AA04 First Look Motion Poster | Abishek Ambareesh | S Mahesh |
ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸದಭಿರುಚಿ ಚಿತ್ರಗಳನ್ನು ನೀಡಿರುವ ರಾಕ್ ಲೈನ್ ವೆಂಕಟೇಶ್ ಅವರ ನಿರ್ಮಾಣದಲ್ಲಿ ಅಭಿಷೇಕ್ ಅಂಬರೀಶ್ ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್, ಸಂಸದೆ ಸುಮಲತಾ ಅಂಬರೀಶ್ ಅವರ ಹುಟ್ಟುಹಬ್ಬದಂದು ಬಿಡುಗಡೆಯಾಯಿತು.ಮಹೇಶ್ ಕುಮಾರ್ ನಿರ್ದೇಶಿಸುತ್ತಿರುವ AA04 ಚಿತ್ರದ ಮೋಷನ್ ಪೋಸ್ಟರ್ ಅನ್ನು ಸುಮಲತಾ ಅಂಬರೀಶ್ ಅವರೇ ಅನಾವರಣಗೊಳಿಸಿದರು. ಅಂಬರೀಶ್ ಅವರ ಸ್ಮಾರಕದ ಬಳಿ ಈ ಸಮಾರಂಭ ನಡೆಯುತ್ತಿದೆ. ಚಿತ್ರಕ್ಕೆ ಅಂಬರೀಶ್ ಅವರ ಆಶೀರ್ವಾದ ಸಂಪೂರ್ಣ ಇದೆ. ಇದಕ್ಕೆ ಸಾಕ್ಷಿಯಾಗಿ ಪೋಸ್ಟರ್ ಬಿಡುಗಡೆಯಾಗುತ್ತಿದ್ದಂತೆ ಅಂಬರೀಶ್ ಅವರ ಭಾವಚಿತ್ರದ ಬಲಗಡೆಯಿಂದ ಹೂವು ಬಿತ್ತು. ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಸುಮಲತಾ ಅಂಬರೀಶ್ ಹಾರೈಸಿದರು.
ದಕ್ಷ ಪೊಲೀಸ್ ಅಧಿಕಾರಿಯಾಗಿ ಮೇಘನಾ ಗಾಂವ್ಕರ್
ಅಭಿಷೇಕ್ ಅಂಬರೀಶ್ ಅವರಿಗೆ ಸಿನಿಮಾ ಮಾಡಬೇಕೆಂಬುದು ನನಗೆ ಬಹಳ ದಿನಗಳ ಆಸೆ. ಆದರೆ ಚಿತ್ರದ ಕಥೆ ಚೆನ್ನಾಗಿರಬೇಕು ಅಂತ ಕಾಯುತ್ತಿದೆ. ಅಭಿ ಅವರೆ ಈ ಕಥೆಯ ಬಗ್ಗೆ ನನಗೆ ಹೇಳಿದರು. ಇಷ್ಟವಾಯಿತು. ಚಿತ್ರ ಅದ್ದೂರಿಯಾಗಿ ನಿರ್ಮಾಣವಾಗಲಿದೆ. ಸುಮಲತಾ ಅಂಬರೀಶ್ ಅವರ ಹುಟ್ಟುಹಬ್ಬದ ದಿನ, ಅಂಬರೀಶ್ ಅವರ ಆಶೀರ್ವಾದದೊಂದಿಗೆ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ದೀವಿ. ಮುಂದೆ ಹೆಚ್ಚಿನ ಮಾಹಿತಿ ನೀಡುತ್ತೇವೆ ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ತಿಳಿಸಿದರು.ಅಪ್ಪನ ಹುಟ್ಟುಹಬ್ಬ ಹಾಗೂ ನನ್ನ ಹುಟ್ಟುಹಬ್ಬಕ್ಕೆ ಏನಾದರೂ ವಿಶೇಷತೆ ಇರುತ್ತಿತ್ತು. ಆದರೆ ನಮ್ಮ ಅಮ್ಮನ ಹುಟ್ಟುಹಬ್ಬದ ದಿನ ಈ ಮೋಷನ್ ಪೋಸ್ಟರ್ ಬಿಡುಗಡೆ ಮಾಡಬೇಕೆಂದು ನನ್ನ ಆಸೆಯಿತ್ತು. ಹಾಗಾಗಿ ಇಂದು ಬಿಡುಗಡೆ ಮಾಡಿದ್ದೀವಿ. ಇದೇ ಅಮ್ಮನಿಗೆ ನನ್ನ ಕಡೆಯಿಂದ ಹುಟ್ಟುಹಬ್ಬದ ಉಡುಗೊರೆ. ಮಹೇಶ್ ಕುಮಾರ್ ಮೋಷನ್ ಪೋಸ್ಟರ್ ಬಹಳ ಚೆನ್ನಾಗಿ ಮಾಡಿದ್ದಾರೆ. ಚಿತ್ರವನ್ನು ಅಷ್ಟೇ ಚೆನ್ನಾಗಿ ಮಾಡುತ್ತಾರೆ ಎಂಬ ಭರವಸೆಯಿದೆ ಎಂದರು ನಾಯಕ ಅಭಿಷೇಕ್ ಅಂಬರೀಶ್.
ಸೆಪ್ಟೆಂಬರ್ ಎಂಟರಿಂದ `ಭಾವಪೂರ್ಣ’ ಆರಂಭ
ನಾನು ಅಂಬರೀಶ್ ಅಣ್ಣನ ದೊಡ್ಡ ಅಭಿಮಾನಿ. ಅವರ ಮಗ ಅಭಿಷೇಕ್ ಅವರಿಗೆ ಸಿನಿಮಾ ಮಾಡುತ್ತಿರುವುದು ಖುಷಿಯಾಗಿದೆ. ನಿರ್ದೇಶನಕ್ಕೆ ಅವಕಾಶ ನೀಡಿರುವ ರಾಕ್ ಲೈನ್ ವೆಂಕಟೇಶ್ ಅವರ ನಿರ್ಮಾಣದಲ್ಲಿ ಅಭಿಷೇಕ್ ಅಂಬರೀಶ್ ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರದ ಸರ್ ಮತ್ತು ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ಹಾರೈಸಿದ ಸುಮಲತಾ ಅಂಬರೀಶ್ ಅವರಿಗೆ ಧನ್ಯವಾದ. ರವಿ ಬಸ್ರೂರು, ಟಿ.ಕೆ.ದಯಾನಂದ್ ಸೇರಿದಂತೆ ನನ್ನ ಇಡೀ ಚಿತ್ರತಂಡದ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿ ಬರಲಿದೆ ಎಂದು ನಿರ್ದೇಶಕ ಮಹೇಶ್ ಕುಮಾರ್ ತಿಳಿಸಿದರು.