ಬಿಗ್ ಬಾಸ್ ಸೀಸನ್ 11 ಯಾವಾಗ ಬರುತ್ತೆ ಎಂದು ಕಾಯುತ್ತಿದ್ದ ಜನರಿಗೆ ಇನ್ಮೇಲೆ ಮನರಂಜನೆ ಸಿಗಲಿದೆ. ಬಿಗ್ ಬಾಸ್ ಗೆ ಯಾರೆಲ್ಲಾ ಹೋಗ್ತಾರೆ ಎಂಬ ಕುತೂಹಲಕ್ಕೆ ಕುಚ್ಚ ಸುದೀಪ್ ನಿರೂಪಣೆಯಲ್ಲಿ ಸ್ಪರ್ಧಿಗಳ ಅನಾವರಣವಾಗುತ್ತಿದೆ. ಹೊಸ ಕಾನ್ಸೆಪ್ಟ್ ಬೇರೆ ಇರುವ ಕಾರಣ, ಸ್ವರ್ಗಕ್ಕೆ ಯಾರು ಹೋಗ್ತಾರೆ, ನರಕಕ್ಕೆ ಯಾರು ಹೋಗ್ತಾರೆ ಎಂಬ ಕುತೂಹಲದಿಂದ ಕಾಯುತ್ತಿದ್ದಾರೆ. ಇದರ ನಡುವೆ ಸ್ವರ್ಗದಲ್ಲಾದರೂ ಸರಿ ನರಕದಲ್ಲಾದರೂ ಸರಿ ನಕ್ಕಿ ನಲಿಸುವ ಕ್ಯಾಂಡಿಡೇಟ್ ಒಬ್ಬರು ಬಂದಿದ್ದಾರೆ. ಅವರೇ ಮಾನಸ ಸಂತೋಷ್. ಸ್ಪಾಟ್ ನಲ್ಲಿ ಕೌಂಟರ್ ಕೊಡುವ ಸ್ಪೆಷಲ್ ಟ್ಯಾಲೆಂಟ್ ಇರುವವರು ಮಾನಸ. ತುಕಾಲಿ ಸಂತೋಷ್ ನಗಿಸುವುದಕ್ಕಿಂತಲೂ ವಿಶೇಷವಾಗಿ ನಗಿಸುತ್ತಾರೆ. ಇದೀಗ ಈ ಸೀಸನ್ ನಲ್ಲಿಯೂ ಒಳ್ಳೆ ಹಾಸ್ಯ ಸಿಗುವುದರಲ್ಲಿ ನೋ ಡೌಟ್. ಮಾನಸ ಅವರಿಂದ ಮನೆ ನಗುತ್ತಾ ಇರುತ್ತೆ ಎಂಬುದು ಗ್ಯಾರಂಟಿಯಾಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಮನರಂಜನೆ ನೀಡಿದ್ದು ತುಕಾಲಿ ಸಂತು. ಪತಿಯನ್ನು ನೋಡುವುದಕ್ಕೆಂದು ಬಿಗ್ ಬಾಸ್ ಮನೆಗೆ ಮಾನಸ ಹೋಗಿ ಬಂದಿದ್ದರು. ಬಿಗ್ ಬಾಸ್ ವೇದಿಕೆ ಮೇಲೆ ಮಾನಸ ಕೊಟ್ಟ ಕೌಂಟರ್ ಗೆ ಕಿಚ್ಚ ಸುದೀಪ್ ಅವರೇ ಖುಷ ಪಟ್ಟಿದ್ದರು. ಗಿಚ್ಚಿ ಗಿಲಿಗಿಲಿಯಲ್ಲಿ ಈ ಬಾರಿ ರನ್ನರ್ ಅಪ್ ಕೂಡ ಆಗಿದ್ದರು. ಇದೀಗ ಬಿಗ್ ಬಾಸ್ ಗೆ ಸ್ಟಾರ್ ಆಡಿಯನ್ ಆಗಿ ಬಿಗ್ ಬಾಸ್ ಗೆ ಬಂದಿದ್ದಾರೆ. ಮತ್ತೆ ಜೀವನದಲ್ಲಿ ನಿಮ್ಮನ್ನ ನೋಡ್ತೀನಿ ಅಂತ ಅಂದುಕೊಂಡಿರಲಿಲ್ಲ ಅಣ್ಣ. ನಮ್ಮ ನಿಮ್ಮ ಸಂಬಂಧ ಹಂಗಿದೆ. ಅವಳು ತುಂಬಾ ಡೇಂಜರ್ ಅಣ್ಣ. ನನ್ನ ಮಾತನ್ನ ಒಂದು ಕೇಳಲ್ಲ ಎಂದು ಸಂತು ಕಾಲೆಳೆದರು. ಇದೇ ವೇಳೆ ಸುದೀಪ್ ಅವರು ಕೂಡ ಮಾನಸ ಅವರನ್ನು ರೇಗಿಸಿದ್ದರು.
ನಾನು ನನ್ನ ಹೆಂಡತಿ ಎಲ್ಲಾ ಕಡೆ ಮಲಗಿದ್ದೀವಿ. ಬಿಗ್ ಬಾಸ್ ಬಾಸ್ ಮನೆಯಲ್ಲಿ ಮಲಗಿಲ್ಲ. ಈ ಸೀಸನ್ ನಲ್ಲಿ ಮಲಗುವುದಕ್ಕೆ ಅವಕಾಶ ಕೊಡಿ ಎಂದು ಕೇಳಿದರು. ಕಿಚ್ಚ ಸುದೀಪ್ ಈ ಮಾತಿಗೆ ಸಿಕ್ಕಾಪಟ್ಟೆ ನಕ್ಕಿದ್ದಾರೆ. ಬಿಗ್ ಬಾಸ್ ನ ರಿಯಾಲಿಟಿ ಶೋ ಅಂದ್ಕೊಂಡಿದ್ದೀರೋ ವ್ಯಾಪಾರ ಅಂದ್ಕೊಂಡಿದ್ದಿರೋ ಅಂತ ರೇಗಿಸಿದ್ದಾರೆ. ಮನರಂಜನೆಯನ್ನಂತು ಕೊಡ್ತಾರೆ. ಹೀಗಾಗಿ ಬಿಗ್ ಬಾಸ್ ನಲ್ಲಿ ಉಳಿದುಕೊಳ್ತಾರೆ ಎಂದಿದ್ದಾರೆ. ಇನ್ನು ಹಂಸ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ರಾಜಿ ಪಾತ್ರದಲ್ಲಿ ಸಾಕಷ್ಟು ಖ್ಯಾತಿ ಪಡೆದಿದ್ದರು. ಆದರೆ ಬಿಗ್ ಬಾಸ್ ದೊಡ್ಡ ಶೋ, ಈ ಶೋನಲ್ಲಿ ಭಾಗವಹಿಸಬೇಕೆಂಬ ಮಹದಾಸೆಯಿಂದ ಬಂದಿದ್ದೇನೆ ಎಂದಿದ್ದಾರೆ.