Sandalwood Leading OnlineMedia

ಮನಸ್ಸು ಮತ್ತು ನಗು = ಮನಸ್ಮಿತ

ಮನಸ್ಸು ಮತ್ತು ನಗು = ಮನಸ್ಮಿತ

ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ’ಮನಸ್ಮಿತ’ ಚಿತ್ರವನ್ನು ಅಪ್ಪಣ್ಣಸಂತೋಷ್ ರಚಿಸಿ ನಿರ್ದೇಶನ ಮಾಡಿ, ತಾಯಿ ಸೀತಮ್ಮ.ವಿ.ಟಿ ಹೆಸರಿನೊಂದಿಗೆ ಜಮುನ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಸಹ ನಿರ್ಮಾಪಕರಾಗಿ ದೀಪಿಕಾ.ವಿ.ಎ. ಇದ್ದಾರೆ. ನಿರ್ದೇಶಕರು ಒಮ್ಮೆ ಹೊರಗೆ ಹೋಗಿದ್ದಾಗ ಪುಸ್ತಕವನ್ನು ಓದಿ, ಅದರಿಂದ ಪ್ರೇರಣೆಗೊಂಡು ಕಥೆಯನ್ನು ಬರೆದು, ಅದನ್ನು ಚಿತ್ರರೂಪಕ್ಕೆ ತಂದಿದ್ದಾರೆ. ಮ್ಯೂಸಿಕಲ್ ರೋಮ್ಯಾಂಟಿಕ್ ಥ್ರಿಲ್ಲರ್ ವಿಭಾಗದಲ್ಲಿ ಸಂಗೀತದ ನಾನಾ ಮಜಲುಗಳು ಹಾಗೂ ಪ್ರೇಮ ಕಥೆಯು ಬೆರತಿದ್ದು, ಎರಡು ಕಾಲಘಟ್ಟದಲ್ಲಿ ನಡೆಯುತ್ತದೆ. ಹುಡುಗಿಯ ಪ್ರೀತಿಯನ್ನು ಪಡೆಯಲು ಹೇಗೆ ಸಮರ್ಪಿಸಿಕೊಳ್ಳುತ್ತಾನೆ. ಕುಟುಂಬದಲ್ಲಿ ಆದ ನೋವು, ಕೆಟ್ಟದಾಗಿರುವುದನ್ನು ಹೋಗಲಾಡಿಸಲು ಯಾವ ರೀತಿ ಹೋರಾಡುತ್ತಾನೆ ಎಂಬುದನ್ನು ಮನರಂಜನಾತ್ಮಕವಾಗಿ ತೋರಿಸಲಾಗಿದೆ. ಸೆನ್ಸಾರ್‌ನವರು ಪ್ರಶಂಸೆ ವ್ಯಕ್ತಪಡಿಸಿದ್ದು ಅಲ್ಲದೆ ’ಮನಮಂದಿರದಿ ನೆಲೆಸಿರುವೆ’ ಮತ್ತು ’ಶಿವನ’ ಕುರಿತ ಹಾಡು ಚೆನ್ನಾಗಿ ಮೂಡಿಬಂದಿರುವುದರಿಂದ ಎರಡು ಬಾರಿ ವೀಕ್ಷಿಸಿದ್ದಾರಂತೆ.


ಕಾಲೇಜು ಹುಡುಗನಾಗಿ ಮಡಕೇರಿ ಮೂಲದ ಚರಣ್‌ಗೌಡ ನಾಯಕ. ಹಲವು ಶೇಡ್ಸ್‌ಗಳಲ್ಲಿ ಕಾಣಿಸಿಕೊಳ್ಳುವ ಬೆಂಗಳೂರಿನ ಸಂಜನಾದಾಸ್ ನಾಯಕಿ. ಗಾಯಕನಾಗಿ ಬಾಲಿವುಡ್‌ನ ಅತುಲ್‌ಕುಲಕರ್ಣಿ, ನೃತ್ಯಗಾರ್ತಿಯಾಗಿ ಪಲ್ಲವಿಪುರೋಹಿತ್, ಮನೆಹಾಳು ಮಾಡುವ ರಾಜೇಂದ್ರಕಾರಂತ್, ನಾಯಕನ ತಾಯಿಯಾಗಿ ಶಿಲ್ಪ, ಉಳಿದಂತೆ ಸುಚೇಂದ್ರಪ್ರಸಾದ್, ಮೂಗುಸುರೇಶ್, ಕರಿಸುಬ್ಬು, ವೀಣಾಪೊನ್ನಪ್ಪ, ಸೌಭಾಗ್ಯ, ಪ್ರದೀಪ್‌ಶಾಸ್ತ್ರೀ, ಪ್ರದೀಪ್‌ಪೂಜಾರಿ ನಟಿಸಿದ್ದಾರೆ. ಕೆ.ಕಲ್ಯಾಣ್ ಬರೆದಿರುವ ನಾಲ್ಕು ಹಾಡುಗಳಿಗೆ ಕ್ಲಾಸಿಕಲ್ ಸಂಗೀತವನ್ನು ಒದಗಿಸಿರುವುದು ಹರಿಕಾವ್ಯ. ಈ ಪೈಕಿ ದೇವರ ಹಾಡಿಗೆ ಶಂಕರ್‌ಮಹದೇವನ್ ಧ್ವನಿಯಾಗಿರುವುದು ವಿಶೇಷ. ಛಾಯಾಗ್ರಹಣ ಕೆ.ಎಸ್.ಚಂದ್ರಶೇಖರ್, ಸಂಕಲನ ಮಧುತುಂಬಕೆರೆ, ನೃತ್ಯ ಕಲೈ, ಸಾಹಸ ಕೌರವವೆಂಕಟೇಶ್ ಚಿತ್ರಕ್ಕಿದೆ. ಬೆಂಗಳೂರು, ಮರಳವಾಡಿ, ಕೂರ್ಗ್‌ನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. A2 ಮ್ಯೂಸಿಕ್ ಹಾಡುಗಳ ಹಕ್ಕುಗಳನ್ನು ಪಡೆದುಕೊಂಡಿದೆ.

 

Share this post:

Related Posts

To Subscribe to our News Letter.

Translate »