Sandalwood Leading OnlineMedia

ಹೊಸ ತಂಡದಿಂದ ಮಹಾಬಲಿ

ಹೊಸ ತಂಡದಿಂದ ಮಹಾಬಲಿ

ಶಿವಮೊಗ್ಗದ ಅನಂತಪುರದಲ್ಲಿ ಹೋಟೆಲ್ ನಡೆಸುತ್ತಿರುವ ಮಲ್ಲೇಶ್‌ಏಡೇಹಳ್ಳಿ ಬಣ್ಣದ ಲೋಕದ ಮೋಹದಿಂದ ’ಮಹಾಬಲಿ’ ಎನ್ನುವ ಚಿತ್ರಕ್ಕೆ ಕಥೆ, ಚಿತ್ರಕಥೆ,ಸಂಭಾಷಣೆ, ಸಾಹಿತ್ಯ, ನಿರ್ದೇಶನ ಮಾಡುವ ಜತೆಗೆ ಮಾಲಸಾಂಭ ಕಂಬೈನ್ಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಪ್ರಚಾರದ ಸಲುವಾಗಿ ಗುರುವಾರ ರೇಣುಕಾಂಬ ಸ್ಟುಡಿಯೋದಲ್ಲಿ ಧ್ವನಿಸಾಂದ್ರಿಕೆ ಅನಾವರಣ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ವ್ಯಾಪಾರದೊಂದಿಗೆ ಏನಾದರೂ ಮಾಡಬೇಕೆಂಬ ತುಡಿತ ಹೆಚ್ಚಾಗಿತ್ತು. ಗೆಳಯ ಆರ್ಯ ಚಿತ್ರರಂಗಕ್ಕೆ ಬರುವಂತೆ ಆಸಕ್ತಿ ಮೂಡಿಸಿದರು. ಅದರ ಪರಿಣಾಮವೇ ಚಿತ್ರ ಬರಲು ಕಾರಣವಾಯಿತು. ಅಪ್ಪಟ್ಟ ಕುಟುಂಬಸಮೇತ ನೋಡಬಹುದಾದ ಕಥೆ ಇರಲಿದೆ.


ಇಂದಿನ ಪ್ರಪಂಚದಲ್ಲಿ ಮಾನವ ನಿರ್ಮಿಸಿಕೊಂಡ ಜೀವನದ ಮೌಲ್ಯಗಳು ಅಧೋಗತಿಗೆ ಹೋಗುತ್ತಿದೆ. ಆತನಿಗೆ ಅವನದೇ ಆದಂತಹ ಸೀಮಿತ ಕುಟುಂಬ ಇರುತ್ತದೆ. ಅಂಥ ಒಂದು ಕುಟುಂಬದ ಮೌಲ್ಯವು ಯಾವ ಮಟ್ಟಕ್ಕೆ ಹೋಗ್ತಾ ಇದೆ. ಅದರ ಅರ್ಥ, ನಿಬಂದನೆ ಬಗ್ಗೆ ಜಾಗೃತಿಯನ್ನು ಮೂಡಿಸುವುದೇ ಸಾರಾಂಶವಾಗಿದೆ. ಶಿಕಾರಿಪುರ, ಸಾಗರ, ಮಲ್ಲೇನಹಳ್ಳಿ, ಹಾವೇರಿ, ಹಿರೇಕೇರಿ, ಚಿಕ್ಕೇರಿ, ಕನಕದಾಸರ ಪೀಠ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹಿರಿಯ ಪುತ್ರ ಪೃಥ್ವಿರಾಜ್‌ನನ್ನು ನಾಯಕನಾಗಿ ಪರಿಚಯಿಸಿದ್ದೇನೆ. ವೈಯಕ್ತಿಕ ಕಾರಣದಿಂದ ನಾಯಕಿ ಮಾನ್ವಿತರಾಜ್ ಬಂದಿಲ್ಲ. ರಥಸಪ್ತಮಿ ಅರವಿಂದ ಹೊರತುಪಡಿಸಿ ಮಿಕ್ಕವರೆಲ್ಲೂ ಹೊಸಬರು. ಎಲ್ಲರಿಗೂ ತರಭೇತಿ ನೀಡಿ ಕ್ಯಾಮಾರ ಮುಂದೆ ನಿಲ್ಲಿಸಿರುವೆ. ಐವತ್ತು ಲಕ್ಷ ಸಿನಿಮಾಗೆ ಖರ್ಚು ಆಗಿದೆ. ಸೆನ್ಸಾರ್‌ನವರು ಯುಎ ಪ್ರಮಾಣ ಪತ್ರ ನೀಡಿದ್ದಾರೆ. ಕರೋನದಿಂದ ಬಿಡುಗಡೆ ಮಾಡುವುದು ತಡವಾಗಿದೆ. ಸದ್ಯದಲ್ಲೆ ತೆರೆಗೆ ತರಲು ಚಿಂತನೆ ನಡೆಸಲಾಗಿದೆ. ಮಾದ್ಯಮದ ಸಹಕಾರಬೇಕೆಂದು ಕೋರಿದರು.


ಕಲಾವಿದರುಗಳಾದ ವಾಸುದೇವ್‌ಆಚಾಪುರ, ಕುಳ್ಳಯೋಗೀಶ್, ನಾಯಕಿಯ ತಾಯಿಯಾಗಿ ಕಾಣಿಸಿಕೊಂಡಿರುವ ಪುಷ್ಪನಾಯಕ್, ಚೇತನ್‌ಶೆಟ್ಟಿ, ಅಕ್ಷರ ಇವರೆಲ್ಲರೂ ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಸ್ ಎಂದಷ್ಟೇ ಹೇಳಿದರು. ತಾರಗಣದಲ್ಲಿ ಸೌಪರ್ಣಿಕ, ನೂತನ್, ಯುವರಾಜ್, ಪ್ರವೀಣ್‌ರಾಜ್‌ಪುತ್ತೂರು, ಪ್ರದೀಪ್‌ಮೆಂಥೆಲ್, ಉಮೇಶ್.ಕೆ.ಎಲ್, ಆಚಾರ್ಯರಾಘು ಮುಂತಾದವರ ನಟನೆ ಇದೆ. ನಾಲ್ಕು ಹಾಡುಗಳಿಗೆ ರಾಜ್‌ಭಾಸ್ಕರ್ ಸಂಗೀತ, ಎರಡು ಸಾಹಸಗಳಿಗೆ ಜಾಗ್ವಾರ್‌ಸಣ್ಣಪ್ಪ, ಛಾಯಾಗ್ರಹಣ ರವಿ-ವಾಸು, ನೃತ್ಯ ಜೈಮಾಸ್ಟರ್, ಸಂಕಲನ ಕವಿತಾಬಂಡಾರಿ ಚಿತ್ರಕ್ಕಿದೆ. ಸಿರಿ ಮ್ಯೂಸಿಕ್ ಸಂಸ್ಥೆಯು ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ.

Share this post:

Related Posts

To Subscribe to our News Letter.

Translate »