ನಿರ್ದೇಶಕ ಹಾಗು ನಾಯಕ ನಟ ಜೋಗಿ ‘ ಪ್ರೇಮ್ ‘ ಅವರು ಮೊದಲ ಬಾರಿಗೆ ಯವ ನಿರ್ದೇಶಕ ‘ ಎಂ.ಶಶಿಧರ್ ‘ ಅವರಿಗೆ ನಿರ್ದೇಶನದ ಜವಾಬ್ದಾರಿಯನ್ನು ಕೊಟ್ಟಿದ್ದಾರೆ. ಸುಮಾರು ವರ್ಷಗಳ ನಂತರ ಪ್ರೇಮ್ ಅವರೆ ಮತ್ತೆ ನಾಯಕ ನಟನಾಗಿ ತೆರೆ ಮೇಲೆ ಮಿಂಚಲು ತಯಾರಿ ನಡೆಸಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದ ಬಗ್ಗೆ ಹೇಳುವುದಾದರೆ, ಇದೊಂದು ಸೌತ್ ಇಂಡಿಯಾದ ಮೊಟ್ಟ ಮೊದಲ ಜೋಂಬಿ ಚಿತ್ರವಾಗಿದ್ದು, ಸೈಕಾಲಾಜಿಕಲ್ ತ್ರಿಲ್ಲರ್ ಕತೆ ಇರಲಿದೆ. ಮತ್ತು ಈ ಸಿನೆಮಾವನ್ನು ಪ್ಯಾನ್ ಇಂಡಿಯಾ ಮಾಡಲು ಚಿತ್ರತಂಡದವರು ತಯಾರಿ ನಡೆಸುತ್ತಿದ್ದಾರೆ, ಹಾಗೆ ಈ ಚಿತ್ರದಲ್ಲಿ ಬಹು ದೊಡ್ಡ ಬೇರೆ ಭಾಷೆ ತಾರಾ ಬಳಗವಿದೆ. ಚಿತ್ರ ಪ್ರೇಮಿಗಳಿಗೆ ಮತ್ತು ಪ್ರೇಮ್ ಅಭಿಮಾನಿಗಳಿಗೆ ಹೊಸ ಅನುಭವ ಕೊಡಲು ಪ್ರೇಮ್ ಅವರನ್ನು ಈ ಹಿಂದೆ ಯಾರೂ ತೋರಿಸದ ರೀತಿಯಲ್ಲಿ ಹೊಸ ಗೆಟಪ್ ಮತ್ತು ಡಿಫರೆಂಟ್ ಲುಕ್ ನಲ್ಲಿ ತೋರಿಸಲು ನಿರ್ದೇಶಕ ಎಂ. ಶಶಿಧರ್ ತುಂಬ ತಯಾರಿ ಮಾಡಿಕೊಂಡಿದ್ದಾರೆ. ಇದೇ ತಿಂಗಳು 22 ಕ್ಕೆ ಪ್ರೇಮ್ ಹುಟ್ಟು ಹಬ್ಬದ ದಿನದಂದು ಚಿತ್ರದ ಫಸ್ಟ್ ಲುಕ್ ಬಿಡಲು ಚಿತ್ರತಂಡ ತೀರ್ಮಾನಿಸಿದೆ.
ಮೈಸೂರಿನವರಾದ 28 ವರ್ಷದ ಎಂ. ಶಶಿಧರ್ ಅವರು ಎಂ.ಎಸ್.ಸಿ ಇನ್ ಫಿಲ್ಮ್ ಮೇಕಿಂಗ್ ಕಲಿತವರಾಗಿದ್ದು, VFX ನಲ್ಲಿ ತುಂಬ ಪರಿಣಿತಿ ಹೊಂದಿದ್ದಾರೆ. ಈಗಾಗಲೇ ಎಲ್ಲಾ ಭಾಷೆಗೆ ಡಬ್ ಆಗಿ, ಸಾಯಿ ಕುಮಾರ್, ಸಂಪತ್ ರಾಜ್, ಅರುಣ್ ಸಾಗರ್, ದೇವಗಿಲ್, ರಾಹುಲ್ ದೇವ್ ಅಂತಹ ತಾರಾಬಳಗವಿರುವ, ಬಿಡುಗಡೆಗೆ ಸಿದ್ಧವಾಗಿರುವ ಘಾರ್ಗಾ ಚಿತ್ರವನ್ನು ತುಂಬ ಅಚ್ಚುಕಟ್ಟಾಗಿ ಚಿತ್ರೀಕರಿಸಿದ್ದಾರೆ, ಅಲ್ಲದೆ ಘಾರ್ಗಾ ಚಿತ್ರದ ಮೂಲಕ ಅಶ್ವಿನಿ ರಾಮ್ ಪ್ರಸಾದ್ ಅವರ ಮಗನಾದ ಅರುಣ್ ರಾಮ್ ಪ್ರಸಾದ್ ಅವರನ್ನು ಮೊದಲ ಬಾರಿಗೆ ಬೆಳ್ಳಿ ಪರದೆ ಮೇಲೆ ಪರಿಚಯಿಸಿದ್ದಾರೆ.
ನಿರ್ಮಾಣದ ವಿಚಾರಕ್ಕೆ ಬಂದರೆ ಈ ಹಿಂದೆ ಶಿವರಾಜಕುಮಾರ್ ಅಭಿನಯದ ಪ್ರೇಮ್ ನಿರ್ದೇಶನದ ಜೋಗಿ ಚಿತ್ರಕ್ಕೆ ಬಂಡವಾಳ ಹೂಡಿದ ‘ A2 FILMS ‘ ನವರು, ಹಾಗು ಪ್ರೇಮ್ ಡ್ರೀಮ್ಸ್ ಜೊತೆಯಾಗಿ ಬಂಡವಾಳ ಹೂಡುತ್ತಿದ್ದಾರೆ, ಪ್ಯಾನ್ ಇಂಡಿಯಾ ಸಿನೆಮಾ ಹಾಗು ಬಹು ಭಾಷಾ ನಟ ನಟಿಯರಿರುವ ಕಾರಣ, ಚಿತ್ರದ ಬಡ್ಜೆಟ್ ಮೇಲೆ ಭಾರಿ ನಿರೀಕ್ಷೆ ಇದೆ, ಈ ಯುವ ನಿರ್ದೇಶಕನ ಕನಸಿಗೆ ಇಬ್ಬರು ಬೆನ್ನೆಲುಬಾಗಿ ನಿಂತಿದ್ದಾರೆ ಎಂದರೆ ತಪ್ಪಾಗಲಾರದು.