Sandalwood Leading OnlineMedia

ಅನಿರೀಕ್ಷಿತ ತಿರುವುಗಳನ್ನು ಹೊತ್ತ ಕಾಡುವ ಪ್ರೇಮ ಕಥೆ!

ನಿರ್ದೇಶಕನಾದವನು ಚಿತ್ರದ ವ್ಯವಹಾರದ ದೃಷ್ಟಿಯಿಂದ ಸ್ಟಾರ್‌ಗಳ ಮೊರೆ ಹೋಗುವುದು ಚಿತ್ರರಂಗದಲ್ಲಿ  ಸರ್ವೆಸಾಮಾನ್ಯ ಸಂಗತಿ. ಆದರೆ ನಿರ್ದೇಶಕ ಶಶಾಂಕ್ ಈ ವಿಚಾರದಲ್ಲಿ ವಿಭಿನ್ನ, ಇವರು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿ ಕನ್ನಡ ಚಿತ್ರರಂಗದಲ್ಲಿ ಗೆದ್ದು ತೋರಿಸುವುದರ ಮೂಲಕ ಅದ್ಭುತ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಿಯಿಸಿದವರು. ಈ ಬಾರಿಯೂ, ಶಶಾಂಕ್ ಪ್ರವೀಣ್ ಎಂಬ ಹೊಸ ಹೀರೋಗೆ ‘ಲವ್ 360′ ಸಿನಿಮಾ ಮೂಲಕ ಚಾನ್ಸ್ ಕೊಟ್ಟು ಗೆದ್ದು ತೋರಿಸಿದ್ದಾರೆ. `ಜಗವೇ ನೀನು ಗೆಳತಿಯೇ..’ ಹಾಡಿನಿಂದಲೇ ಜಗತ್ತನ್ನು ಗೆದ್ದಿದ್ದ ಚಿತ್ರ ಈಗ ತರೆಕಂಡು ಪ್ರೇಕ್ಷಕನನ್ನು ತಲುಪುವಲ್ಲಿ ಸಫಲವಾಗಿದೆ ಹಾಗಾದರೆ, ಸಿನಿಮಾ ಹೇಗಿದೆ? ಈ ಬಾರಿ ಹೊಸ ಪ್ರತಿಭೆಯ ಮೂಲಕ ಗೆಲ್ಲಲ್ಲು ಶಶಾಂಕ್ ಕಂಡುಕೊAಡ ಫಾರ್ಮುಲ ಯಾವುದು?

 

 

ಅಪ್ಪು ಸ್ಮರಣೆಯೊಂದಿಗೆ ಈ ಬಾರಿ ಬೆಂಗಳೂರಿನಲ್ಲಿ ನಡೆಯಲಿದೆ ಪ್ರತಿಷ್ಠಿತ `ಸೈಮಾ’ ಅವಾರ್ಡ್ಸ್ 2022

ರಾಮ್ (ಪ್ರವೀಣ್) ಮತ್ತು ಜಾನಕಿ (ರಚನಾ ಇಂದರ್) ಇಬ್ಬರು ಅನಾಥಾಶ್ರಮದಲ್ಲಿ ಜೊತೆಯಾಗಿ, ಜೀವನ ಪರ್ಯಂತ ಜೊತೆಯಾಗಿಯೇ ಇರುವಂತೆ ತಿರ್ಮಾನ ಮಾಡಿದವರು. ಶಾರ್ಟ್ ಟರ್ಮ್ ಮೆಮೊರಿ ಲಾಸ್ ಖಾಯಿಲೆಯಿಂದ ಬಳಲುತ್ತಿರುವ ಜಾನಕಿಯನ್ನು ಸರಿಪಡಿಸುವುದೇ ರಾಮ್ ಜೀವನದ ಒತ್ತಾಸೆಯಾಗಿರುತ್ತದೆ. `ಜಗವೇ ನೀನು ಗೆಳತಿಯೇ.. ಜಗವೇ ನೀನು ಗೆಳಯ’ ಎಂಬAತೆ ಅವರಿಬ್ಬರಿಗೇ ಅವರಷ್ಟೇ ಸಾಥ್. ಇವರಿಬ್ಬರ ಬದುಕಿನಲ್ಲಿ ಹಲವು ಅನೀರಿಕ್ಷಿತ ಘಟನೆಗಳು ಸಂಭವಿಸುತ್ತದೆ. ಪ್ರೇಕ್ಷಕ ಇವರಿಬ್ಬರ ನಿಷ್ಕಲ್ಮಶವಾದ ಪ್ರೀತಿಯಲ್ಲಿ ನೋಡುತ್ತಾ ತನ್ನ ಪ್ಲಾಶ್‌ಬ್ಯಾಕ್ ಪ್ರೇಮ್ ಕಹಾನಿಯಲ್ಲಿ ಮುಳಿಗಿ ಹೋದಾಗ, ಧಕ್ಕನೆ ಎದುರಾಗುವ ರಕ್ತದೋಕುಳಿ ಅವನನ್ನು ವಾಸ್ತವಕ್ಕೆ ತಂದು ನಿಲ್ಲಿಸುತ್ತದೆ. ಹಾಗಿದ್ದರೆ, ಈ ರಕ್ತದೋಕಿಳಿಗೆ ಕಾರಣವೇನು? ರಾಮ್-ಜಾನಕಿ ಕಥೆ ಏನಾಗುತ್ತದೆ? ಎಂಬ ಪ್ರಶನೆಗಳಿಗೆ ಶಶಾಂಗ್ ಸಮರ್ಥ ಚಿತ್ರಕಥೆಯ ಮೂಲಕ ಉತ್ತರ ಕೊಡುತ್ತಲೇ ಹೋಗುತ್ತಾರೆ. 

 

ಹೊಸ ಹೀರೋ ಲಾಂಚ್ ಮಾಡುವುದಕ್ಕಾಗಿಯ ಪಕ್ಕಾ ಕಮಷಿರ್ಯಲ್ ಮಸಾಲಾ ಕಥೆಗಳನ್ನು ನಿರ್ದೇಶಕರು ಆಯ್ದುಕೊಳ್ಳುವುದನ್ನು ಕಾಮನ್, ಆದರೆ ಶಶಾಂಕ್ ಒಂದು ಸರಳವಾದ ಆದರೆ ವಿರಳವಾದ ಲವ್‌ಸ್ಟೋರಿ ಆಯ್ದುಕೊಂಡು, ಅದಕ್ಕೆ ರೋಚಕವಾದ ಥ್ರಿಲ್ಲರ್ ಅಂಶಗಳನ್ನು ಸೇರಿಸುವ ಪ್ರಯತ್ನ ಮಾಡಿದ್ದಾರೆ. ಇಲ್ಲಿ ಪುಡಿಗಟ್ಟುತ್ತಾನೆ, ಆದರೆ ಆ ಫೈಟ್‌ಗಳು ಕೂಡ ಕಥೆಯ ಚೌಕಟ್ಟಿನಲ್ಲೇ ಇರುತ್ತದೆ. ಪಸ್ಟ್ಹಾಫ್ ಸಂಪೂರ್ಣವಾಗಿ ಒಂದು ಸಾಧಾರಣ ಪ್ರೇಮಕಥೆಯ ಅಸಾಧರಣ ಸಾಧ್ಯತೆಯನ್ನು ಹೇಲುವ ಶಶಾಂಕ್, ವಿರಾಮದಲ್ಲಿ ಒಂದು ಅನಿರೀಕ್ಷಿತ ಟ್ವಿಸ್ಟ್ ಕೊಟ್ಟು ಸೆಕೆಂಡ್ ಹಾಫ್ ಬಗ್ಗೆ ಕುತೂಹಲ ಹುಟ್ಟಿಸುತ್ತಾರೆ. ಫಸ್ಟ್ಹಾಫ್‌ನಲ್ಲಿ ಪ್ರೇಮಲೋಕದಲ್ಲಿ ಜಾಲಿರೈಡ್ ಮಾಡಿಸಿದ ಶಶಾಂಕ್ ಸೆಂಕೆAಡ್ ಹಾಫ್‌ನಲ್ಲಿ ಬೆಚ್ಚಿಬೀಳಿಸುತ್ತಾರೆ.

 

 

ಉದ್ಯಾನನಗರಿಯಲ್ಲಿ ಶುರುವಾಯ್ತು `ಲೈಗರ್’ ಫಿವರ್!

 

ನಟ ಪ್ರವೀಣ್ ಮೊದಲ ಸಿನಿಮಾದಲ್ಲೇ ಪ್ರಯತ್ನದಲ್ಲೇ ಭಾವುಕ ಪ್ರೇಮಿಯಾಗಿ, ವಿಧಿಯಾಟಕ್ಕೆ ಸಿಲುಕಿ ಒದ್ದಾಡುವ ಪ್ರೇಮಿಯಾಗಿ, ಭರ್ಜರಿ ಫೈಟರ್ ಆಗಿ… `ಇಷ್ಟು ದಿನ ಎಲ್ಲಿದ್ದ ಗುರೂ ಇವ್ನು’ ಎಂದು ಪ್ರೇಕ್ಷಕ ಗೊಣಗಿಕೊಳ್ಳುವಂತೆ ಮಾಡುತ್ತಾರೆ. ಇನ್ನು ಮುಗ್ಧ ಜಾನಾಕಿಯಾಗಿ ರಚನಾ ಇಂದರ್, ತಮ್ಮ ಬೆಸ್ಟ್ ಕೊಟ್ಟಿದ್ದಾರೆ, ಆದರೆ ಸಿಕ್ಕ ಅದ್ಭುತ ಅವಕಾಶವನ್ನು ರಚನಾ ಇನ್ನಷ್ಟು ರಚನಾತ್ಮಕವಾಗಿ ಬಳಸಿಕೊಳ್ಳಬಹುದಿತ್ತು. `ಗರುಡ ಗಮನ’ದಲ್ಲಿ ಗಮನ ಸೆಳೆದಿದ್ದ ಗೋಪಾಲ್ ಕೃಷ್ಣ ದೇಶಪಾಂಡೆ ಇಲ್ಲೂ ಗಮನ ಸೆಳೆಯುತ್ತಾರೆ. ಕಥೆಗೆ ಟ್ವಿಸ್ಟ್ ಕೊಡುವ ಅತೀ ಮುಖ್ಯ ಪಾತ್ರದಲ್ಲಿ ಮಹಾಂತೇಶ್ ಹಿರೇಮಠ್ ಗಮನಸೆಳೆದರೆ, ಖಳ ನಟ ಡ್ಯಾನಿ ಕುಟ್ಟಪ್ಪ ತಮ್ಮ ವಿಭಿನ್ನ ಮ್ಯಾನರಿಸಂನಿAದ ಭಯ ಹುಟ್ಟಿಸುತ್ತಾರೆ. ನಟಿ ಕಾವ್ಯಾ ಶಾಸ್ತ್ರಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

 

ಒಟ್ಟಿನಲ್ಲಿ, ಫ್ಯಾಮಿಲಿ ಸಮೇತ ಕುಳಿತು ನೋಡಬಹುದಾದ ಚಿತ್ರದಲ್ಲಿ ಇರಬೇಕಾದ ಎಲ್ಲ ಅಂಶಗಳು ಈ ‘ಲವ್ 360’ ಸಿನಿಮಾದಲ್ಲಿದೆ. ನಗುವಿನ ಕಚಗುಳಿ ಇರಿಸುವ ಕಾಮಿಡಿ ದೃಶ್ಯಗಳಿವೆ. ಫೈಟ್ ಇಷ್ಟಪಡುವವರಿಗಾಗಿ ಫೈಟಿಂಗ್ ಸೀನ್‌ಗಳಿವೆ. ಮರ್ಡರ್ ಮಿಸ್ಟರಿ ಇದೆ. ಟೆಕ್ನಿಕಲ್ ಆಗಿಯೂ 360 ಡಿಗ್ರಿಯಷ್ಟು ಉತ್ತಮವಾಗಿದೆ. ಅರ್ಜುನ್ ಜನ್ಯ ಸಂಗೀತ ಈ ಚಿತ್ರದ ಪ್ಲಸ್ ಪಾಯಿಂಟ್. ಅಭಿಲಾಷ್ ಕಲಾಥಿ ಅವರ ಛಾಯಾಗ್ರಹಣ ಸಹ ಗಮನ ಸೆಳೆಯುವಂತಿದೆ. ಕೊನೆಯಲ್ಲಿ, ಚಿತ್ರ ನೋಡಿ ಪ್ರೇಕ್ಷನಿಗೆ ಕಾಡುವುದು ಅದೆ ಸಾಲುಗಳು.. `ಜಗವೇ ನೀನು ಗೆಳತಿಯೇ..

Share this post:

Related Posts

To Subscribe to our News Letter.

Translate »