Sandalwood Leading OnlineMedia

‘ನೈಟ್ ಕರ್ಫ್ಯೂ’ ಮೂಲಕ‌ ಮತ್ತೆ ಬಣ್ಣದ ಲೋಕಕ್ಕೆ ಮಾಲಾಶ್ರೀ ಕಮ್‌ ಬ್ಯಾಕ್

‘ನೈಟ್ ಕರ್ಫ್ಯೂ’ ಮೂಲಕ‌ ಮತ್ತೆ ಬಣ್ಣದ ಲೋಕಕ್ಕೆ ಮಾಲಾಶ್ರೀ ಕಮ್‌ ಬ್ಯಾಕ್

ಕನ್ನಡ ಚಿತ್ರರಂಗದಲ್ಲಿ ಕನಸಿನ‌ ರಾಣಿಯಾಗಿ ಸಿಲ್ವರ್ ಸ್ಕ್ರೀನ್ ಮೇಲೆ‌ ವಿಜೃಂಭಿಸಿದ ನಟಿ ಮಾಲಾಶ್ರೀ, ಇದೀಗ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಿದ್ದಾರೆ. ಹೌದು, ‘ನೈಟ್ ಕರ್ಫ್ಯೂ’ ಸಿನಿಮಾ ಮೂಲಕ‌ ಮತ್ತೆ ಬಣ್ಣದ ಲೋಕಕ್ಕೆ ಕಮ್‌ ಬ್ಯಾಕ್ ಮಾಡುತ್ತಿದ್ದಾರೆ.ಬಹುತೇಕ ಸಿನಿಮಾ ಚಿತ್ರೀಕರಣ ಮುಗಿಸಿರೋ ಚಿತ್ರತಂಡ, ಈಗ ಅಧಿಕೃತವಾಗಿ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಿದ್ದಾರೆ.

 

ರವೀಂದ್ರ ವಂಶಿ ನಿರ್ದೇಶನದ `ನೈಟ್ ಕರ್ಫ್ಯೂ’ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದ್ದು, ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಕೊರೋನಾ ವೇಳೆಯಲ್ಲಿ ನಡೆದ ಅಂಶಗಳನ್ನೇ ಇಟ್ಟುಕೊಂಡು ಕಥೆ ಹೆಣೆಯಲಾಗಿದೆ.

ಇದೊಂದು ಆ್ಯಕ್ಷನ್ ಥ್ರಿಲರ್ ಕತೆಯಾಗಿದ್ದು, ಮೆಡಿಕಲ್ ಮಾಫಿಯಾ ಕಥೆಯಲ್ಲಿ ಮಾಲಾಶ್ರೀ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಜತೆ ಕಿರುತೆರೆ ನಟಿ ರಂಜನಿ ರಾಘವನ್ ಡಾಕ್ಟರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

  

ಸ್ವರ್ಣಗಂಗಾ ಫಿಲಂಸ್ ಬ್ಯಾನರ್ ಅಡಿಯಲ್ಲಿ ಬಿಎಸ್ ಚಂದ್ರಶೇಖರ್ ನಿರ್ಮಿಸಿರುವ ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ, ರಂಗಾಯಣ ರಘು, ಸಾಧು ಕೋಕಿಲ ಮತ್ತು ಬಿಗ್ ಬಾಸ್ ಸೀಸನ್ 8 ವಿಜೇತ ಮಂಜು ಪಾವಗಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ಚಿತ್ರದಲ್ಲಿ ಯಾವುದೇ ಹಾಡುಗಳಿಲ್ಲ, ಹಿನ್ನೆಲೆ ಸಂಗೀತಕ್ಕಾಗಿ ಸಂಗೀತ ನಿರ್ದೇಶಕರನ್ನು  ಇನ್ನೂ ಅಂತಿಮಗೊಳಿಸಿಲ್ಲ. ಪ್ರಮೋದ್ ಭರತಯ್ಯ ಸಿನಿಮಾಟೋಗ್ರಫಿ ನಿಭಾಯಿಸಿದ್ದಾರೆ.

 

Share this post:

Translate »