Left Ad
ಟ್ರೈಲರ್‌ನಲ್ಲಿ ಮಾರ್ನಾಮಿ ಮಾರ್ದನಿ! ಕರಾವಳಿ ಕಥೆಗೆ ಪ್ರೇಕ್ಷಕ ಫಿದಾ - Chittara news
# Tags

ಟ್ರೈಲರ್‌ನಲ್ಲಿ ಮಾರ್ನಾಮಿ ಮಾರ್ದನಿ! ಕರಾವಳಿ ಕಥೆಗೆ ಪ್ರೇಕ್ಷಕ ಫಿದಾ

ಮಾರ್ನಾಮಿ, ರಿಶಿತ್‌ ಶೆಟ್ಟಿ ಚೊಚ್ಚಲ ನಿರ್ದೇಶನದ, ರಿತ್ವಿಕ್‌ ಅವರು ಮೊದಲ ಬಾರಿಗೆ ಬೆಳ್ಳಿತೆರೆ ಮೇಲೆ ಹಿರೋ ಆಗಿ ಕಾಣಿಸಿಕೊಂಡು, ಪ್ರತಿಭಾವಂತ ನಟಿ ಚೈತ್ರಾ ಆಚಾರ್‌ ಅವರಿಗೆ ಜೊತೆಯಾಗಿರುವ ಚಿತ್ರ. ಟ್ರೈಲರ್‌ ರಿವ್ಯೂ ಮಾಡೋ ಮೊದಲು ಗಮನ ಸೆಳೆದಿದ್ದು ಚಿತ್ರದ ಹಾಡು ಮತ್ತು ಹಿರೋ, ಹಿರೋಯಿನ್‌ ಇಂಟ್ರಡಕ್ಷನ್‌. ಅದರಲ್ಲಿನ ಕ್ರಿಯೇಟಿವಿಟೀ ನೋಡಿ ಈ ಸಿನಿಮಾ ಮೇಲೆ ಭರವಸೆ ಇಡ್ಕೊಬಹುದು ಎಂದು ಅನಿಸಿದ್ದು ಸುಳ್ಳಲ್ಲ. ಧರಣಿ ಮಂಡಲ ಮಧ್ಯದೊಳಗೆ ಹಾಡಿನ ಥೀಮ್‌ ನಲ್ಲಿ ಮೂಡಿಬಂದ ಟ್ರೈಲರ್‌ ಸಾಕಷ್ಟು ಇಂಪ್ರೆಸ್‌ ಮಾಡಿದೆ.

ರಾ, ರಸ್ಟಿಕ್‌, ಅಥೆಂಟಿಕ್‌ ಫೀಲ್‌ ಇದೆ. ಕರಾವಳಿಯ ಹುಲಿಕುಣಿತದ ಜೊತೆಗೆ ಅಲ್ಲಿನ ರಾಜಕೀಯ, ಅಂಡರ್‌ ವರ್ಡ್‌ಗೆ ಕನ್ನಡಿ ಹಿಡಿದ ಹಾಗಿದೆ. ಒಟ್ಟಿನಲ್ಲಿ ಇದು ಒಂದು ಹೊಸ ಫೀಲ್‌ ಕೊಟ್ಟ ಟ್ರೈಲರ್‌. ಟೆಕ್ನಿಕಲೀ ಸಿನಿಮಾ ರಿಚ್‌ ಆಗಿರೋದು ಟ್ರೈಲರ್‌ನಲ್ಲೇ ಗೊತ್ತಾಗುತ್ತೆ. ಪರಫಾಮೆನ್ಸ್‌ ಬಗ್ಗೆ ಮಾತಾಡೋ ಹಾಗಿಲ್ಲ, ಪ್ರತಿಯೊಬ್ಬರೂ ಜೀವಿಸಿದ್ದಾರೆ. ಅದರಲ್ಲೂ ರಿತ್ವಿಕ್‌ ಚೇತುವಾಗಿ ಸಿನಿಮಾ ನೋಡುವ ಕುತೂಹಲ ಹುಟ್ಟಿಸುತ್ತಾರೆ. ಅವರ ಎನರ್ಜಿ ನಿಜಕ್ಕೂ ಅದ್ಭುತ. ಚೈತ್ರಾ ಆಚಾರ್‌ ಬಾಯಲ್ಲಿ ಕರಾವಳಿ ಕನ್ನಡ ಕೇಳೋದೇ ಸಕತ್‌ ಕ್ಯೂಟ್‌ . ಬ್ಯಾಗ್ರೌಂಡ್‌ ಸ್ಕೋರ್‌ ಕರಾವಳಿಯ ಪ್ರತಿಭೆಯೇ ಮಾಡಿರಬೇಕು ಅನ್ನುವಷ್ಟರ ಮಟ್ಟಿಗೆ ಮೈಸೂರಿನ ಅಸಾಧಾರಣ ಪ್ರತಭೆ ಚರಣ್‌ರಾಜ್‌ ಅದ್ಭುತ ಕೆಲಸ ಮಾಡಿದ್ದಾರೆ. ಚರಣ್‌ ರಾಜ್‌ ಸಂಗೀತ ತೆರೆಯ ಮೇಲೆ ಸಿನಿಮಾ ನೋಡುವ ಸಂಭ್ರಮವನ್ನು ಖಂಡಿತಾ ಹೆಚ್ಚಿಸಿಲಿದೆ. ಟ್ರೇಲರ್‌ನಲ್ಲಿ ಕಥೆಯನ್ನು ಬಿಟ್ಟು ಕೊಡದೇ ಹೋದರೂ ʻಧರ್ಮವೇ ತನ್ನ ತಾಯಿ ತಂದೆ, ಪ್ರೀತಿಯೇ ತನ್ನ ಬಂದು ಬಳಗʼ ಅನ್ನುವ ಚೇತು ಬೆಂಕಿಯಾಗಿ ಹೇಗೆ ಬದಲಾಗುತ್ತಾನೆ ಎಂಬವುದನ್ನು ಹೇಳುವ ಚಿತ್ರ  ಇದಾಗಿದೆ ಎಂಬ ಗುಮಾನಿ ಮೂಡುತ್ತದೆ.

ಸುದೀಪ್‌ ನರೇಶನ್‌ ಟ್ರೈಲರ್‌ಗೆ ಒಂದು ಅದ್ಭುತ ಶಕ್ತಿಯನ್ನು ತಂದುಕೊಟ್ಟಿದೆ. ಹೊಸಬರ ಸಿನಿಮಾ ಒಲವಿಗೆ ಸುದೀಪ್‌ ಸಾಥ್‌ ನೀಡಿರೋದಿಕ್ಕೆ ಅವರಿಗೆ ಅಭಿನಂದನೆ. ಇನ್ನು ಟ್ರೈಲರ್‌ನಲ್ಲಿ ಒಂದು ನಾರ್ಮಲ್‌ ಅಲ್ಲದ ಲವ್‌ ಸ್ಟೋರಿ ಕಾಣ್ಬಹುದು. ಟ್ರೈಲರ್‌ನಲ್ಲೇ ಮದುವೆ ಮುಗಿಸಿರುವ ನಿರ್ದೇಶಕರು ಬೆರೇಯದೇ ಮಹತ್ತರವಾದ ಕಥೆ ಹೇಳುವ ಹಿಂಟ್‌ ಕೊಟ್ಟಿದ್ದಾರೆ. ಸಿನಿಮಾ ಬ್ಯಾಕ್‌ ಡ್ರಾಪ್‌ ಇಂಟ್ರೆಸ್ಟಿಂಗ್‌ ಆಗಿದ್ದು, ಎಂಭತ್ತರ ದಶಕದ ಕಥೆಯೊಂದನ್ನು ಚಿತ್ರ ತಂಡ ಹೇಳುವ ಪ್ರಾಮಾಣಿಕ ಪ್ರಯತ್ನ ಮಾಡಿದೆ ಎಂದೆನೆಸುತ್ತದೆ. ಗಟ್ಟಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸೋನು ಗೌಡ ನಿರ್ಧಾರದ ಬಗ್ಗೆ ಹೆಮ್ಮೆ ಮೂಡುತ್ತದೆ. ಅಲ್ಲಲ್ಲಿ ಕಾಣುವ ಟಿಪಿಕಲ್‌ ಕರಾವಳಿ  ಕಾಮಿಡಿ ಕಚಗುಳಿ ನೀಡುತ್ತದೆ. ಸಿನಿಮಾದ ಪ್ಲಾಟ್‌ ರಿಫ್ರೆಶಿಂಗ್‌ ಆಗಿದೆ. ಹುಲಿವೇಷ ಕಥೆಗೆ ಇಂಟ್ರಸ್ಟಿಂಗ್‌ ಲೇಯರ್‌ ಆಡ್‌ ಮಾಡಿದೆ. ರಿತ್ವಿಕ್‌ ಅಂಡ್‌ ಚೈತ್ರಾ ಅವರು ಪಾತ್ರವನ್ನು ತುಂಬಾ ಚೆನ್ನಾಗಿ ಕ್ಯಾರಿ ಮಾಡಿದ್ದಾರೆ. ಎಷ್ಟು ಕ್ಯೂಟ್‌ ಮರ‍್ರೆ ನೀವು ಅಂಥ ಸಿನ್ಮಾ ರಿಲೀಸ್‌ ಆದ ಮೇಲೆ ಪ್ರೇಕ್ಷಕರು ಚೈತ್ರಾ ಬಗ್ಗೆ ಹೇಳುವ ಸಾಧ್ಯತೆ ಇದೆ.  ರಿತ್ವಿಕ್‌ ಅವರ ಮೊದಲ ಬೆಳ್ಳಿತೆರೆ ಪ್ರಯತ್ನ ಆದ್ರೂ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಬಹುದಾದ ನಟ ಎಂಬುದನ್ನು ತೋರಿಸಿದ್ದಾರೆ. ವಿಶುವಲೀ ರಿಚ್‌ ಸಿನಿಮಾ ಮೂಡಿ ಬಂದಿದ್ದು, ಕರಾವಳಿ ಆಚರಣೆಗಳು, ಹುಲಿವೇಶ ಸೀಕ್ವೆನ್ಸ್‌ ಅಥೆಂಟಿಕ್‌ ಆಗಿವೆ. ʻತೆಗ್ದೇ ತೇಗಿತೇನೆʼ ಅನ್ನುವ ಸಂಭಾಷಣೆ, ಹಿರೋ ಶ್ರಧ್ದಾಂಜಲಿ ಕಾರ್ಡ್‌ ಹೀಗೆ ಸಾಕಷ್ಟು ಅಂಶಗಳು ನಿಜಕ್ಕೂ ಇಂಟ್ರೆಸ್ಟಿಂಗ್‌ ಆಗಿದೆ.

ಹೊಸ ಪ್ರತಿಭೆಗಳನ್ನು ನಂಬಿಕೊಂಡು ದುಡ್ಡು ಹಾಕಿದ ನಿಶಾಂತ್‌ ಮತ್ತು ಶಿಲ್ಪಾ ನಿಶಾಂತ್‌, ಕರಾವಳಿಯ ಅಂದವನ್ನು ಅದ್ಭುತವಾಗಿ ಕಟ್ಟಿಕೊಟ್ಟಿರುವ ಶಿವಸೇನಾ, ಅಪರೂಪದ ಕಥೆ ಕೊಟ್ಟ ಸುಧೀ ಆರ್ಯನ್‌ ಹೀಗೆ ಇಡೀ ತಂಡಕ್ಕೆ ಅಡ್ವಾನ್ಸ್‌ ಆಗಿ ಅಭಿನಂದನೆಗಳು. ಯಾಕಂದ್ರೆ  ಟ್ರೈಲರ್‌ ಮೂಡಿಸಿದ ಭರವಸೆ ಅಂಥದ್ದು.

ʻಏ ಮಾರಾಯ್ರೆ ಎಂತ ಗೊತ್ತಾ ಹಾಡಿನ ʼಕಂಪೋಸಿಶನ್‌ ಸಾಹಿತ್ಯ ಚೆನ್ನಾಗಿ ಮೂಡಿ ಬಂದಿದ್ದು, ಪ್ರೇಕ್ಷಕರ ಪ್ಲೇ ಲಿಸ್ಟ್‌ಲ್ಲೂ ಕೂಡ ಅದು ಆಡ್‌ ಆಗಿದೆ. ಚರಣ್‌ ರಾಜ್‌ ಕೂಡ ಈದೇ ಹಾಡಿನ ಟ್ಯೂನ್‌ ಅನ್ನು ಟ್ರೈಲರ್‌ನಲ್ಲಿ ಕನ್ವಿನ್ಸಿಂಗ್‌ ಆಗಿ ಬಳಸಿಕೊಂಡಿದ್ದಾರೆ. ಟ್ರೇಲರ್‌ ಹೇಗಿರ‍್ಬೇಕು ಅಂದ್ರೆ ಸಿನಿಮಾನಾ ನೋಡುವ ಕ್ಯೂರಾಯಿಸಿಟಿ ಕ್ರಿಯೇಟ್‌ ಮಾಡ್ಬೇಕು ಮಾರ್ನಾಮಿಯ ಎಲ್ಲಾ ಕಂಟೆಂಟ್‌ಗಳೂ ಕ್ಯೂರಾಯಿಸಿಟಿನ ಕ್ರೀಯೇಟ್‌ ಮಾಡಿದೆ. ಇಂಡಸ್ಟ್ರಿಗೆ ರಿಶಿತ್‌ ಶೆಟ್ಟಿಯಂತಹ ನಿದೇಶಕರು ಬೇಕು. ಟ್ರೈಲರ್‌ ನೋಡಿದ್ರೆ ಕರಾವಳಿಯ ತ್ರಿಬಲ್‌ ʻಆರ್‌ʼ ಜೊತೆ ಇನ್ನೊಂದು ʻಆರ್‌ ʼಸೇರುವ ಎಲ್ಲಾ ಲಕ್ಷಣ ಕಾಣ್ತಾಇದೆ. ಇನ್ನು,  ಇಂಥ ಹೊಸಬರ ಪ್ರಯತ್ನ ಆಗ್ತಾನೆ ರ‍್ಬೇಕು.  ಆ ಪ್ರಯತ್ನ ಚೆನ್ನಾಗಿದೆ ಅನ್ನಿಸಿದಾಗ ಪ್ರೇಕ್ಷಕರು ಸಿನಿಮಾ ನೋಡಿ ಪ್ರೋತ್ಸಾಹ ನೀಡಬೇಕು. ಸಿನಿಮಾ ಇದೇ ನವೆಂಬರ್‌ 28ಕ್ಕೆ ರಿಲೀಸ್‌ ಆಗ್ತಿದೆ. ಮಿಸ್‌ ಮಾಡ್ದೇ ನೋಡಿ.

Spread the love
Translate »
Right Ad