ಹೊಸಬರ ತಂಡವೊ೦ದು `ಲೆಕ್ಕಾಚಾರ‘ ಎನ್ನುವ ಸಿನಿಮಾ ವನ್ನು ಸಿದ್ಧಪಡಿಸಿದೆ . ಈ ಹಿಂದೆ ‘ ಸಖತ್ ರಿಸ್ಕ್ ‘ ಎನ್ನುವ ಚಿತ್ರ ನಿರ್ದೇಶನ ಮಾಡಿರುವ ಎಂ.ಜಿ.ರಾಜು ಈ ‘ ಲೆಕ್ಕಾಚಾರ‘ಕ್ಕೆ ಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ . ಈ ಸಿನಿಮಾದಲ್ಲಿ ಮುಗ್ಧ ಪ್ರೇಮಕಥೆಯಿದೆ . ಪ್ರೇಮದಲ್ಲಿ ಲೆಕ್ಕಾಚಾರವಿದ್ದರೆ ಅದು ನಿಜವಾದ ಪ್ರೀತಿಯಲ್ಲ . ನಿಷ್ಕಲ್ಮಶ ವಾಗಿರುವುದೇ ಪ್ರೀತಿ . ‘ ಒಲವೇ ಜೀವನ ಲೆಕ್ಕಾಚಾರ ‘ ಎಂಬುದು ಈ ಸಿನಿಮಾದ ಥೀಮ್ . ನಾಲ್ಕು ಹುಡುಗರು ಗ್ಯಾರೇಜ್ನಲ್ಲಿ ಕೆಲಸ ಮಾಡುತ್ತಾ ಪ್ರೀತಿಯಲ್ಲಿ ಬೀಳುತ್ತಾರೆ . ಆಮೇಲೆ ಏನಾಗುತ್ತದೆ ಎಂಬುದೇ ಈ ಸಿನಿಮಾದ ಕಥೆ ‘ ಎಂದು ನಿರ್ದೇಶಕ ರಾಜು ಮಾಹಿತಿ ನೀಡಿದ್ದಾರೆ . ಈ ಸಿನಿಮಾಗೆ ಕಾರ್ತೀಕ್ ವೆಂಕಟೇಶ್ ಸಂಗೀತ ನೀಡಿದ್ದಾರೆ . ರಾಜೇಶ್ ಕೃಷ್ಣನ್ ಮತ್ತು ಅನುರಾಧಾ ಭಟ್ ಗಾಯನದ ಹಾಡೊಂದು ಈ ಸಿನಿಮಾದಲ್ಲಿದೆಯಂತೆ . ಹರೀಶ್ , ಯಶಸ್ವಿ , ಕುಮಾರ್ , ಪ್ರೀತಂ , ಹರ್ಷಿತಾ , ಬಲರಾಮ್ ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ .
ಭೂಗತ ಲೋಕದ ಒತ್ತಡದಿಂದ ಪಾರಾದ್ರಾ ಸೋನಾಲಿ?!
ಹುಡುಗಿಯರನ್ನು ರೇಗಿಸಿಕೊಂಡು ಕಾಲ ಕಳೆಯುವ ಹುಡುಗನಾಗಿ ಹರೀಶ್ ನಾಯಕ. ಬೆಂಗಳೂರಿನ ಯಶಸ್ವಿ..ಸಿ.ಆರ್ ನಾಯಕಿ. ಇವರೊಂದಿಗೆ ಕುಮಾರ್.ಎಂ.ಎಸ್., ಪ್ರೀತಂ, ಹರ್ಷಿತಾ, ಬಲರಾಂ, ಚಂದ್ರು ಮುಂತಾದವರು ನಟಿಸಿದ್ದಾರೆ. ಬೆಂಗಳೂರು, ಉಡುಪಿ, ಮೂಡಿಗೆರೆ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಛಾಯಾಗ್ರಹಣ ರಾಜೇಶ್ಗೌಡ–ಗಗನ್, ಸಂಕಲನ ದುರ್ಗಾಪ್ರಸಾದ್.ಪಿ.ಎಸ್, ಸಾಹಸ ರಾಮ್ದೇವ್, ನೃತ್ಯ ಪ್ರಶಾಂತ್ ಅವರದಾಗಿದೆ. ಸಿರಿ ಮ್ಯೂಸಿಕ್ ಸಂಸ್ಥೆಯು ಹಾಡುಗಳನ್ನು ಹೊರ ತಂದಿದೆ. ಚಿತ್ರದ ಹಾಡು ಈಗಾಗಲೇ ಸದ್ದು ಮಾಡುತ್ತಿದ್ದು, ಒಂದು ಫ್ರೆಶ್ ಲವ್ಸ್ಟೋರಿ `ಲೆಕ್ಕಾಚಾರ‘ದಲ್ಲಿದೆ. MODA MODALU Official VideoSong
ಪ್ರೇಕ್ಷಕನಿಗೆ ಸಿಹಿಕೊಟ್ಟ `ಶುಗರ್‌ಲೆಸ್’ ಟ್ರೈಲರ್
`ಒಲವೇ ಜೀವನ ಲೆಕ್ಕಾಚಾರ‘ ಚಿತ್ರವು ಬೆಂಗಳೂರು, ಉಡುಪಿ ಮತ್ತು ಮೂಡಿಗೆರೆಯ ಸುಂದರತಾಣಗಳಲ್ಲಿ ಚಿತ್ರೀಕರಣಗೊಂಡಿದ್ದು ಶೀಘ್ರದಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿ ಪ್ರೇಕ್ಷಕರ ಮುಂದೆ ಬರಲಿದೆ.
