Sandalwood Leading OnlineMedia

ಅಜಯ್ ಸರ್ಪೇಷ್ಕರ್ ಚೊಚ್ಚಲ ಸಿನಿಮಾ ‘ಮಂಡಲ’ ಮಾರ್ಚ್ 10ರಂದು ತೆರೆಗೆ

ಸಿನಿಮಾರಂಗದ ಮೇಲಿನ ಅಪಾರ ಪ್ಯಾಶನ್ ನಿಂದ ವೃತ್ತಿ ಬದುಕಿಗೆ ಗುಡ್ ಬೈ ಹೇಳಿ ನಿರ್ದೇಶನದತ್ತ ಮುಖ ಮಾಡಿದ ಅದೆಷ್ಟೋ ಉದಾಹರಣೆಗಳು ನಮ್ಮ ನಡುವಿದೆ. ಆ ಪಟ್ಟಿಗೆ ಹೊಸ ಸೇರ್ಪಡೆ ಅಜಯ್ ಸರ್ಪೇಷ್ಕರ್. ಸಾಫ್ಟ್ ವೇರ್ ಉದ್ಯೋಗಿಯಾಗಿದ್ದ ಇವರಿಗೆ ಸಿನಿಮಾ, ಫೋಟೋಗ್ರಫಿಯಲ್ಲಿ ಮೊದಲಿನಿಂದಲೂ ಅಪಾರ ಆಸಕ್ತಿ ಆದ್ರಿಂದಲೇ ಕೆಲಸಕ್ಕೆ ಫುಲ್ ಸ್ಟಾಪ್ ಇಟ್ಟು ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಸೈನ್ಸ್ ಫಿಕ್ಷನ್ ಸಿನಿಮಾ ‘ಮಂಡಲ’ ಮೂಲಕ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ. ಫಸ್ಟ್ ಲುಕ್ ಮೂಲಕ ಗಮನ ಸೆಳೆದ ‘ಮಂಡಲ’ ಚಿತ್ರ ಸೈನ್ಸ್ ಫಿಕ್ಷನ್ ಜೊತೆಗೆ ಫ್ಯಾಮಿಲಿ ಡ್ರಾಮಾ ಸಬ್ಜೆಕ್ಟ್ ಒಳಗೊಂಡಿದೆ. ಮೊದಲ ಚಿತ್ರದಲ್ಲಿ ಒಂದೊಳ್ಳೆ ಸಬ್ಜೆಕ್ಟ್ ಜೊತೆಗೆ ಅನುಭವಿ ಕಲಾವಿದರನ್ನು ಒಟ್ಟುಗೂಡಿಸಿ ನಿರ್ದೇಶನ ಮಾಡಿದ್ದಾರೆ ಅಜಯ್ ಸರ್ಪೇಷ್ಕರ್. ಚಿತ್ರದಲ್ಲಿ ಅನಂತ್ ನಾಗ್, ಪ್ರಕಾಶ್ ಬೆಳವಾಡಿ, ಶರ್ಮಿಳಾ ಮಾಂಡ್ರೆ, ಸಂಯುಕ್ತ ಹೊರನಾಡು, ಕಿರಣ್ ಶ್ರೀನಿವಾಸ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

“ಪರಿಮಳ ಡಿಸೋಜಾ” ಚಿತ್ರಕ್ಕಾಗಿ ಅಮ್ಮನ ಹಾಡು ಹಾಡಿದ ಜೋಗಿ ಪ್ರೇಮ್

2018ರಲ್ಲೇ ‘ಮಂಡಲ’ ಚಿತ್ರೀಕರಣ ಮುಗಿದಿದ್ದು ಸೈನ್ಸ್ ಫಿಕ್ಷನ್ ಸಿನಿಮಾವಾದ್ದರಿಂದ ವಿಶ್ಯುವಲ್ ಎಫೆಕ್ಟ್ ಚಿತ್ರದಲ್ಲಿ ತುಂಬಾ ಇದೆ. ಆ ಕೆಲಸದಲ್ಲಿರುವಾಗಲೇ ಕೊರೋನಾ ಆರಂಭವಾಗಿ ಕೆಲಸಗಳು ನಿಂತು ಹೋಗಿತ್ತು, ಈಗ ಸಿನಿಮಾದ ಸಂಪೂರ್ಣ ಕೆಲಸ ಮುಗಿದಿದ್ದು, ಮಾರ್ಚ್ 10ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಫ್ಯಾಮಿಲಿ ಡ್ರಾಮಾ ಜೊತೆಗೆ ಸೈನ್ಸ್ ಫಿಕ್ಷನ್ ಕಥಾಹಂದರ ಒಳಗೊಂಡಿದೆ ಎಂದು ಚಿತ್ರದ ನಿರ್ದೇಶಕ ಅಜಯ್ ಸರ್ಪೇಷ್ಕರ್ ಮಾಹಿತಿ ಹಂಚಿಕೊಂಡಿದ್ದಾರೆ. ಅಜಯ್ ಸರ್ಪೇಷ್ಕರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚೊಚ್ಚಲ ಸಿನಿಮಾವಿದು. ಆರಂಭದಲ್ಲಿ ಕಿರುಚಿತ್ರಗಳನ್ನು ನಿರ್ದೇಶಿಸಿ ಸೈನ್ಸ್ ಫಿಕ್ಷನ್ ಮಂಡಲ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.  ‘ಮಂಡಲ’ ಚಿತ್ರಕ್ಕೆ ಖುದ್ದು ಕಥೆ ಬರೆದು ನಿರ್ದೇಶನದ ಜೊತೆಗೆ ಸಿನಿಮಾ ನಿರ್ಮಾಣವನ್ನೂ ಮಾಡಿದ್ದಾರೆ.

 

ನಿರ್ಮಾಪಕರ ಪಾಲಿನ ಆಪತ್ಬಾಂಧವ `ಸಿನಿ ಬಜಾರ್’

 

ಸುಧಾ ಬೆಳವಾಡಿ, ನೀನಾಸಂ ಅಶ್ವಥ್, ಮನ್ ದೀಪ್ ರಾಯ್, ಕಿರಣ್ ನಾಯಕ್, ಸಮನ್ವಿತಾ ಶೆಟ್ಟಿ, ನರೇಶ್ ನರಸಿಂಹನ್ ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ. ಜೆಸ್ಸಿ ಕ್ಲಿಂಟನ್ ಸಂಗೀತ ನಿರ್ದೇಶನ, ರಾಮಿಶೆಟ್ಟಿ ಪವನ್ ಸಂಕಲನ, ಮನೋಹರ್ ಜೋಶಿ ಛಾಯಾಗ್ರಹಣ, ನಿತಿನ್ ಲುಕೋಸೆ ಸೌಂಡ್ ಡಿಸೈನ್, ಒಲಿವರ್ ಎಲ್ವಿಸ್ ಹಾಗೂ ಮನೋಜ್ ಬೆಳ್ಳೂರು VFX, ಪ್ರಕಾಶ್ ಬೆಳವಾಡಿ ಹಾಗೂ ಅಜೆಯ್ ಸರ್ಪೇಷ್ಕರ್ ಚಿತ್ರಕಥೆ ‘ಮಂಡಲ’ ಚಿತ್ರಕ್ಕಿದೆ.

Share this post:

Translate »