ಇ.ವಿ. ಗಣೇಶ್ ಬಾಬು ನಿರ್ದೇಶನದ ‘ಮಂಚ’ ಚಿತ್ರದ ‘ದೇಗುಲದಿ’ ಎಂಬ ಲಿರಿಕಲ್ ಹಾಡು ಇದೀಗ ಯೂಟ್ಯೂಬ್ನ ಎಂ.ಆರ್.ಟಿ ಮ್ಯೂಸಿಕ್ ಚಾನಲ್ನಲ್ಲಿ ಬಿಡುಗಡೆಯಾಗಿದೆ. ‘ಜಗವೇ ನೀನು’ ಖ್ಯಾತಿಯ ಸಿದ್ ಶ್ರೀರಾಮ್ ಈ ಹಾಡಿಗೆ ಧ್ವನಿಯಾಗಿದ್ದು, ‘ಪುಷ್ಪ’ ಚಿತ್ರದ ಜನಪ್ರಿಯ ಗೀತೆಯಾದ ‘ಶ್ರೀವಳ್ಳಿ’ ಹಾಡಿಗೆ ಕನ್ನಡ ಸಾಹಿತ್ಯ ಬರೆದಿದ್ದ ವರದರಾಜ ಚಿಕ್ಕಬಳ್ಳಾಪುರ, ಈ ಹಾಡಿಗೂ ಸಾಹಿತ್ಯ ರಚಿಸಿದ್ದಾರೆ.
ಯತಿರಾಜ್ ನಿರ್ದೇಶನದಲ್ಲಿ “ಸತ್ಯಂ ಶಿವಂ”
‘ಮಂಚ’ ಎಂಬ ಹೆಸರೇ ಹೇಳುವಂತೆ, ಈ ಚಿತ್ರವು ಒಂದು ಪ್ರತಿಷ್ಠಿತ ಕುಟುಂಬದ ಮೂರು ತಲೆಮಾರಿನವರು ಉಪಯೋಗಿಸಿದ ಒಂದು ಮಂಚದ ಸುತ್ತ ಸಾಗುತ್ತದೆ. ಜನ ಹೇಗೆ ತಮ್ಮ ಸಂಪ್ರದಾಯ ಮತ್ತು ಗುರುತುಗಳನ್ನು ಕ್ರಮೇಣ ಮರೆಯುತ್ತಿದ್ದಾರೆ ಎಂದು ಹೇಳುವ ಪ್ರಯತ್ನ ಮಾಡಿರುವ ಈ ಚಿತ್ರವು ಈಗಾಗಲೇ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು, ಕೆಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ‘ಮಂಚ’ ಒಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು ತಮಿಳಿನಲ್ಲಿ ನಿರ್ಮಾಣಗೊಂಡು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಿಗೆ ಡಬ್ ಆಗಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಸದ್ಯ ಬಿಡುಗಡೆಯಾಗಿರುವ ಈ ಹಾಡನ್ನು ನಾಲ್ಕೂ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಿಂದೆ ‘ಅಮೃತವರ್ಷಿಣಿ’ ಚಿತ್ರದ ಮೂಲಕ ನೆನಪಿನಲ್ಲುಳಿಯುವಂತಹ ಹಾಡುಗಳನ್ನು ಸಂಯೋಜಿಸಿದ್ದ ಸಂಗೀತ ನಿರ್ದೇಶಕ ದೇವ ಅವರ ಪುತ್ರ ಶ್ರೀಕಾಂತ್ ದೇವ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.
ನ್ಯಾಚುರಲ್ ಸ್ಟಾರ್ ನಾನಿ ಮೂವತ್ತನೇ ಚಿತ್ರಕ್ಕೆ ಮೆಗಾ ಸ್ಟಾರ್ ಚಿರಂಜೀವಿ ಸಾಥ್
ಇ.ವಿ. ಗಣೇಶ್ ಬಾಬು ಈ ಚಿತ್ರವನ್ನು ನಿರ್ಮಿಸಿ-ನಿರ್ದೇಶಿಸುವುದರ ಜತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಅವರಿಗೆ ನಾಯಕಿಯಾಗಿ ಸೃಷ್ಟಿ ದಂಗೆ ಅಭಿನಯಿಸಿದ್ದು, ಮಿಕ್ಕಂತೆ ವಿದಾರ್ಥ್ (ಅತಿಥಿ ಪಾತ್ರ), ಮಾಸ್ಟರ್ ನಿಧೀಶ್, ಗೀತಾ ಕೈಲಾಸಂ, ಇಂದಿರಾ ಸೌಂದರ್ ರಾಜನ್, ಸಂಪತ್ ರಾಮ್, ಸಮ್ಮಾಲರ್ ಅಣ್ಣಂ ಮುಂತಾದವರು ತಾರಾಬಳಗದಲ್ಲಿದ್ದಾರೆ. ಕನ್ನಡ ಅವತರಣಿಕೆಗೆ ವರದರಾಜ ಚಿಕ್ಕಬಳ್ಳಾಪುರ, ಸಂಭಾಷಣೆ ಮತ್ತು ಸಾಹಿತ್ಯವನ್ನು ರಚಿಸಿದ್ದಾರೆ. ಮಿಕ್ಕಂತೆ ವೈಡ್ ಆಂಗಲ್ ರವಿಶಂಕರನ್ ಅವರ ಛಾಯಾಗ್ರಹಣ, ಬಿ. ಲೆನಿನ್ ಅವರ ಚಿತ್ರಕಥೆ ಮತ್ತು ಸಂಕಲನ ಈ ಚಿತ್ರಕ್ಕಿದೆ.
https://youtu.be/_XpiIAzpm-4