Sandalwood Leading OnlineMedia

ಕರ್ನಾಟಕದಲ್ಲಿಯೂ ರಿಲೀಸ್ ಆಗಲಿದೆ ಧೋನಿ ನಿರ್ಮಾಣದ ಚೊಚ್ಚಲ ಸಿನಿಮಾ LGM

ಕ್ಯಾಪ್ಟನ್ ಕೂಲ್ ಎಂ.ಎಸ್ ಧೋನಿ ಪತ್ನಿ‌ ಸಾಕ್ಷಿ ಜೊತೆಗೂಡಿ ತಮ್ಮದೇ ಧೋನಿ ಎಂಟರ್ ಟೇನ್ಮೆಂಟ್ ಮೂಲಕ ನಿರ್ಮಿಸುತ್ತಿರುವ ಚೊಚ್ಚಲ ಸಿನಿಮಾ ಲೆಟ್ಸ್ ಗೆಟ್ ಮ್ಯಾರೀಡ್.ಟೀಸರ್ ಮೂಲಕ ನಗುವಿನ ಕಿಕ್ ಕೊಟ್ಟಿರುವ ಈ ಚಿತ್ರವನ್ನು ರಾಜ್ಯದಲ್ಲಿಯೂ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ. ಇತ್ತೀಚಿಗೆ ಪರಭಾಷೆ ಸಿನಿಮಾಗಳಿಗೆ ಕರುನಾಡಿನಲ್ಲಿ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೀಗಾಗಿ ಲೆಟ್ಸ್ ಗೆಟ್ ಮ್ಯಾರೀಡ್ ಸಿನಿಮಾ ಕೂಡ ಕರ್ನಾಟಕದಲ್ಲಿ ತೆರೆಕಾಣಲಿದೆ ಎಂದು ಚಿತ್ರತಂಡ ತಿಳಿಸಿದೆ.

ಇದನ್ನೂ ಓದಿ:  ಹೊಸ ಬ್ಯುಸಿನೆಸ್ ಗೆ ಕಾಲಿಟ್ಟ ಅಲ್ಲು ಅರ್ಜುನ್; ಹೇಗಿದೆ ಸ್ಟೈಲೀಶ್ ಸ್ಟಾರ್ ಒಡೆತನದ AAA ಸಿನಿಮಾಸ್…?

ಫ್ಯಾಮಿಲಿ ಎಂಟರ್​ಟೇನರ್ ಕಥಾಹಂದರ ಹೊಂದಿರುವ ಸಿನಿಮಾವನ್ನು ರಮೇಶ್ ತಮಿಳ್​ಮಣಿ  ನಿರ್ದೇಶನ ಮಾಡಿದ್ದಾರೆ. ನಾಯಕ ಹರೀಶ್ ಕಲ್ಯಾಣ್, ನಾಯಕಿ ಇವಾನಾ ನಟಿಸಿದ್ದು, ಹಿರಿಯ ನಟಿ ನದಿಯಾ, ಯೋಗಿ ಬಾಬು ಮತ್ತು ಆರ್‌ಜೆ ವಿಜಯ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಲೆಟ್ಸ್ ಗೆಟ್ ಮ್ಯಾರೀಡ್ ಸಿನಿಮಾವನ್ನು ಆದಷ್ಟು ಬೇಗ ತೆರೆಗೆ ತರಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ. ರಮೇಶ್ ತಮಿಳ್ಮಣಿ ಸಿನಿಮಾಗೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಸಂಗೀತ ನಿರ್ದೇಶನದ ಜವಾಬ್ದಾರಿ ಕೂಡ ನಿಭಾಯಿಸಿದ್ದಾರೆ. ಟೀಸರ್ ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದ್ದು, ಶೀಘ್ರದಲ್ಲೇ ಆಡಿಯೋ ಹಾಗೂ ಟ್ರೇಲರ್‌ನ್ನು ಚಿತ್ರತಂಡ ಬಿಡುಗಡೆ ಮಾಡಲಿದೆ.

 

 

Share this post:

Translate »