ಭಾಗ್ಯಾ ಈಗಾಗಲೇ ತುಂಬಾ ತಲೆಕೆಡಿಸಿಕೊಂಡು ಇರುತ್ತಾಳೆ. ಯಾಕೆಂದರೆ ಶ್ರೇಷ್ಠಾ ಹತ್ತಿರ ತಗೊಂಡ ಹಣವನ್ನು ಹೇಗೆ ವಾಪಸ್ ಕೊಡಬೇಕು ಎಂದು ಅವಳಿಗೆ ಗೊತ್ತಾಗದೇ ತಲೆಕೆಡಿಸಿಕೊಂಡಿದ್ದಳು ಅದರ ಮೇಲೆ ತಾಂಡವ್ ಅವಳನ್ನು ಕೆಣಕುತ್ತಾ ಇದ್ದ. ಏನ್ಮೇಡಂ 2 ಲಕ್ಷ ಸಾಲ ಇದ್ಯಂತೆ. ಹೇಗ್ ತೀರಸ್ತೀರಾ ಅಂತ ಕೇಳುತ್ತಾನೆ.
ಆಗ ಭಾಗ್ಯಾ ಉತ್ತರ ಕೊಡುವ ಮೊದಲೇ ಭಾಗ್ಯಾ ಕಡೆಯಿಂದ ಬೇರೊಬ್ಬರು ಉತ್ತರ ನೀಡುತ್ತಾರೆ. ಅದು ಮತ್ಯಾರೂ ಅಲ್ಲಾ ಕುಸುಮಾ, ನಮ್ಮ ಮನೆ ಚಿಂತೆ ನಿಮಗೆ ಬೇಡ ಪಕ್ಕದ ಮನೆಯವರೆ ನಾವು ಹೇಗಾಧರೂ ಮಾಡಿ ಸಾಲ ತೀರಿಸುತ್ತೇವೆ ಅದರ ಬಗ್ಗೆ ನೀವು ತಲೆಕೆಡಿಸಿಕೊಳ್ಳುವುದು ಬೇಡ ಎಂದು ಹೇಳುತ್ತಾಳೆ.
ಆಗ ಅಲ್ಲೇ ಪಕ್ಕದಲ್ಲಿ ಕುಳಿತುಕೊಂಡು ಪೇಪರ್ ಓದುತ್ತಿದ್ದ ಧರ್ಮ ತಕ್ಷಣಾ ನಿನಗಿದು ಬೇಕಿತ್ತಾ ಮಗನೇ ಅನ್ನೋ ಹಾಡನ್ನು ಹಾಡುತ್ತಾರೆ. ಆಗ ತಾಂಡವ್ಗೆ ಅವಮಾನ ಆಗುತ್ತದೆ. ನಾನು ಯಾಕಾದರೂ ಇವರ ಹತ್ತಿರ ಹೀಗೆ ಮಾತಾಡಿದೆನೋ ಎಂದು ಅನಿಸುತ್ತದೆ. ಅತ್ತೆ, ಸೊಸೆ ಇಬ್ಬರೂ ಸಹ ಬಾಗಿಲಲ್ಲಿ ನಿಂತುಕೊಂಡು ನಗಾಡುತ್ತಾರೆ.
ತಾಂಡವ್ ತನ್ನ ಮನೆ ಭಾಗದ ಸೋಫಾ ಮೇಲೆ ಕುಳಿತುಕೊಂಡು ಇರಿತ್ತಾನೆ. ಒಟ್ಟಿನಲ್ಲಿ ಭಾಗ್ಯಾಳನ್ನು ಅವನೊಬ್ಬನೇ ಹೀಯಾಳಿಸೋಕೆ ಬಿಡೋದೇ ಇಲ್ಲಾ. ಹಿಂದಿನ ಸಂಚಿಕೆಯಲ್ಲಿ – ಶ್ರೇಷ್ಠಾ ಬಂದು ನನ್ ಹಣ ವಾಪಸ್ ಕೊಡು ಭಾಗ್ಯಾ ಅಂತ ಕೇಳುತ್ತಾಳೆ. ಆಗ ಭಾಗ್ಯಾ ಕಂಗಾಲಾಗುತ್ತಾಳೆ. ಇವಳು ಏನು ಮಾತಾಡ್ತಾ ಇದ್ದಾಳೆ ಅಂತಾ ಅಲ್ಲಿರೋ ಯಾರಿಗೂ ಅರ್ಥ ಆಗೋದಿಲ್ಲಾ. ಭಾಗ್ಯಾ ಯಾವಾಗ ಅವಳಿಂದ ಹಣ ತೆಗೆದುಕೊಂಡಿದ್ಲು ಎಂದು ಯಾರಿಗೂ ಗೊತ್ತೇ ಇರೋದಿಲ್ಲ.
ಕುಸುಮಾ ಕೂಡ ದಂಗಾಗಿ ಹೀಗ್ತಾಳೆ. ಇವಳು ಯಾವಾಗ ಹಣ ತಗೊಂಡಿದ್ಲು ಅನ್ನೋದು ಅರ್ಥ ಆಗೋದಿಲ್ಲಾ. ಅವಳು ತಗೊಂಡು ಹಣ ಅಷ್ಟಿಷ್ಟಲ್ಲಾ ಬರೋಬ್ಬರಿ 2 ಲಕ್ಷ ರುಪಾಯಿ ಆಗಿರುತ್ತದೆ. ಈ ಸುದ್ದಿಯನ್ನು ಕೇಳುತ್ತಾ ಇದ್ದಂತೆ ತಾಂಡವ್ ತುಂಬಾ ಖುಷಿ ಆಗ್ತಾನೆ. ಇವಳು ನನ್ನ ಮರ್ಯಾದೆ ತೆಗೆಯೋಕೆ ಬಂದಿದ್ದಾಳೆ ಅಂದುಕೊಂಡವನು ಈಗ ಫುಲ್ ಖುಷ್ ಆಗಿದ್ದಾನೆ. ಅವನಿಗೆ ಹಾಲು ಕುಡಿದಷ್ಟು ಸಂತೋಷ ಆಗುತ್ತದೆ.
ನಂತರ ಕುಸುಮಾ ಯಾವಾಗ ಯಾರು? ಏನ್ ಮಾತಾಡ್ತಾ ಇದೀಯಾ? ಇಷ್ಟೊಂದು ಹಣ ತಗೊಂಡಿದಾಳಾ ಭಾಗ್ಯಾ ಅಂತ ಕೇಳುತ್ತಾಳೆ. ಆಗ ಶ್ರೇಷ್ಠಾ ಹೌದು ಆಂಟಿ ಹಣ ತೊಗೊಳುವಾಗ ಎಷ್ಟು ನೆನಪಿರುತ್ತೋ ಅಷ್ಟು ಜನಕ್ಕೆ ಹಣ ವಾಪಸ್ ಕೊಡಬೇಕು ಅನ್ನೋದು ಮಾತ್ರ ನೆನಪೇ ಇರೋದಿಲ್ಲ. ಇನ್ನು ಕೆಲವೇ ದಿನದಲ್ಲಿ ನನ್ನ ಮದುವೆ ಬೇರೆ ಇದೆ. ನನಗೂ ಹಣದ ಅವಶ್ಯಕತೆ ಇದೆ. ಅದನ್ನು ಇವರು ಅರ್ಥ ಮಾಡಿಕೊಳ್ಳಬೇಕು.
ನಾನು ನಿಮ್ಮಿಂದ ಹಣ ಕೇಳಿ ತಗೊಂಡು ಹೋಗೋಕೆ ಬಂದಿಲ್ಲಾ. ನನ್ನ ಹಣವನ್ನು ನನಗೆ ವಾಪಸ್ ಕೊಡಿ ಎಂದು ಕೇಳ್ತಾ ಇದ್ದೀನಿ ಅಷ್ಟೇ ಎಂದು ಹೇಳುತ್ತಾಳೆ. ಆಗ ತಾಂಡವ್ ಯೋಚನೆ ಮಾಡ್ತಾನೆ. ಇವಳು ಕೂಲಿ ನಾಲಿ ಮಾಡಿದ್ರೂ ಇಷ್ಟೊಂದು ಹಣಾನಾ ಖಂಡಿತ ಹುಟ್ಟಿಸೋಕೆ ಆಗೋದಿಲ್ಲಾ ಎಂದು ಮನಸಿನಲ್ಲಿ ನೆನೆಸಿಕೊಂಡು ನಗುತ್ತಾನೆ.
ಭಾಗ್ಯಲಕ್ಷ್ಮೀ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದೆ. ಈ ಧಾರಾವಾಹಿಯಲ್ಲಿ ತಾಂಡವ್ ಹೆಂಡತಿಯನ್ನು ಬಿಟ್ಟು ಬೇರೆ ಒಬ್ಬಳನ್ನು ಮದುವೆ ಆಗಲು ಪ್ರಯತ್ನ ಮಾಡುತ್ತಾ ಇದ್ದಾನೆ. ಆದರೆ ಅವನಿಗೆ ಈಗಾಗಲೇ ಎರಡು ಮಕ್ಕಳಿದ್ದಾರೆ. ಆದರೂ ಶ್ರೇಷ್ಠಾ ಅವನನ್ನೇ ಮದುವೆ ಆಗಬೇಕು ಎಂದು ಹಠಕ್ಕೆ ಬಿದ್ದಿದ್ದಾಳೆ.