Sandalwood Leading OnlineMedia

ಕನ್ನಡದಲ್ಲೂ  ‘ ದಿ ಲೆಜೆಂಡ್’ ಸಿನಿಮಾ…ತಮಿಳುನಾಡಿನ ಖ್ಯಾತ ಉದ್ಯಮಿ ಅರುಲ್ ಸರವಣನ್ ಈಗ ಪ್ಯಾನ್ ಇಂಡಿಯಾ ಸ್ಟಾರ್

 

 

ತಮಿಳುನಾಡಿನ ಖ್ಯಾತ ಉದ್ಯಮಿ ಅರುಲ್ ಸರವಣನ್ ದಿ ಲೆಜೆಂಡ್ ಸಿನಿಮಾ ಮೂಲಕ ಬಣ್ಣದ ಲೋಕದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇದೇ ತಿಂಗಳ ೨೮ರಂದು ಸಿನಿಮಾ ರಿಲೀಸ್ ಆಗ್ತಿದ್ದು, ರ‍್ಲ್ಡ್ ವೈಡ್ ಅದ್ಧೂರಿಯಾಗಿ ಪ್ರಚಾರ ನಡೆಸಿರುವ ಸರವಣನ್ ಅಂಡ್ ಟೀಂ ಬೆಂಗಳೂರಿನಲ್ಲಿಯೂ ಪ್ರಚಾರ ಕಹಳೆ ಮೊಳಗಿಸಿದ್ದಾರೆ. ಸಿಲಿಕಾನ್ ಸಿಟಿಗೆ ಬಂದಿಳಿದ ಚಿತ್ರದ ನಾಯಕ ಸರವಣನ್, ಬಾಲಿವುಡ್ ಬ್ಯೂಟಿ URVASHI RAUTELA, ರೈ ಲಕ್ಷ್ಮಿ ಮಾಧ್ಯಮದವರೊಟ್ಟಿಗೆ ಸಿನಿಮಾದ ಬಗ್ಗೆ ಒಂದಷ್ಟು ಅನುಭವ ಹಂಚಿಕೊಂಡಿರು.

 

ಸಿರಿಕನ್ನಡದಲ್ಲಿ `ವಿಜಯ ದಶಮಿ’ಯ ಜೊತೆ `ಅಮ್ಮನ ಮದುವೆ’

ನಾಯಕ ಸರವಣನ್ ಮಾತನಾಡಿ, ಸಿನಿಮಾ ಮಾಡಬೇಕು ಎಂಬ ಕನಸು ಚಿಕ್ಕ ವಯಸ್ಸಿನಿಂದ ಇತ್ತು. ಬ್ಯುಸಿನೆಸ್ ಮೇಲೆ ಹೆಚ್ಚು ಫೋಕಸ್ ಇತ್ತು. ಎಲ್ಲಾ ಸೆಟಲ್ಡ್ ಆದ ಮೇಲೆ ಸಿನಿಮಾ ಮಾಡಿದ್ದೇನೆ. ಕಳೆದ ಹದಿನೈದು ರ‍್ಷದಿಂದ ನರ‍್ದೇಶಕ ಜೆ.ಡಿ.ಜರ‍್ರಿ ನನ್ನ ಜೊತೆ ಇದ್ದಾರೆ. ಪ್ರತಿಯೊಂದು ದೃಶ್ಯವೂ ಅದ್ಭುತವಾಗಿ ಮೂಡಿ ಬಂದಿದೆ. ಸಿನಿಮಾ ನೋಡಿ ಸಪರ‍್ಟ್ ಮಾಡಿ ಎಂದರು.

ರಾಜ್ಯದಲ್ಲಿ ಸಿನಿಮಾ ವಿತರಿಸ್ತಿರುವ ಹಾರಿಜನ್ ಸ್ಟುಡಿಯೋಸ್ ನ ಟೋನಿರಾಜ್, ಕನ್ನಡದಲ್ಲೂ ಸಿನಿಮಾ ಬುಕ್ಕಿಂಗ್ ಗೆ ಅವಕಾಶ ನೀಡುತ್ತೇವೆ. ಪ್ರತಿಯೊಬ್ಬರು ಸಿನಿಮಾ ನೋಡಿ ಬೆಂಬಲಿಸಿ ಎಂದರು.ಟ್ರೇಲರ್ ಹಾಗೂ ಹಾಡುಗಳ ಮೂಲಕ ಸದ್ದು ಮಾಡ್ತಿರುವ ದಿ ಲೆಜೆಂಡ್ ಸಿನಿಮಾ ಜೆ.ಡಿ.ಜರ‍್ರಿ ಆಕ್ಷನ್ ಕಟ್ ಹೇಳಿದ್ದು, ರ‍್ವಶಿ ರೌಟೇಲಾ ಈ ಸಿನಿಮಾ ಮೂಲಕ ಮೊದಲ ಬಾರಿಗೆ ತಮಿಳು ಚಿತ್ರರಂಗ ಪ್ರವೇಶ ಮಾಡಿದ್ದು, ಸರವಣನ್ ಗೆ ಜೋಡಿಯಾಗಿ ನಟಿಸಿದ್ದಾರೆ. ನಸ್ಸಾರ್, ಪ್ರಭು, ಸುಮನ್, ವಿವೇಕ್, ಇಮ್ಮನ್ ಅಣ್ಣಾಚಿ, ಯಶಿಕಾ ಆನಂದ್ ಸೇರಿದಂತೆ ಹಲವರು ತಾರಾಬಳಗ ಚಿತ್ರದಲ್ಲಿದ್ದಾರೆ. ಹ್ಯಾರೀಸ್ ಜಯರಾಜ್ ಮ್ಯೂಸಿಕ್ ಸಿನಿಮಾಕ್ಕಿದ್ದು, ರ‍್ಲ್ಡ್ ವೈಡ್ ೨೦೦೦ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ತೆರೆಗೆ ರ‍್ತಿದೆ.

 

 

Share this post:

Related Posts

To Subscribe to our News Letter.

Translate »