ಮಂಡ್ಯ ಗ್ರಾಮೀಣ ಸೊಗಡಿನ ಕಥೆ ಹೇಳುವ ಮಂಡ್ಯ ಹೈದ ಚಿತ್ರಕ್ಕೆ ಬುಧವಾರ ಬೆಂಗಳೂರಿನ ಬಂಡಿ ಮಾಂಕಾಳಮ್ಮ ದೇವಸ್ಥಾನದಲ್ಲಿ ಮುಹೂರ್ತ ಸಮಾರಂಭ ನಡೆಯಿತು. ಮಾಜಿ ಪೋಲೀಸ್ ಕಮೀಷನರ್ ಭಾಸ್ಕರರಾವ್, ಶಾಸಕ ರವಿ ಸುಬ್ರಮಣ್ಯ ಅವರುಗಳು ಮುಖ್ಯಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಯುವನಟ ಅಭಯ್ ಚಂದ್ರಶೇಖರ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದಲ್ಲಿ ಕಿರುತೆರೆನಟಿ ಭೂಮಿಕಾ ನಾಯಕಿ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಮನಸಾಗಿದೆ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸಿದ್ದ, ಅಭಯ್ ಎರಡನೇ ಚಿತ್ರದಲ್ಲಿ ಮಂಡ್ಯ ಹೈದನಾಗಿ ಹೊರಹೊಮ್ಮಿದ್ದಾರೆ. ಈ ಚಿತ್ರವನ್ನು ಅಭಯ್ ತಂದೆ ಚಂದ್ರಶೇಖರ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ, ಅಲ್ಲದೆ ಈ ಚಿತ್ರಕ್ಕೆ ವಿ.ಶ್ರೀಕಾಂತ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಕೊನೆಯ ಹಂತದ ಚಿತ್ರೀಕರಣದಲ್ಲಿ ‘ಧೀರ ಭಗತ್ ರಾಯ್’ – ಫೆಬ್ರವರಿಯಲ್ಲಿ ಚಿತ್ರದ ಆಡಿಯೋ ಹಾಗೂ ಟ್ರೇಲರ್ ಬಿಡುಗಡೆ.
ಮುಹೂರ್ತದ ನಂತರ ಚಿತ್ರದ ಕುರಿತಂತೆ ಮಾತನಾಡಿದ ನಿರ್ಮಾಪಕ ಚಂದ್ರಶೇಖರ್, ನಮ್ಮ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ೫ನೇ ಚಿತ್ರ ಹಾಗೂ ಮಗನ ಜೊತೆ ಮಾಡುತ್ತಿರುವ ದ್ವಿತೀಯ ಚಿತ್ರವಿದು. ಮನಸಾಗಿದೆ ಚಿತ್ರದ ನಂತರ ಅಭಯ್‌ಗೆ ಬೇರೆ ಬೇರೆ ಚಿತ್ರಗಳಿಂದ ಆಫರ್ ಬಂದರೂ, ಆತನಿಗೆ ಒಪ್ಪುವಂಥ ಕ್ಯಾರೆಕ್ಟರ್ ಇರಲಿಲ್ಲ, ಹಾಗಾಗಿ ನಾನೇ ಈ ಚಿತ್ರವನ್ನು ಪ್ರೊಡ್ಯೂಸ್ ಮಾಡಬೇಕಾಯಿತು. ಈ ಚಿತ್ರಕ್ಕಾಗಿ ತುಂಬಾ ಪ್ಲಾನ್ಡ್ ಆಗಿ ಪ್ರಿಪರೇಶನ್ ಮಾಡಿಕೊಂಡಿದ್ದೇವೆ. ಇಂದು ಮುಹೂರ್ತ ನಡೆದಿದೆ. ಚಿತ್ರಕ್ಕೆ ಶೇ.೮೦ರಷ್ಟು ಮಂಡ್ಯ ಭಾಗದಲ್ಲಿ ಚಿತ್ರೀಕರಣ ನಡೆಸಿದರೆ, ಉಳಿದ ಶೇ.೨೦ರಷ್ಟು ಭಾಗವನ್ನು ಬೆಂಗಳೂರಿನ ಸುತ್ತ ಮುತ್ತ ಚಿತ್ರೀಕರಣ ನಡೆಸಲಿದ್ದೇವೆ. ವಿಶೇಷವಾಗಿ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ೧೫ ಜನ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಫಸ್ಟ್ ಹಾಫ್ ಕಾಮಿಡಿ ಹಾಗೂ ಲೈವಿಯಾಗಿ ಸಾಗಿದರೆ, ಸೆಕೆಂಡ್‌ಹಾಫ್ ನಲ್ಲಿ ಬೇರೆ ಥರ ಸಾಗುತ್ತದೆ, ನಾಯಕ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಯಾರಿಗೂ ಹೆದರದಂಥ ಹುಡುಗ, ಆತ ತನ್ನ ಪ್ರೀತಿಗಾಗಿ ಏನೇನೆಲ್ಲ ಮಾಡುತ್ತಾನೆ, ಪ್ರೀತಿಗೋಸ್ಕರ ಪ್ರಾಣ ಕೊಡುತ್ತಾನಾ, ಅಥವಾ ಪ್ರಾಣ ತೆಗೀತಾನಾ ಎನ್ನುವುದೇ ಮಂಡ್ಯ ಹೈದ ಚಿತ್ರದ ಕಥೆ. ಯೂಥ್ ಅಲ್ಲದೆ ಫ್ಯಾಮಿಲಿಗೆ ಮೆಸೇಜ್ ಇರುವ ಚಿತ್ರವಿದು. ನನ್ನ ಇಪ್ಪತ್ತು ವರ್ಷಗಳ ಗೆಳೆಯ ರವಿವರ್ಮ ಅವರು ಫಸ್ಟ್ ಫೈಟ್‌ನ್ನು ಕಂಪೋಜ್ ಮಾಡುತ್ತಿದ್ದಾರೆ. ಅಲ್ಲದೆ ಮಗನನ್ನು ಚಿತ್ರರಂಗಕ್ಕಾಗಿ ಬೇರೆಯದೇ ರೀತಿಯಲ್ಲಿ ತಯಾರು ಮಾಡುತ್ತಿದ್ದು, ಶೂಟಿಂಗ್ ಸಿದ್ದತೆ ಮಾಡಿಕೊಂಡಿದ್ದೇವೆ ಎಂದು ಹೇಳಿದರು.
ಒಂದು ಸಿನಿಮಾ ಕಥೆ ಹೇಳಲು ಬರ್ತಿದೆ ‘ಫಸ್ಟ್ ಡೇ ಫಸ್ಟ್ ಶೋ’ – ಗಿರೀಶ್.ಜಿ ನಿರ್ದೇಶನದ ಸಿನಿಮಾ
ನಿರ್ದೇಶನ ಶ್ರೀಕಾಂತ್ ಮಾತನಾಡಿ, ನನ್ನ ನಿರ್ದೇಶನದ ಎರಡನೇ ಚಿತ್ರವಿದು. ಕಮರ್ಷಿಯಲ್ ಎಂಟರ್‌ಟೈನರ್ ಹಾಗೂ ಲವ್ ಜೊತೆ ಫ್ಯಾಮಿಲಿ ಸೆಂಟಿಮೆಂಟ್ ಕೂಡ ಚಿತ್ರದಲ್ಲಿದೆ. ಎಲ್ಲಾ ರೀತಿಯ ಜಾನರ್ ಇರುವ ಫುಲ್ ಪ್ಯಾಕೇಜ್ಡ್ ಚಿತ್ರವಿದು, ಚಿತ್ರಕ್ಕೆ ನಿರ್ಮಾಪಕರ ಇನ್‌ವಾಲ್‌ಮೆಂಟ್ ಜಾಸ್ತಿ ಇರುವುದರಿಂದ ನನ್ನ ಕೆಲಸ ಕಡಿಮೆಯಾಗಿದೆ, ಟೆಕ್ನಿಕಲಿ ಹೆಚ್ಚು ಗಮನ ಹರಿಸಲು ಅವಕಾಶ ಸಿಕ್ಕಿದೆ. ಚಿತ್ರದ ೫ ಹಾಡುಗಳಿಗೆ ಸುರೇಂದ್ರನಾಥ್ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಮನುಗೌಡ ಕ್ಯಾಮೆರಾ ವರ್ಕ್ ಮಾಡುತ್ತಿದ್ದಾರೆ ಎಂದು ಹೇಳಿದರು.
ಚಿತ್ರದ ನಾಯಕ ಅಭಯ್ ಮಾತನಾಡುತ್ತ ಹಿಂದೆ ಈ ದೇವಿಯ ಬಳಿ ಬಂದಾಗ ನನ್ನ ಎರಡನೇ ಚಿತ್ರದ ಮುಹೂರ್ತ ಇದೇ ಜಾಗದಲ್ಲಿ ನಡೆಯುವಂತಾಗಲಿ ಎಂದು ಬೇಡಿಕೊಂಡಿದ್ದೆ, ಅದೇರೀತಿ ಈಗ ಇದೇ ಇಲ್ಲೇ ಮುಹೂರ್ತ ನಡೆದಿದೆ. ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಶಿವ, ಆತ ಒಳ್ಳೆಯವರಿಗೆ ಒಳ್ಳೆಯವನು, ಕೆಟ್ಟವರಿಗೆ ಕೆಟ್ಟವನು. ಆಡಿಯನ್ಸ್ ಕೇಳುವಂಥ ಎಲ್ಲಾ ಕಂಟೆಂಟ್ ಚಿತ್ರದಲ್ಲಿದೆ. ನಾನು ಕೂಡ ಮಂಡ್ಯ ಹೈದನ ಪಾತ್ರಕ್ಕಾಗಿ ತುಂಬಾ ಹೋಮ್ ವರ್ಕ್ ಮಾಡಿಕೊಂಡಿದ್ದೇನೆ. ಪಕ್ಕಾ ಮಂಡ್ಯ ಸೊಗಡಿನ ಭಾಷೆ ನಮ್ಮ ಚಿತ್ರದಲ್ಲಿದೆ ಎಂದು ಹೇಳಿದರು. ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಭೂಮಿಕಾ ಮಾತನಾಡುತ್ತ ನಾನು ಗೀತಾ, ಪುಟ್ಟಕ್ಕನ ಮಕ್ಕಳು ಸೀರಿಯಲ್‌ಗಳಲ್ಲಿ ಅಭಿನಯಿಸಿದ್ದೆ. ಈಗ ಹಳ್ಳಿ ಹುಡುಗಿಯಾಗಿ ನಾನೀ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನಾಯಕ ಮಾಡುವ ಕೆಲಸಗಳಿಗೆ ಸಪೋರ್ಟಿನ್ ಆಗಿ ನಾನಿರುತ್ತೇನೆ ಎಂದು ಹೇಳಿದರು, ನಟ ಬಲ ರಾಜವಾಡಿ ಹಾಗೂ ಸುನಂದ ನಾಯಕಿಯ ತಂದೆ, ತಾಯಿಯಾಗಿ ನಟಿಸುತ್ತಿದ್ದಾರೆ, ಅಲ್ಲದೆ ನಿರ್ಮಾಪಕ ಚಂದ್ರಶೇಖರ್ ಅವರೂ ಸಹ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.