Sandalwood Leading OnlineMedia

ಚಾಲೆಂಜಿಂಗ್ ಪಾತ್ರದಲ್ಲಿ ಮಮತಾ ರಾಹುತ್ : ʻತಾರಿಣಿʼ 29ಕ್ಕೆ ತೆರೆಗೆ

ಕಾಲ ಎಷ್ಟೇ ಬದಲಾದರೂ ಕೆಲವೊಂದು ಸಲ ಮನಸ್ಥಿತಿಗಳು ಬದಲಾಗುವುದಿಲ್ಲ ಎಂಬುದಕ್ಕೆ ಉದಾಹರಣೆಗಳಿವೆ. ಹೆಣ್ಣು ಮಕ್ಕಳು ಗಂಡು ಮಕ್ಕಳಿಗೆ ಸರಿ ಸಮಾನವಾಗಿ ಬದುಕುವುದನ್ನು ತೋರಿಸಿ ಅದೆಷ್ಟೋ ವರ್ಷಗಳು ಕಳೆದಿವೆ. ಆದರೆ ಈಗಲೂ ಹೆಣ್ಣು ಎಂದರೆ ಮೂಗು ಮುರಿಯುವ ತಂದೆಯಂದಿರಿದ್ದಾರೆ. ಇತ್ತಿಚೆಗೆ ಹೆಣ್ಣು ಭ್ರೂಣ ಹತ್ಯೆ ಕೇಸ್ನಲ್ಲಿ ವೈದ್ಯರು ಕೂಡ ಅರೆಸ್ಟ್ ಆಗಿರುವ ಸುದ್ದಿ ನಿಮಗೆಲ್ಲಾ ಗೊತ್ತೆ ಇದೆ. ಇಂಥ ಘಟನೆಗಳು ನಡೆಯಬಾರದು ಅಂದರೆ ಮನಸ್ಸುಗಳು ಪರಿವರ್ತನೆಯಾಗಬೇಕು. ಅಂಥದ್ದೊಂದು ಮಹತ್ವದ ಕೆಲಸ ಮಾಡಲು ಸಿದ್ಧರಾಗಿರುವುದು `ತಾರಿಣಿ’ ಬಳಗ.

 

ಕನ್ನಡ ಹಾಗೂ ತೆಲುಗು ಇಂಡಸ್ಟ್ರಿಯಲ್ಲಿ ಆಕ್ಟೀವ್ ಆಗಿರುವ ನಟಿ ಮಮತಾ ರಾಹುತ್ ಒಂದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಗರ್ಭೀಣಿಯಾಗಿದ್ದಾಗಲೇ ಇಂಥದ್ದೊಂದು ಸಂದೇಶ ಕೊಡುವಂತ ಸಿನಿಮಾಗೆ ಸಹಿ ಹಾಕಿದ್ದರು. ಏಳು ತಿಂಗಳ ಗರ್ಭೀಣಿ ಮಮತಾ, ಕೆಲ ಮನಸ್ಥಿತಿಗಳನ್ನು, ಮೂಢನಂಬಿಕೆಗಳನ್ನು ಬದಿಗೊತ್ತಿ `ತಾರಿಣಿʼಯಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದಾರೆ. ಗರ್ಭೀಣಿ ಮಹಿಳೆಯ ವಾತಾವರಣ, ಚಿಂತನೆ, ಕ್ರಿಯಾಶೀಲತೆ ಇದೆಲ್ಲವು ಹೊಟ್ಟೆಯಲ್ಲಿರುವ ಮಗುವಿನ ಮೇಲೂ ಪರಿಣಾಮ ಬೀರುತ್ತದೆ. ಆ ವಿಚಾರದಲ್ಲಿ ಮಮತಾ ರಾಹುತ್ ವಿಚಾರದಲ್ಲೂ ಇಲ್ಲೊಂದು ಪವಾಡವೇ ನಡೆದಿದೆ. ಏಳು ತಿಂಗಳ ಗರ್ಭೀಣಿಯಾಗಿದ್ದಾಗ ಮಮತಾ `ತಾರಿಣಿ’ ಸಿನಿಮಾದಲ್ಲಿ ನಟಿಸಿದ್ದರು.

ಗರ್ಭೀಣಿಯ ಪಾತ್ರದ ಶೂಟಿಂಗ್ ಎಲ್ಲಾ ಮುಗಿದು, ಮಗುವಿನ ಭಾಗ ಮಾತ್ರ ಬಾಕಿ ಇತ್ತು. ಮಮತಾ ಅವರಿಗೆ ಮಗು ಆಗುವುದಕ್ಕೆ ಇನ್ನೊಂದು ತಿಂಗಳ ಸಮಯವಿತ್ತು. ಹೀಗಾಗಿ ಶೂಟಿಂಗ್ಗೆ ತಡವಾಗಬಾರದು ಎಂದು, ಬೇರೆ ಮಗುವನ್ನು ತೆಗೆದುಕೊಳ್ಳುವ ಮಾತುಕತೆ ಮಾಡಿತ್ತು ಚಿತ್ರತಂಡ. ಆದರೆ ಮಮತಾ ರಾಹುತ್ ಮಗುವಿಗೆ ಅದು ಇಷ್ಟವಿರಲಿಲ್ಲ ಎನಿಸುತ್ತೆ, ಪವಾಡವೆಂಬಂತೆ ಮರುದಿನವೇ ಡೆಲಿವರಿಯಾಗಿದೆ, ಜಿತಿನ್ ಎಸ್ ಕೊಟ್ಯಾನ್ ಹೊಸ ಪ್ರಪಂಚಕ್ಕೆ ಕಾಲಿಟ್ಟಿದ್ದಾನೆ. ಇದು ಇಡೀ ಚಿತ್ರತಂಡಕ್ಕೆ ಒಂಥರ ಸರ್ಪೈಸ್ ಆಗಿತ್ತು. ಜಿತಿನ್ ಹುಟ್ಟಿದ ಕೆಲವೇ ಗಂಟೆಗಳಲ್ಲಿ ಶೂಟಿಂಗ್ನಲ್ಲಿ ಭಾಗಿಯಾಗಿದ್ದ. ಮೂರೇ ದಿನಕ್ಕೆ ಬಾಣಂತಿ ಮಮತಾ ಡಬ್ಬಿಂಗ್ ಮುಗಿಸಿದ್ದರು.

ಸಿದ್ದು ಪೂರ್ಣಚಂದ್ರ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರ ಹಲವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಆಯ್ಕೆಯಾಗಿ ಪ್ರದರ್ಶನಗೊಂಡು ಪ್ರಶಸ್ತಿಗಳಿಸುತ್ತಿದೆ. ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಒಂದಾದ ‘ರಾಜಸ್ಥಾನ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್’ ನಲ್ಲಿ ‘ತಾರಿಣಿ’ ಚಿತ್ರದ ಅಭಿನಯಕ್ಕೆ ಮಮತಾ ರಾಹುತ್ಗೆ ಅತ್ಯುತ್ತಮ ನಟಿ ಪ್ರಶಸ್ತಿ ಬಂದರೇ ಮತ್ತೊಂದು ‘ಬೆಸ್ಟ್ ಕ್ರಿಟಿಕ್ಸ್ ಅವಾರ್ಡ್’ ಕೂಡ ಬಂದಿದೆ.

ಹೆಣ್ಣು ಭ್ರೂಣ ಹತ್ಯೆ ಮಾಡಬೇಡಿ ಎಂಬ ಉತ್ತಮ ಸಂದೇಶವಿರುವ ಈ ಚಿತ್ರವನ್ನು ಮಮತಾ ರಾಹುತ್ ಅವರ ಪತಿ ಸುರೇಶ್ ಕೊಟ್ಯಾನ್ ಚಿತ್ರಾಪು ಅವರು ಶ್ರೀಗಜನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಿದ್ದಾರೆ. ತಾರಿಣಿಯಾಗಿ ಮಮತಾ ರಾಹುತ್ ನಟಿಸಿದ್ದು, ನಾಯಕನಾಗಿ ರೋಹಿತ್ ಅಭಿನಯಿಸಿದ್ದಾರೆ. ಭವಾನಿ ಪ್ರಕಾಶ್, ಸುಧಾ ಪ್ರಸನ್ನ, ಡಾ.ಸುರೇಶ್ ಚಿತ್ರಾಪು, ವಿಜಯಲಕ್ಷ್ಮೀ, ಪ್ರಮೀಳಾ ಸುಬ್ರಹ್ಮಣ್ಯಂ, ಪ್ರಮೀಳಾ ಸುಬ್ರಹ್ಮಣ್ಯಂ, ದೀಪಿಕಾ ಗೌಡ, ಸನ್ನಿ, ತೇಜಸ್ವಿನಿ, ಕವಿತಾ ಕಂಬಾರ್, ಬೇಬಿ ನಿಶಿತಾ, ಬೇಬಿ ರಿಧಿ, ಮಟಿಲ್ಡಾ ಡಿಸೋಜ, ಪ್ರಿನ್ಸ್ ಜಿತಿನ್ ಕೋಟ್ಯಾನ್, ಅರ್ಚನಾ ಗಾಯಕ್ವಾಡ್, ಶೀಬಾ ಮೂರ್ತಿ, ಶ್ವೇತಾ, ಚೈತ್ರಾ, ಮಂಜು ನಂಜನಗೂಡು, ರಘು ಸಮರ್ಥ್ ಮುಂತಾದವರು ಸಿನಿಮಾದಲ್ಲಿದ್ದಾರೆ.

ಮಮತಾ ರಾಹುತ್ಗೆ ಈ ಸಿನಿಮಾ ಮಾಡುವಾಗ ಸಾಕಷ್ಟು ಜವಬ್ದಾರಿಗಳಿದ್ದವು, ಸಾಕಷ್ಟು ಚಾಲೆಂಜಸ್ಗಳನ್ನು ಎದುರಿಸಿದ್ದಾರೆ. ಗರ್ಭೀಣಿಯಾದವರು ಹೆಚ್ಚಿನ ವಿಶ್ರಾಂತಿಯನ್ನು ಪಡೆಯಬೇಕಾಗುತ್ತದೆ. ಆದರೆ ಮಮತಾ ಇಲ್ಲಿ ಆ ರೀತಿಯ ವಿಶ್ರಾಂತಿಯನ್ನು ಪಡೆಯುವುದಕ್ಕೆ ಸಾಧ್ಯವೇ ಆಗಲಿಲ್ಲ. ಒಂದು ಅವರದ್ದೇ ಪ್ರೊಡಕ್ಷನ್ ಆಗಿದ್ದರಿಂದ ಜವಾಬ್ದಾರಿಯೂ ಜಾಸ್ತಿ ಇತ್ತು. ಜೊತೆಗೆ ಮೊದಲ ಬೇಬಿ ಆಗಿದ್ದರಿಂದ ಮಗುವಿನ ಮೇಲೆ ಹೆಚ್ಚು ಗಮನ ನೀಡಬೇಕಾಗಿತ್ತು. ಇದ್ಯಾವುದನ್ನು ಮಾಡದೆ ಮೊಡಲು ಸಿನಿಮಾ ಎಂದು ನಿಂತ ದಿಟ್ಟ ಮಹಿಳೆ ಮಮತಾ ರಾಹುತ್.

ಇಷ್ಟೆಲ್ಲಾ ರಿಸ್ಕ್ ತೆಗೆದುಕೊಂಡು ಫೈನಲಿ ಸಿನಿಮಾ ಕಂಪ್ಲೀಟ್ ಮಾಡಿದ್ದಾರೆ. ಆ ಚಾಲೆಂಜಸ್ಗಳ ಬಗ್ಗೆ ಮಮತಾ ರಾಹುತ್ ಹೇಳಿದ್ದು ಹೀಗೆ, `ನಾನು ಸಿನಿಮಾದಲ್ಲಿ ಹೀರೋಯಿನ್ ಆಗಿನೂ ಆಕ್ಟ್ ಮಾಡಬೇಕು, ಹೊಟ್ಟೆಯಲ್ಲಿರುವ ಮಗುಗೆ ತಾಯಿಯಾಗಿಯೂ ನೋಡಿಕೊಳ್ಳಬೇಕು, ಹೆಂಡತಿಯಾಗಿಯೂ ಜವಾಬ್ದಾರಿ ಇತ್ತು. ಬೆಳಗ್ಗೆನೆ ಎದ್ದು ಮನೆಯೆಲ್ಲಾ ಸ್ವಚ್ಛ ಮಾಡಿ, ದೇವರ ಪೂಜೆ ಮಾಡಿ, ನನ್ನ ಗಂಡನಿಗೆ ತಿಂಡಿ ಮಾಡಿ ಶೂಟಿಂಗ್ಗೆ ಹೋಗುತ್ತಾ ಇದ್ದೆ.

ಆ ಸಮಯದಲ್ಲಿ ಏನೂ ಶಕ್ತಿಯಾಗಿ ಸಿಕ್ಕಿತೋ ಗೊತ್ತಿಲ್ಲ. ಆದರೆ ಕೊಂಚವೂ ಸುಸ್ತು ಎನಿಸಿರಲಿಲ್ಲ. ಶೂಟಿಂಗ್ ಮುಗಿಸಿ, ಪೇಮೆಂಟ್ ಕೊಟ್ಟು ಮನೆಗೆ ಬರುವುದರೊಳಗೆ ಮಧ್ಯರಾತ್ರಿಯಾಗುತ್ತಿತ್ತು. ನಂಗೆ ಸಿನಿಮಾದ ಮೇಲೆ ಹುಚ್ಚು ಪ್ರೀತಿ. ಆದರೆ ಏನಾದ್ರೂ ವಿಭಿನ್ನವಾಗಿ ಮಾಡಿದಾಗಲೇ ನೆಲೆ ನಿಲ್ಲುವುದಕ್ಕೆ ಸಾಧ್ಯ ಪ್ರೆಗ್ನೆನ್ಸಿ ಎಂದಾಕ್ಷಣ ಫೋಟೋಶೂಟ್ ಮಾಡುವುದು, ರೀಲ್ಸ್ ಮಾಡುವುದಕ್ಕಿಂತ ಇನ್ನು ಮೆಮೋರಬಲ್ ಆಗಿರಬೇಕು ಎಂದು ನಿರ್ಧಾರ ಮಾಡಿದ್ದೆ.

ಆಗ ನನ್ನ ಪತಿ ಹತ್ತಿರ ಚರ್ಚೆ ಮಾಡಿದ್ದೆ. ಜೀವನಪೂರ್ತಿ ಆ ಪ್ರೆಗ್ನೆನ್ಸಿ ದಿನಗಳ ನೆನಪಿರಬೇಕು, ಅದಕ್ಕೆ ಒಂದು ಸಿನಿಮಾ ಮಾಡೋಣಾ ಎಂದು ಕೇಳಿದಾಗ, ನನ್ನ ಹಸ್ಬೆಂಡ್ ಕೂಡ ಒಕೆ ಅಂದರು. ಬಳಿಕ ನಾನು ನಿರ್ದೇಶಕ ಸಿದ್ದು ಪೂರ್ಣಚಂದ್ರ ಅವರಿಗೆ, ಗರ್ಭೀಣಿ ಮಹಿಳೆಯ ಮೇಲೆ ಕಥೆ ಮಾಡಿ, ಸಿನಿಮಾ ಮಾಡೋಣಾ ಅಂತ ಹೆಳಿದೆ. ಅವರು ಅದಕ್ಕೆ ಸಂಬಂಧಿಸಿದಂತೆ ಕಥೆ ಮಾಡಿಕೊಂಡು ಬಂದರು. ನಾನು ನನ್ನ ಹಸ್ಬೆಂಡ್ ಕಥೆ ಕೇಳಿದೆವು. ನನ್ನ ಹಸ್ಬೆಂಡ್ ಕಥೆಯಲ್ಲಿ ಒಂದಿಷ್ಟು ಮಾಡಿಫೈ ಮಾಡಿದರು.

ಸಿನಿಮಾ ಮಾಡುವುದಲ್ಲ, ಅದರಿಂದ ಜನತೆಗೆ ಏನಾದರೊಂದು ಸಂದೇಶ ಕೊಡಬೇಕು ಅಂತ ಭ್ರೂಣ ಹತ್ಯೆ ಬಗ್ಗೆ ಕಥೆಯನ್ನು ಎಣೆಯುತ್ತಾ ಹೋದರು. ಕಥೆ ಸಿದ್ಧವಾಯಿತು. ಆಮೇಲೆ ನಾನು ಕೂಡ ಗರ್ಭೀಣಿ ಎಂಬುದರ ಸತ್ಯ ಹೇಳಿದೆ. ನನ್ನ ಹಸ್ಬೆಂಡ್ ಹಾಗೂ ನಿರ್ದೇಶಕರಿಬ್ಬರಿಗೂ ಈ ಸಮಯದಲ್ಲಿ ಹೇಗೆ ಸಿನಿಮಾ ಮಾಡುತ್ತಾರೆ ಎಂಬ ಅನುಮಾನ ಇತ್ತು. ಆದರೆ ನಾನದನ್ನ ಚಾಲೆಂಜಿAಗ್ ಆಗಿ ತೆಗೆದುಕೊಂಡು ಸಿನಿಮಾ ಮಾಡಿದ್ದೀನಿ. ಫೈನಲಿ ತಾರಿಣಿ ಗರ್ಭದಿಂದ ಹೊರ ಬಂದು, ಜನರ ಪ್ರೀತಿ ಗಳಿಸಲು ರೆಡಿಯಾಗಿದ್ದಾಳೆ. ಹೊಟ್ಟೆಯಲ್ಲಿದ್ದಾಗಲೇ ಸಿನಿಮಾದಲ್ಲಿ ಅಭಿನಯಿದ್ದರ ಕಾರಣವೋ ಏನೋ, ಜಿತಿನ್ ರಿಯಲ್ ಆಗಿಯೂ ಸಿನಿಮಾದ ವಿಚಾರದಲ್ಲಿ ಆಸಕ್ತಿ ತೋರುತ್ತಾನೆ. ಅದರಲ್ಲೂ ಅಪ್ಪು ಸರ್ ಸಾಂಗ್ಗಳಿಗೆ ಅಳು ನಿಲ್ಲಿಸುತ್ತಾನೆ, ಖುಷಿಯಾಗುತ್ತಾನೆ, ಡ್ಯಾನ್ಸ್ ಮಾಡುತ್ತಾನೆ. ನನ್ನ ಮಗ ನನ್ನ ಅದೃಷ್ಟ, ನನ್ನ ಕನಸು. ಈ ಸುಂದರ ಗಳಿಗೆಯನ್ನು ತಾರಿಣಿ ಚೆಂದವಾಗಿ ಹಿಡಿದಿಟ್ಟಿದೆ’.
ನಿರ್ಮಾಪಕ ಡಾ. ಸುರೇಶ್ ಕೋಟ್ಯಾನ್ ಚಿತ್ರಾಪು ಅವರು ಮಾತನಾಡಿದ್ದು, ಮಮತಾ ಗರ್ಭೀಣಿಯಾಗಿದ್ದಾಗ ಈ ರೀತಿಯ ಸಿನಿಮಾವನ್ನು ಗಿಫ್ಟ್ ಕೊಡಿ ಎಂದು ಕೇಳಿದ್ದರು. ಆದರೆ ನನಗೆ ಎಲ್ಲೋ ಒಂದು ಕಡೆ ಭಯವಿತ್ತು. ಗರ್ಭೀಣಿ ಬೇರೆ ಹೇಗೆ ರಿಸ್ಕ್ ತೆಗೆದುಕೊಳ್ಳುವುದು ಎಂಬ ಆತಂಕ. ನಿಂಗೆ ಕಾನ್ಫಿಡೆನ್ಸ್ ಇದೆಯಾ ಎಂಬುದನ್ನು ತಿಳಿದುಕೊಂಡೆ. ಪ್ರೆಗ್ನೆನ್ಸಿ ಎಂಬುದು ಬ್ಯೂಟಿಫುಲ್ ಜರ್ನಿಯೊಂದಿಗೆ ಕ್ರಿಟಕಲ್ ಜರ್ನಿ ಕೂಡ.

ಆಮೇಲೆ ಮನೆಯವರನ್ನೆಲ್ಲಾ ಸಂಭಾಳಿಸಿ ಸಿನಿಮಾ ಮಾಡಿದೆವು. ಈಗಾಗಲೇ ೨೭ ಫೆಸ್ಟಿವಲ್ನಲ್ಲಿ ಅವಾರ್ಡ್ ಪಡೆದುಕೊಂಡಿದೆ. ಸಿನಿಮಾ ನೋಡುವಾಗ ನನ್ನ ಕಣ್ಣಲ್ಲಿ ನೀರು ಬಂದಿದೆ. ಆ ಸಿನಿಮಾ ನಮ್ಮ ಮನಪರಿವರ್ತನೆಯನ್ನು ಮಾಡುತ್ತೆ. ನಮಗೊಂದು ಹೆಣ್ಣು ಮಗು ಇದ್ದರೆ ಎಷ್ಟು ಚೆಂದ ಎನಿಸುತ್ತದೆ. ಹೆಣ್ಣು ಮಕ್ಕಳನ್ನು ಒಪ್ಪುವ ಮನಸ್ಥಿತಿ ತಂದುಕೊಡುತ್ತೆ. ಈ ಸಿನಿಮಾ ಮಾಡಿದ್ದು ಮಮತಾಗೆ ಗಿಫ್ಟ್ ಕೊಡಬೇಕು ಎಂಬುದಷ್ಟೇ ಇತ್ತು. ಸಮಾಜಕ್ಕೊಂದು ಸಂದೇಶವಿರುವ ಸಿನಿಮಾ ಗಿಫ್ಟ್ ಕೊಟ್ಟಿರುವುದು ಖುಷಿ ಇದೆ ಎಂದಿದ್ದಾರೆ.

Share this post:

Related Posts

To Subscribe to our News Letter.

Translate »