Sandalwood Leading OnlineMedia

ಸ್ಟಾರ್‌ನ್ನೇ ಬದಲಾಯಿಸುವ `ಎಂಸ್ಟಾರ್’

 

ಕೊರೊನಾ ಹೆಮ್ಮಾರಿಯಿಂದಾಗಿ ಡಲ್ ಆಗಿದ್ದ ಸ್ಯಾಂಡಲ್‌ವುಡ್ ಮತ್ತೆ ಗರಿಗೆದರಿ ನಿಂತಿದೆ. ಪ್ಯಾನ್‌ಇಂಡಿಯಾ concept ಮೀರಿ, ಕನ್ನಡ ಚಿತ್ರಗಳು ಪ್ಯಾನ್‌ವರ್ಲ್ಡ್ ಚಿತ್ರಗಳಾಗಿ ಜಾಗತಿಕವಾಗಿ ಮನ್ನಣೆ ಪಡೆಯುತ್ತಿದೆ. ಮೂಲಕ ಚಿತ್ರದ ಕಲಾವಿದರೂ ಜಾಗತಿಕ ಮಟ್ಟದಲ್ಲಿ ಪ್ರೇಕ್ಷಕರಿಗೆ ಹತ್ತಿರವಾಗುತ್ತಿದ್ದಾರೆ. ಬೆಳವಣಿಗೆಯಿಂದಾಗಿ ಸಾಕಷ್ಟು ಮಂದಿ ಪ್ರತಿಭಾನ್ವಿತ ನಟ/ನಟಿಯರು ಬಣ್ಣದ ಲೋಕದ ಬಣ್ಣ ಬಣ್ಣದ ಕನಸುಗಳನ್ನು ಹೊತ್ತು ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಆದರೆ, ಅವರಿಗೆ ಸೂಕ್ತ ಮಾರ್ಗದರ್ಶನದ ಕೊರತೆಯಿಂದಾಗಿ ತಮ್ಮ ಕನಸನ್ನು ಸಹಕಾರಗೊಳಿಸುವ ಹಪಹಪಿತನದಲ್ಲಿ ದಾರಿ ತಪ್ಪಿದವರೂ ಇದ್ದಾರೆ. ನಿಟ್ಟಿನಲ್ಲಿ ನಿಜಕ್ಕೂ ಸಿನಿಮಾ ಪ್ರೀತಿಯಿಂದ ನಟ/ನಟಿಯಾಗಬೇಕು ಎಂಬ ಆಸಕ್ತಿ ಇರುವವರಿಗೆ ಸೂಕ್ತ ಮಾರ್ಗದರ್ಶನದೊಂದಿಗೆ, ಅವರ ಪ್ರತಿಭೆಗೆ ತಕ್ಕ ಅವಕಾಶವನ್ನು ಕಲ್ಪಿಸುವಲ್ಲಿ ರವಿಕುಮಾರ್ ಒಡೆತನದ `ಎಂಸ್ಟಾರ್ ಕಾಸ್ಟಿಂಗ್ ಹೌಸ್’ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ.

 

 ಬಾಲಿವುಡ್‌ನಿಂದ `ಶುಗರ್‌ಲೆಸ್’ಗೆ ಸಿಹಿಸುದ್ದಿ!

`ಎಂಸ್ಟಾರ್ ಕಾಸ್ಟಿಂಗ್ ಹೌಸ್ ಹುಟ್ಟು

ದಶಕಗಳಿಂದ ಕನ್ನಡ ಚಿತ್ರರಂಗಕ್ಕೆ ಕಲಾವಿದರನ್ನು ಪರಿಚಯಿಸುವ ಕೆಲಸವನ್ನು ರವಿ ಕುಮಾರ್ ಮಾಡುತ್ತಿದ್ದಾರೆ. ಅವರು `ಎಂ ಸ್ಟಾರ್ ಕಾಸ್ಟಿಂಗ್ ಹೌಸ್’ ಆರಂಭಿಸಿದ್ದರ ಹಿಂದೆ ಒಂದು ರೋಚಕ ಕಥೆ ಇದೆ. ಅದಾಗ್ಯೂ, ರವಿಕುಮಾರ್ `ಕಾಸ್ಟಿಂಗ್ ಹೌಸ್’ ಒಂದನ್ನು ತರೆಯುವ ಅಭಿಲಾಶೆಯೊಂದಿಗೆ ಚಂದನವನದ ಬಾಗಿಲು ತಟ್ಟಿದ್ದಲ್ಲ, ಬದಲಾಗಿ ತಾನೂ ಒಬ್ಬ ನಟನಾಗಿ ಗುರುತಿಸಿಕೊಳ್ಳಬೇಕು ಎಂಬ ಮಹದಾಸೆಯಿಂದ ಕಾಲಿಟ್ಟವರು. ಆದರೆ ಆದದ್ದೇ ಬೇರೆ. ನಟನಾಗಿ ಅವಕಾಶಗಳಿಗಾಗಿ ಪ್ರಯತ್ನಿಸುತ್ತಿರುವಾಗ, ರವಿಯವರ ಸಿನಿಮಾ ಪ್ರೇಮವನ್ನು ಗುರುತಿಸಿದ್ದ  ಹಿರಿಯ ನಿರ್ದೇಶಕರೊಬ್ಬರು ಅವರಲ್ಲಿ, “ನೀನು ಅವಕಾಶಕ್ಕಾಗಿ ಅಲೆಯುತ್ತಿರುವಂತೆಯೇ, ಸಾಕಷ್ಟು ಮಂದಿ ಸರಿಯಾದ ಮಾರ್ಗದರ್ಶನ ಸಿಗದೆ ಅವಕಾಶದಿಂದ ವಂಚಿತರಾಗುತ್ತಿದ್ದಾರೆ, ನಿನ್ಯಾಕೆ ಅವರಿಗೆ ಒಂದು ವೇದಿಕೆ ಕಲ್ಪಿಸಬಾರದು?’’ ಎಂದು ಕೇಳಿದರಂತೆ ಅವರ ಪ್ರಶ್ನೆಯನ್ನೇ ಗಂಭೀರವಾಗಿ ಪರಿಗಣಿಸಿದ ರವಿ ಕುಮಾರ್, ಬೃಹತ್ ಎತ್ತರವಾಗಿ ಬೆಳೆದು ನಿಂತಿರುವ `ಎಂಸ್ಟಾರ್ ಕಾಸ್ಟಿಂಗ್ ಹೌಸ್’ನ್ನು ಉತ್ತರವಾಗಿ ನೀಡಿದ್ದಾರೆ.

 

ಇನ್ನೊಬ್ಬರ ಕನಸು ನನಸಾದ ಖುಷಿ

ತಮ್ಮ `ಕಾಸ್ಟಿಂಗ್ ಹೌಸ್’ ಮೂಲಕ ಚಿತ್ರರಂಗದಲ್ಲಿ ನಿಜವಾದ ಪ್ರತಿಭೆಗೆ ಉತ್ತಮ ಅವಕಾಶ ಕಲ್ಪಿಸುದರಲ್ಲಿ ಆತ್ಮತೃಪ್ತಿಯನ್ನು ಪಡೆದುಕೊಳ್ಳುವ ರವಿಕುಮಾರ್, ತಮ್ಮ ಅಭಿನಯದ ಒತ್ತಾಸೆಯನ್ನು ಕೂಡ ಮುಂದುವರಿಸಿದ್ದಾರೆ. ತನಿಖೆ, ಟೈಗರ್‌ಗಲ್ಲಿ, ಧೈರ್ಯಂ ಚಿತ್ರಗಳು ಸೇರಿದಂತೆ ಮೂವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿರುವ ರವಿ ಅವರು ಮುಂದಿನ ದಿನಗಳಲ್ಲಿ ವಿಶೇಷ ಪಾತ್ರಗಳ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಯವಾಗಲಿದ್ದಾರೆ.

`777 ಚಾರ್ಲಿ’ HONEST REVIEW

 

`ಎಂಸ್ಟಾರ್ ಕಾಸ್ಟಿಂಗ್ ಹೌಸ್ ಕಾರ್ಯವೈಖರಿ

ಚಿತ್ರರಂಗದಲ್ಲಿನ ಹಲವು ವಿಭಾಗಳಲ್ಲಿ `ಕಲಾವಿದರು’ ಅನ್ನುವ ವಿಭಾಗವೂ ಅತ್ಯಂತ ಪ್ರಾಮುಖ್ಯವಾದುದು. ನಿರ್ದೇಶಕ ಕಂಡಿರುವ ಕನಸು ನನಸು ಮಾಡಲು ಸೂಕ್ತ ಕಲಾವಿದರು ಅತ್ಯಗತ್ಯ. ಅಂತಹ ಸೂಕ್ತ ಕಲಾವಿದರು ಮತ್ತು ನಿರ್ದೇಶಕರ ಮಧ್ಯೆ ಕೊಂಡಿಯಾಗಿರೋದು `ಎಂಸ್ಟಾರ್ ಕಾಸ್ಟಿಂಗ್ ಹೌಸ್’. ಆದರೆ ಕೆಲಸ ಸುಲಭದ ಮಾತಲ್ಲ. ಕಲಾವಿದರನ್ನು ಪರಿಚಯಿಸಲು ಅದಕ್ಕೆ ಸಾಕಷ್ಟು ಅನುಭವ, ಚಿತ್ರರಂಗದ ನಿರ್ದೇಶಕ, ನಿರ್ಮಾಪಕ, ತಂತ್ರಜ್ಞರ ಒಡನಾಟದಲ್ಲಿರಬೇಕು. ಹಾದಿಯಲ್ಲಿ ಒಂದು ದಶಕದಿಂದ ಸಿನಿಮಾ ಜಾಹೀರಾತು, ಮಾಡಲಿಂಗ್, ಧಾರಾವಾಹಿಗಳಿಗೆ ಕಾಸ್ಟಿಂಗ್ ಮಾಡುತ್ತಿರುವ ರವಿ, ಆರಂಭದಲ್ಲಿ ನಿರ್ಮಾಪಕ-ನಿರ್ದೇಶಕನ್ನು ಭೇಟಿಯಾಗಿ, ಅವರ ಸಿನಿಮಾ/ಧಾರವಾಹಿಗೆ ಬೇಕಾದ ನಟ/ನಟಿಯರನ್ನು ಒದಗಿಸುತ್ತಿದ್ದರು. ಆದರೆ, ಈಗ ನಟ/ನಟಿಯರ ಅಗತ್ಯ ಕಂಡುಬ0ದಲ್ಲಿ ಮೊದಲು ರವಿಕುಮಾರ್ ಅವರನ್ನು ತಾವಾಗಿಯೇ ಸಂಪರ್ಕಿಸುತ್ತಾರೆ. ಅಷ್ಟರ ಮಟ್ಟಿಗೆ ಚಿರಪರಿಚಿತರಾಗಿದ್ದಾರೆ.

 

 

ಹಿರಿತೆರೆಕಿರುತೆರೆಯಲ್ಲೂ `ಎಂಸ್ಟಾರ್ ಕಾಸ್ಟಿಂಗ್ಹೌಸ್ ಛಾಪು

ಕನ್ನಡ ಕಿರುತೆರೆಯ ಮಹಾಭಾರತ, ಅಮೃತವರ್ಷಿಣಿ, ಪುಟ್ಟ ಗೌರಿ ಮದುವೆ… ಹೀಗೆ ಸಾಕಷ್ಟು ಜನಪ್ರಿಯ ಧಾರಾವಾಹಿಗಳಿಗೆ ಕಾಸ್ಟಿಂಗ್ ಮಾಡುವ ಮೂಲಕ ಕಿರುತೆರೆಯಲ್ಲೂ `ಎಂಸ್ಟಾರ್ ಕಾಸ್ಟಿಂಗ್‌ಹೌಸ್’ ತನ್ನದೇ ಆದ ಛಾಪು ಮೂಡಿಸಿದೆ. ಇನ್ನು. ಐರಾವತ, ಅಂಬರೀಶ, ದೇವತೆ, ಧೈರ್ಯಂ, ಆಪ್ತಮಿತ್ರ-2, ಟೈಗರ್ ಶೀಲಾ, ಬಾಂಬೆ ಮಿಠಾಯಿ, ಡಬಲ್ ಇಂಜಿನ್, ಲವ್‌ಯೂರಚ್ಚು, ಅಬ್ಬರ… ಹೀಗೆ ಸಾಕಷ್ಟು ಪ್ರತಿಷ್ಟಿತ ನಿರ್ಮಾಣ ಸಂಸ್ಥೆಗಳಲ್ಲಿ ನಿರ್ಮಾಣವಾಗಿರುವ ಚಿತ್ರಗಳಿಗೆ, ನಾಯಕ, ನಾಯಕಿ ಹಾಗೂ ಪೋಷಕಪಾತ್ರಧಾರಿಗಳನ್ನು ಪರಿಚಯಿಸಿದ ಹೆಗ್ಗಳಿಕೆ `ಎಂಸ್ಟಾರ್ ಕಾಸ್ಟಿಂಗ್‌ಹೌಸ್’ ಸಂಸ್ಥೆಯದ್ದು.

 

`ಎಂಸ್ಟಾರ್’ ಮೂಲಕ ಪರಿಚಯವಾದ ಕಲಾವಿದರು ಇವತ್ತು ಬೇರೆ ಭಾಷೆಗಳಿಗೂ ಕಾಲಿಟ್ಟಿದಾರೆ. ತೆಲಗು ಚಿತ್ರರಂಗದಲ್ಲಿ ಬಿಝಿಯಾಗಿರುವ ಅಕ್ಷತಾ ಶ್ರೀನಿವಾಸ್ ಅವರನ್ನು ಮೊದಲು ಪರಿಯಸಿದ್ದು `ಎಂಸ್ಟಾರ್,  `ಧೈರ್ಯಂ’ಚಿತ್ರಕ್ಕೆ ಅದಿತಿ ಪ್ರಭುದೇವಾ ಅವರನ್ನು ಪರಿಯಸಿದ್ದು ಮಾಡಿದ್ದು ಇದೇ agency.  ಇನ್ನು, `ಶೀಲಾ’ ಚಿತ್ರಕ್ಕೆ ರಾಗಿಣಿಯವರನ್ನು, `ಪಿಂಕ್‌ನೋಟ್’ ಚಿತ್ರಕ್ಕೆ ಭಾವನಾ ಮೆನನ್ ಅವರನ್ನು ಕಾಷ್ಟಿಂಗ್ ಮಾಡಿದ್ದು ಇದೇ `ಎಂಸ್ಟಾರ್’ ಸಂಸ್ಥೆ. ಈಗಾಗಲೇ ಚಿತ್ರರಂಗಕ್ಕೆ  ಇನ್ನೂರಕ್ಕೂ ಹೆಚ್ಚು ಹೀರೋ/ಹೀರೋಯಿನ್‌ಗಳನ್ನು ಪರಿಚಯಿಸಿರುವ `ಎಂಸ್ಟಾರ್ ಕಾಸ್ಟಿಂಗ್ ಹೌಸ್’ ಜನಪ್ರಿಯ ನಟ-ನಟಿಯರ ಹೆಸರನ್ನು ಸೂಚಿಸುವುದು ಮಾತ್ರವಲ್ಲದೇ, ಹೆಸರಾಂತ ನಟ-ನಟಿಯರ್ ಕಾಲ್ ಶೀಟ್ ಕೊಡಿಸುವಲ್ಲೂ ಪ್ರಮುಖಪಾತ್ರ ವಹಿಸುತ್ತದೆ.

ಈಗಾಗಲೇ ಚಿರಪರಿಚಿತವಾಗಿರುವ `ಎಂಸ್ಟಾರ್’, ಮುಂದಿನ ದಿನಗಳಲ್ಲಿ ಬಹುಬೇಡಿಕೆಯ ಕಾಸ್ಟಿಂಗ್ ಏಜೆನ್ಸಿ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಏಕೆಂದರೆ, ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯವಾಗಿರುವ `ಎಂಸ್ಟಾರ್’ ನಿರ್ದಿಷ್ಟ ಆಕಾಂಕ್ಷಿಗಳನ್ನು ಶೀಘ್ರದಲ್ಲಿ ತಲುಪವಲ್ಲಿ ಸಫಲವಾಗಿದೆ. ಮೂಲಕ  ನಟ/ನಟಿಯಾಗಿ ಗುರುತಿಸಿಕೊಳ್ಳಲು ಹಂಬಲಿಸುವ ಹೊಸ ಪ್ರತಿಭೆಗಳು ಚಿತ್ರರಂಗದಲ್ಲಿ ಬೇರೂರಲು ಸಹಾಯಕವಾಗಿದೆ. ಆಸಕ್ತರು mstarcastinghouse@gmail.com, 9844998468 ಸಂಪರ್ಕಿಸಬಹುದು. 

FACEBOOK    YOUTUBE

 

 

 

Share this post:

Related Posts

To Subscribe to our News Letter.

Translate »