ಕನ್ನಡ ಇಂಡಸ್ಟ್ರಿಯ ಮೇಲೆ ಎಲ್ಲಾ ಭಾಷೆಯವರ ಕಣ್ಣು ಇದೆ. ಈ ರೀತಿ ಅಟೆನ್ಶನ್ ಕ್ರಿಯೇಟ್ ಮಾಡಿದ್ದು ಕೆಜಿಎಫ್ ಹಾಗೂ ಕಾಂತಾರದಂತ ಸಿನಿಮಾಗಳು. ಆದರೆ ಈಗ ಆ ಹೆಸರು ಉಳಿಯುತ್ತಿದೆಯಾ ಅಂದ್ರೆ ಎಲ್ಲರೂ ನೋ ಅಂತಾನೇ ತಲೆ ಅಲ್ಲಾಡಿಸುತ್ತಾರೆ.
ಯಾಕಂದ್ರೆ ಹೊಸಬರ ಸಿನಿಮಾಗಳೇ ಹೆಚ್ಚಾಗಿದ್ದು, ಸ್ಟಾರ್ ಗಳ ಸಿನಿಮಾಗಾಗಿ ವರ್ಷಗಟ್ಟಲೇ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಕನ್ನಡ ಚಿತ್ರರಂಗ ಪಾತಾಳಕ್ಕೆ ಕುಸಿದಿದೆ. ಜನರು ಚಿತ್ರಮಂದಿರಕ್ಕೆ ಸಿನಿಮಾ ನೋಡುವುದಕ್ಕೆ ಬರುತ್ತಿಲ್ಲ. ಪ್ರದರ್ಶಕರು, ವಿತರಕರು ಸಿನಿಮಾಗಳೇ ಇಲ್ಲದೆ ಕಂಗಾಲಾಗಿ ಹೋಗಿದ್ದಾರೆ. ಒಂದೊಂದೇ ಚಿತ್ರಮಂದಿರವನ್ನು ಉರುಳಿಸಿ ಕಾಂಪ್ಲೆಕ್ಸ್ ಕಟ್ಟುವುದಕ್ಕೆ ಹೊರಟಿದ್ದಾರೆ. ಇತ್ತೀಚೆಗೆ ಜನಪ್ರಿಯ ಚಿತ್ರಮಂದಿರ ಕಾವೇರಿ ಇತಿಹಾಸ ಪುಟ ಸೇರಿದೆ. ಹೀಗೆ ಆಗುವುದಕ್ಕೆ ಕಾರಣ ಸ್ಟಾರ್ ಗಳ ಸಿನಿಮಾಗಳು ಇಲ್ಲದೆ ಇರುವುದು.
ಕನ್ನಡ ಚಿತ್ರರಂಗದ ಗಂಭೀರ ಪರಿಸ್ಥಿತಿಯನ್ನು ಮನಗಂಡ ನಿರ್ಮಾಪಕರು, ವಿತರಕರು, ಪ್ರದರ್ಶಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೂಪರ್ಸ್ಟಾರ್ಗಳು ಎರಡು ವರ್ಷ ಆದರೂ ಸಿನಿಮಾ ಮಾಡುತ್ತಿಲ್ಲ. ಹೀಗಾಗಿ ಫಿಲ್ಮ್ ಚೇಂಬರ್ ಮುಂದಾಳತ್ವದಲ್ಲಿ ಮೀಟಿಂಗ್ ಕೂಡ ನಡೆಯುತ್ತಿದೆ.
ಒಂದು ತಿಂಗಳ ವರೆಗೂ ಚಿತ್ರರಂಗವನ್ನು ಬಂದ್ ಮಾಡುವ ಚಿಂತನೆ ಕೂಡ ನಡೆದಿದೆ. ಕನ್ನಡದ ಸೂಪರ್ಸ್ಟಾರ್ಗಳು ವರ್ಷಕ್ಕೆ ಎರಡು ಸಿನಿಮಾ ರಿಲೀಸ್ ಮಾಡಬೇಕು ಅನ್ನೋ ಕೂಗು ಕೂಡ ಕೇಳಿ ಬರುತ್ತಿದೆ.
ನಮ್ಮಲ್ಲಿರುವ ಸ್ಟಾರ್ ಗಳು ವರ್ಷಕ್ಕೆ ಒಂದು ಸಿನಿಮಾ ಮಾಡಿದರು ಎರಡು ತಿಂಗಳಿಗೊಮ್ಮೆಯಾದರೂ ಥಿಯೇಟರ್ ತುಂಬುತ್ತದೆ. ಆದರೆ ಎರಡು ವರ್ಷವಾದರೂ ಸ್ಟಾರ್ ಗಳ ಸಿನಿಮಾಗಳೇ ಇಲ್ಲ. ರಿಷಬ್ ಶೆಟಿ ಕಾಂತಾರದಲ್ಲಿಬ್ಯುಸಿ, ಯಶ್ ಕೆಜಿಎಫ್ ಆದಮೇಲೆ ತೆರೆ ಮೇಲೆ ಕಾಣಿಸಿಕೊಳ್ಳಲಿಲ್ಲ.
ಇನ್ನು ಸುದೀಪ್ ವಿಕ್ರಾಂತ್ ರೋಣ ಮುಗಿದು ಎರಡು ವರ್ಷವಾದರೂ ಮತ್ತೊಂದು ಸಿನಿಮಾ ರಿಲೀಸ್ ಆಗಿಲ್ಲ. ಹಾಗೇ ನೋಡಿಕೊಂಡರೆ ಶಿವಣ್ಣ ಹಾಗೂ ದರ್ಶನ್ ಇಬ್ಬರೇ ವರ್ಷಕ್ಕೆ ಎರಡು ಸಿನಮಾ ಕೊಡುತ್ತಿರುವುದು.