Sandalwood Leading OnlineMedia

*”ಭಜರಂಗಿ 2″ ಖ್ಯಾತಿಯ ಚೆಲುವರಾಜು ಹಾಗೂ ನಟಿ  ವಿದ್ಯಾವಿಜಯ್ ಅಭಿನಯಿಸಿರುವ “ಮನಸು ಜಾರಿದೆ” ಆಲ್ಬಮ್ ಸಾಂಗ್ ಬಿಡುಗಡೆ* .

 *ಇದೇ ಸಂದರ್ಭದಲ್ಲಿ ಪ್ರಣಯರಾಜ ಶ್ರೀನಾಥ್ ಅವರಿಗೆ ಜೀವಮಾನ ಸಾಧನೆಗಾಗಿ ವಿಶೇಷ ಪ್ರಶಸ್ತಿ ನೀಡಿ ಗೌರವ ಸಮರ್ಪಣೆ‌* .ಭಜರಂಗಿ 2 ಖ್ಯಾತಿಯ ಚೆಲುವರಾಜು ಹಾಗೂ ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಕಲಾವಿದೆಯಾಗಿ  ಗುರುತಿಸಿಕೊಂಡಿರುವ ನಟಿ ವಿದ್ಯಾವಿಜಯ್ ಅಭಿನಯಿಸಿರುವ “ಮನಸು ಜಾರಿದೆ” ಆಲ್ಬಂ ಸಾಂಗ್ ಇತ್ತೀಚೆಗೆ ಬಿಡುಗಡೆಯಾಯಿತು. ಇದೇ ಸಂದರ್ಭದಲ್ಲಿ ಪ್ರಣಯ ರಾಜ ಶ್ರೀನಾಥ್ ಅವರಿಗೆ ಜೀವಮಾನ ಸಾಧನೆಗಾಗಿ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಾಜಿ ಸಚಿವರಾದ ಕೃಷ್ಣಪ್ಪ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಮುಂತಾದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇನ್ನೂ ಓದಿ:Sudeep Exclusive Pictures ; Jimmy Film Title Launch Event

ಇಲ್ಲಿರುವವರೆಲ್ಲ ಬಹಳ ಚಿಕ್ಕವರು. ಈಗಿನ ಪೀಳಿಗೆಯವರು ನನಗೆ ಈ ಪ್ರಶಸ್ತಿ ನೀಡಿ ಗೌರವಿಸಿರುವುದು ತುಂಬಾ ಖುಷಿಯಾಗಿದೆ ಎಂದರು ಪ್ರಣಯರಾಜ ಶ್ರೀನಾಥ್.ವಿದ್ಯಾವಿಜಯ್ ಅವರು ಸಹ “ಮನಸು ಜಾರಿದೆ” ಆಲ್ಬಂ ಸಾಂಗ್ ಕುರಿತು ಹಾಗೂ VIDIS ಎಂಟರ್ಟೈನ್ಮೆಂಟ್ ಮೂಲಕ ಆಯೋಜಿಸಲಾಗಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಇನ್ನೂ ಓದಿ:*”ಲಾಫಿಂಗ್ ಬುದ್ಧ” ಚಿತ್ರದ ಚಿತ್ರೀಕರಣ ಮುಕ್ತಾಯ* ..

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸ್ಮರಣಾರ್ಥ ನಡೆದ ಈ ಸಮಾರಂಭದಲ್ಲಿ ಮಕ್ಕಳಿಗಾಗಿ  ದೇಸಿಶೈಲಿಯ “ದೇಸಿ ನಡಿಗೆ” ಎಂಬ ಫ್ಯಾಶನ್ ಶೋ ಕೂಡ ಆಯೋಜಿಸಲಾಗಿತ್ತು.

Share this post:

Related Posts

To Subscribe to our News Letter.

Translate »