“Life is Simple” Official Music Video
ಹೈವೋಲ್ಟೇಜ್ ‘ಲೈಗರ್’ ಟ್ರೇಲರ್ ರಿಲೀಸ್…ಬಾಕ್ಸರ್ ಲುಕ್ ನಲ್ಲಿ ಅಬ್ಬರಿಸಿ, ಬೊಬ್ಬಿರಿದ ವಿಜಯ್ ದೇವರಕೊಂಡ
ಸ್ಯಾಂಡಲ್ ವುಡ್ ನಲ್ಲಿ ರ್ಯಾಪ್ ಸಿಂಗರ್ ಗಳು ದಿನದಿಂದ ದಿನಕ್ಕೆ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ವಿಭಿನ್ನ ಕಾನ್ಸೆಪ್ಟ್ ಮೂಲಕ ಕೇಳುಗರನ್ನು ಎದುರುಗೊಳ್ಳುವ ಇವರು ತಮ್ಮದೇ ಆದ ಶೈಲಿಯ ಮೂಲಕ ಅಭಿಮಾನಿ ವರ್ಗವನ್ನು ಹೊಂದಿದ್ದಾರೆ. ಅಂತವರ ಪಟ್ಟಿಯಲ್ಲಿ ಒಬ್ಬರು ವಿವೇಕ್ ರಾಚಪ್ಪ. ಸದ್ಯ ಇವರು ಬರೆದು ಹಾಡಿರುವ ‘ಲೈಫ್ ಈಸ್ ಸಿಂಪಲ್’ ಸಾಂಗ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯೂಟ್ಯೂಬ್ ನಲ್ಲಿ 5 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ಎಲ್ಲರ ಮನ ಗೆದ್ದಿರುವ ಈ ಹಾಡಿಗೆ ಸಾಕಷ್ಟು ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ.
ರಿಲೀಸ್ ಆಯ್ತು ಆರೋನ್ ನಿರ್ದೇಶನದ ` ಪರಿಶುದ್ಧಂ’ಚಿತ್ರದ ಹಾಡುಗಳು
ಮೂಲತಃ ಸೋಮವಾರಪೇಟೆಯವರಾದ ವಿವೇಕ್ ರಾಚಪ್ಪ ಡಿಪ್ಲೋಮ ಇನ್ ಏರೋನಾಟಿಕಲ್ ಇಂಜಿನಿಯರಿಂಗ್ ಓದಿಕೊಂಡಿದ್ದಾರೆ. ಬಾಲ್ಯದಿಂದಲೂ ಕಲೆಯ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಇವರು ವೃತ್ತಿಯಲ್ಲಿ ಹೆಚ್ ಆರ್ ಆಗಿದ್ದು ಪ್ರವೃತ್ತಿಯಲ್ಲಿ ರ್ಯಾಪ್ ಸಿಂಗರ್ ಆಗಿ ಗಮನ ಸೆಳೆಯುತ್ತಿದ್ದಾರೆ. ಸದ್ಯ ಕೆಲಸದ ಜೊತೆಗೆ ಪ್ಯಾಶನ್ ಫಾಲೋ ಮಾಡುತ್ತಿರುವ ವಿವೇಕ್ ರಾಚಪ್ಪ ಮುಂದೆ ಪೂರ್ಣ ಪ್ರಮಾಣದಲ್ಲಿ ತಮ್ಮ ಪ್ಯಾಶನ್ ಕಡೆ ತೊಡಗಿಸಿಕೊಳ್ಳುವ ಯೋಜನೆ ಹಾಕಿಕೊಂಡಿದ್ದಾರೆ.
ಅಂದ್ಹಾಗೆ ಲೈಫ್ ಈಸ್ ಸಿಂಪಲ್ ಇವರು ರಚಿಸಿರುವ ಐದನೇ ಹಾಡಾಗಿದ್ದು, ಇದಕ್ಕೂ ಮೊದಲು ನನ್ನ ಕನಸಲಿ, ಬಾ ಕುಣಿಯುವ ಬಾ, ಜೋಕೆ, ಹೊಸ ಪರಿಣಿತಿ ಹಾಡುಗಳು ಬಿಡುಗಡೆಯಾಗಿ ಜನಪ್ರಿಯಗೊಂಡಿವೆ. ಲೈಫ್ ಈಸ್ ಸಿಂಪಲ್ ಹಾಡಿಗೆ ತಾವೇ ಸಾಹಿತ್ಯ ಬರೆದು ಸಂಗೀತ ನೀಡಿ, ಹಾಡಿದ್ದಾರೆ. ಕ್ವಾಡ್ ಕೋರ್ ಮೀಡಿಯಾ ಹೌಸ್ ಬ್ಯಾನರ್ ನಲ್ಲಿ ಈ ಸಾಂಗ್ ನಿರ್ಮಾಣವಾಗಿದೆ.