Sandalwood Leading OnlineMedia

ಹೈವೋಲ್ಟೇಜ್ ‘ಲೈಗರ್’ ಟ್ರೇಲರ್ ರಿಲೀಸ್…ಬಾಕ್ಸರ್ ಲುಕ್ ನಲ್ಲಿ ಅಬ್ಬರಿಸಿ, ಬೊಬ್ಬಿರಿದ ವಿಜಯ್ ದೇವರಕೊಂಡ

 

 LIGER TRAILER (Kannada)

 

ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ನಟನೆಯ ಬಹು ನಿರೀಕ್ಷಿತ ಚಿತ್ರ ಲೈಗರ್ ಟ್ರೇಲರ್ ರಿಲೀಸ್ ಆಗಿದ್ದು, ಬಾಕ್ಸರ್ ಆಗಿ ಮಿಸ್ಟರ್ ವಿಜಯ್ ದೇವರಕೊಂಡ ಅಕ್ಷರಶಃ ಅಬ್ಬರಿ, ಬೊಬ್ಬಿರಿದಿದ್ದಾರೆ. ವಿಜಯ್ ದೇವರಕೊಂಡ, ಪುರಿ ಜಗನ್ನಾಥ್  ಹೈ ವೋಲ್ಟೇಜ್ ಕಾಂಬಿನೇಶನ್ ಲೈಗರ್ ಸೆಟ್ಟೇರಿದ ದಿನದಿಂದಲೂ ಸಾಕಷ್ಟು ಸುದ್ದಿ ಮಾಡಿತ್ತು. ಪೋಸ್ಟರ್ ಗಳಿಂದಲೇ ನಿರೀಕ್ಷೆ ಹೆಚ್ಚಿಸಿದ್ದ ಲೈಗರ್ ಟ್ರೇಲರ್ ಈಗ ಸಿನಿಮಾ ಮೇಲಿನ ಕ್ಯೂರಿಯಾಸಿಟಿಯನ್ನು ದುಪ್ಪಟ್ಟು ಮಾಡಿದೆ.

 

’ಗುಮ್ಮ’ ನ ಕರೆತಂದ ‘ವಿಕ್ರಾಂತ್ ರೋಣ’ ತಂಡ; ಹೇಗಿದೆ ನೋಡಿ ನಾಲ್ಕನೇ ಸಾಂಗ್

 

 

ಮಾಸ್ ಲುಕ್ ನಲ್ಲಿ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದು, ವಿಜಯ್ ಗೆ ಜೋಡಿಯಾಗಿ ಬೋಲ್ಡ್ ಲುಕ್ ಅನನ್ಯಾ ಪಾಂಡೆ ನಟಿಸಿದ್ದಾರೆ. ಈ ಸಿನಿಮಾ ಮೂಲಕ ವಿಜಯ ದೇವರಕೊಂಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ದಿಬ್ಬಣ ಹೊರಡಲಿದ್ದಾರೆ.

 

ರಿಲೀಸ್ ಆಯ್ತು ಆರೋನ್ ನಿರ್ದೇಶನದ  ` ಪರಿಶುದ್ಧಂ’ಚಿತ್ರದ ಹಾಡುಗಳು

 

 

 

 ತೆಲುಗು, ‌ತಮಿಳು, ಹಿಂದಿ, ಮಲಯಾಳಂ ಹಾಗೂ ಕನ್ನಡ ಭಾಷೆಯಲ್ಲಿ ಸಿನಿಮಾ ತೆರೆ ಕಾಣುತ್ತಿದೆ. ಚಿತ್ರದಲ್ಲಿ ಬಾಕ್ಸರ್ ಪಾತ್ರದಲ್ಲಿ ವಿಜಯ್ ದೇವರಕೊಂಡ ಅಭಿನಯಿಸಿದ್ದು  ಬಹುಕೋಟಿ ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಬಾಲಿವುಡ್ ಖ್ಯಾತ ನಿರ್ಮಾಣ ಸಂಸ್ಥೆ ಧರ್ಮ ಪ್ರೊಡಕ್ಷನ್ ಮತ್ತು ಪುರಿ ಕನೆಕ್ಟ್ಸ್ ಬಂಡವಾಳ ಹೂಡಿದ್ದಾರೆ. ವಿಶ್ವ ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್ ಈ ಚಿತ್ರದಲ್ಲಿ ಗೆಸ್ಟ್ ರೋಲ್ ನಲ್ಲಿ ನಟಿಸಿದ್ದು, ರಮ್ಯಾ ಕೃಷ್ಣ ವಿಜಯ್ ದೇವರಕೊಂಡ ತಾಯಿಯಾಗಿ ಅಭಿನಯಿಸಿದ್ದಾರೆ. ಕನ್ನಡದಲ್ಲಿಯೂ ರಿಲೀಸ್ ಆಗ್ತಿರುವ ಲೈಗರ್ ಸಿನಿಮಾವನ್ನು ಬಿ.ಕೆ ಗಂಗಾಧರ್, ಕ್ರಿಸ್ಟಲ್ ಪಾರ್ಕ್ ರಾಜ್ಯಾದ್ಯಂತ ರಿಲೀಸ್ ಆಗಿದೆ.

 

 

 

 

Share this post:

Related Posts

To Subscribe to our News Letter.

Translate »