Left Ad
ಪವನ್ ಕಲ್ಯಾಣ್ ಎದುರು ಖಡಕ್ ವಿಲನ್ ಆಗಿ ಭಜರಂಗಿ ಲೋಕಿ! - Chittara news
# Tags

ಪವನ್ ಕಲ್ಯಾಣ್ ಎದುರು ಖಡಕ್ ವಿಲನ್ ಆಗಿ ಭಜರಂಗಿ ಲೋಕಿ!

ಸೌರವ್ ಲೋಕೇಶ್ ಹೆಸರು ಕೇಳಿರೋದು ಕೆಲವರಿಗೆ ಮಾತ್ರ ಗೊತ್ತು. ಆದರೆ ‘ಭಜರಂಗಿ ಲೋಕಿ’ ಅಂದರೆ – ಅದೇನೋ ವಿಶೇಷ! ಭಜರಂಗಿ ಚಿತ್ರದ ಮೂಲಕ ತಾನು ಯಾರಪ್ಪ ಈ ನಟ? ಅಂತ ಕೇಳುವಂತೆ ಮಾಡಿದ ಕಲಾವಿದ, ಇಂದಿಗೂ ಆ ಹೆಸರು ಮೂಲಕವೇ ಜನಮನದಲ್ಲಿ ಉಳಿದಿದ್ದಾರೆ.

ಅವರ ಅದ್ಭುತ ಅಭಿನಯ ಈಗ ಟಾಲಿವುಡ್ ಕಡೆಗೂ ತಲುಪಿದೆ. ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಬಹು ನಿರೀಕ್ಷಿತ “ಓಜಿ” ಸಿನಿಮಾದಲ್ಲಿ ಭಜರಂಗಿ ಲೋಕಿ ಖಡಕ್ ಹಾಗೂ ಸ್ಟೈಲಿಷ್ ವಿಲನ್ ಆಗಿ ಅಬ್ಬರಿಸಲು ಸಜ್ಜಾಗಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ಟ್ರೇಲರ್‍ನಲ್ಲಿ ಅವರ ಲುಕ್ ನೋಡಿ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಲೋಕಿ ಸ್ವತಃ ತಮ್ಮ ಸಂತಸ ಹಂಚಿಕೊಂಡಿದ್ದು– “ಪವರ್ ಸ್ಟಾರ್ ಜೊತೆ ಸ್ಕ್ರೀನ್ ಶೇರ್ ಮಾಡಿರುವುದು ನನಗೆ ದೊಡ್ಡ ಅವಕಾಶ. ಜೊತೆಗೆ ಬಾಲಿವುಡ್ ನಟ ಇಮ್ರಾನ್ ಹಶ್ಮಿ ಅವರೊಂದಿಗೂ ಕೆಲಸ ಮಾಡಿರುವುದು ಇನ್ನೊಂದು ಹರ್ಷ” ಎಂದು ಹೇಳಿದ್ದಾರೆ.

90ರ ದಶಕದ ಮುಂಬೈ ಮಾಫಿಯಾ ಹಿನ್ನಲೆಯಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ಇಮ್ರಾನ್ ಹಶ್ಮಿ, ಪ್ರಿಯಾಂಕಾ ಮೋಹನ್, ಅರ್ಜುನ್ ದಾಸ್, ಪ್ರಕಾಶ್ ರಾಜ್, ರಾವ್ ರಮೇಶ್ ಸೇರಿದಂತೆ ಭರ್ಜರಿ ತಾರಾಗಣವಿದೆ. ಸಂಗೀತಕ್ಕೆ ಥಮನ್ ಎಸ್., ನಿರ್ದೇಶನಕ್ಕೆ ಸುಜೀತ್, ನಿರ್ಮಾಣಕ್ಕೆ ಡಿವಿವಿ ದಾನಯ್ಯ – ಎಲ್ಲವೂ ಅದ್ದೂರಿ ಮಟ್ಟದಲ್ಲೇ!

Spread the love
Translate »
Right Ad