ಸುಬ್ಬು ಹೇಳಿದರು. ಚಿತ್ರದ ಪ್ರಮುಖ ಪಾತ್ರದಲ್ಲಿ ನಟನೆ ಕೂಡ ಮಾಡಿರುವುದಾಗಿ ಸುಬ್ಬು ತಿಳಿಸಿದರು.

ಚಿತ್ರದ ಕಥೆ ಹಾಗೂ ನನ್ನ ಪಾತ್ರ ಎರಡು ಚೆನ್ನಾಗಿದೆ ಎಂದರು ನಾಯಕ ನಿತೀಶ್ ವಿನಯ್ ರಾಜ್. ಮತ್ತು ಸುಬ್ಬು,ಫರೀನ್ ಹಾಗೂ ರಕ್ಷ ಈ ಚಿತ್ರದ ನಾಯಕಿಯರು.

ಇದನ್ನು ಓದು :‘ಓಂಕಾಳಿ’ ಮೂಲಕ ರೌಡಿಸಂ ಕಥೆ ಹೇಳಲು ಬರ್ತಿದ್ದಾರೆ ಸಿಂಹ-ಪ್ರತಾಪ್ ಸಿಂಹ..!

ನಟರಾದ ಜಗದೀಶ್ ಕೊಪ್ಪ, ಪ್ರಾಣೇಶ್, ಹಿನ್ನೆಲೆ ಸಂಗೀತ ನೀಡಿರುವ ವಿನು ಮನಸು ಹಾಗೂ ಸಾಹಸ ನಿರ್ದೇಶಕ ಮಾಸ್ ಮಾದ ಮುಂತಾದವರು ಚಿತ್ರದ ಕುರಿತು ಮಾತನಾಡಿದರು. ಸಹ ನಿರ್ದೇಶಕರಾಗಿ ಎಸ್‌ ಜೆ ಸಂಜಯ್,
ಸಂಗೀತ ಶೆಟ್ಟಿ ಕಾರ್ಯ ನಿರ್ವಹಿಸಿದ್ದಾರೆ. ಸಾಕಷ್ಟು ರಂಗಭೂಮಿ ಕಲಾವಿದರೆ ಈ ಚಿತ್ರದಲ್ಲಿ ನಟಿಸಿರುವುದು ವಿಶೇಷ.

ಇದನ್ನು ಓದು :ನಟಿ ತಪಸ್ವಿ ಪೂಣಚ್ಚಗೆ ಅಕ್ಕಿರೊಟ್ಟಿ ಮೇಲೊಂದಿಷ್ಟು ಚಿಕನ್ ಕರಿ ಇದ್ರೆ ಸಾಕು..!

 

Share this post:

Related Posts

To Subscribe to our News Letter.

Translate »