‘ಲಾಂಗ್ ಡ್ರೈವ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿAದ ಮೆಚ್ಚುಗೆ…
ಗುಡ್‌ವ್ಹೀಲ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ, ಮಂಜುನಾಥ್ ರವರು ನಿರ್ಮಿಸಿ, ಶ್ರೀ ರಾಜ್ ವರು ನಿರ್ದೇಶನ ಮಾಡಿರುವ ‘ಲಾಂಗ್ ಡ್ರೈವ್’ ಚಿತ್ರದ ಟ್ರೈಲರ್ ಇತ್ತೀಚಿಗೆ ವಸಿಷ್ಠ ಸಿಂಹ ರವರು ಬಿಡುಗಡೆ ಮಾಡಿದ್ದಾರೆ. ಈ ಟ್ರೈಲರ್ ನಲ್ಲಿ ವಸಿಷ್ಠ ನಿರೂಪಣೆ ಇರುವುದು ಇನ್ನೊಂದು ವಿಶೇಷ. ಟ್ರೈಲರ್ ಈಗಾಗಲೆ ಸಾಕಷ್ಟು ಸದ್ದು ಮಾಡಿದ್ದು ಆದಷ್ಟು ಬೇಗ ಚಿತ್ರ ತೆರೆ ಕಾಣಲಿದೆ.
ಇದು ನೈಜ ಘಟನೆಗಳ ಗಟ್ಟಿಕಥೆಯುಳ್ಳ ಚಿತ್ರ ಇದಾಗಿದೆ. ‘ಲಾಂಗ್ ಡ್ರೈವ್ಗೆ ಆಸೆ ಪಡುವ ಹುಡುಗಿಯೊಬ್ಬಳ ಹಿನ್ನೆಲೆಯಲ್ಲಿ ಕತೆ ತೆರೆದುಕೊಳ್ಳುತ್ತದೆ. ಹಾಗೆ ಹೊರಟ ಹುಡುಗಿಯ ಬದುಕಲ್ಲಿ ಏನಾಯ್ತು, ಆಕೆ ವಾಪಾಸ್ ಬಂದಳಾ ಅನ್ನೋದು ಸಿನಿಮಾದ ಒನ್‌ಲೈನ್.
ಚಿತ್ರದಲ್ಲಿರುವ ನಿತ್ಯ ನಡೆಯುವ ಘಟನೆಗಳು. ಪ್ರತಿಯೊಬ್ಬರಿಗೂ ಚಿತ್ರ ಕನೆಕ್ಟ್ ಆಗಲಿದೆ ಎಂದು ನಿರ್ದೇಶಕರ ಅಭಿಪ್ರಾಯ. ನಾಯಕರಾಗಿ ಅರ್ಜುನ್ ಯೋಗಿ ಇಲ್ಲಿ 2 ಶೇಡ್ ಇರುವ ಪಾತ್ರವನ್ನು ನಿರ್ವಹಿಸಿದ್ದಾರೆ ಇನ್ನು ನಾಯಕಿಯಾಗಿ ಸುಪ್ರಿತ ಸತ್ಯನಾರಾಯಣ್, ತೇಜಸ್ವಿನಿ ಶೇಖರ್ ಅಭಿನಯಿಸಿದ್ದಾರೆ.
ಬಲ ರಾಜ್ವಾಡಿ, ಮಹೇಶ್ ಗುರು, ಮೋಹನ್ ಅನ್ನಳ್ಳಿ ಮತ್ತಿತರರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವಾಗಿ ಈ ಚಿತ್ರದ ನಿರ್ಮಾಪಕರಾದ ಮಂಜುರವರು ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ.. ‘ಲಾಂಗ್ ಡ್ರೈವ್’ ಸಿನಿಮಾದ ಮೂರು ಹಾಡುಗಳಿಗೆ ವಿಕಾಸ್ ವಸಿಷ್ಠ ಸಂಗೀತ ಸಂಯೋಜಿಸಿದ್ದಾರೆ, ಕಿಟ್ಟಿ ಕೌಶಿಕ್ ರವರ ಛಾಯಾಗ್ರಹಣ, ರಾಮಿ ಶೆಟ್ಟಿ ಪವನ್ ರವರ ಸಂಕಲನ ಈ ಚಿತ್ರಕ್ಕಿದೆ..
ಚಿತ್ರವು ಸೇನ್ಸಾರ್ ಮುಗಿಸಿಕೊಂಡು U/A ಸರ್ಟಿಫಿಕೇಟ್‌ನೊಂದಿಗೆ ಆದಷ್ಟು ಬೇಗ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ