ಕನ್ನಡ ಚಿತ್ರರಂಗದ ಹಳೆ ತಲೆಮಾರಿನ ಮತ್ತೊಂದು ಕೊಂಡಿ ಕಳಚಿದೆ. ಮೇರು ನಟರಾದ ಡಾ.ರಾಜ್‌ರೊಂದಿಗೆ ನಾಯಕಿಯಾಗಿ, ನಾದಿನಿಯಾಗಿ, ಅತ್ತೆಯಾಗಿ ೪೬ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಹೆಗ್ಗಳಿಕೆ ಹೊಂದಿದ, ನಾಯಕಿಯಾದ ಮೊದಲ ಚಿತ್ರದಲ್ಲೇ ಸೂಪರ್‌ಸ್ಟಾರ್ ಡಾ.ರಾಜ್‌ಕುಮಾರ್‌ರೊಂದಿಗೆ ಅಭಿನಯಿಸುವ ಅದೃಷ್ಟ ಗಳಿಸಿದ, ಎಲ್ಲರ ‘ಅಮ್ಮ’ ಎಂಬ ಅಭಿದಾನ ಪಡೆದ ಲೀಲಾವತಿ ಅವರು ಕಳೆದ ಡಿಸೆಂಬರ್. ೮ ರಂದು ಶುಕ್ರವಾರ ಸಂಜೆ ೫ಗಂಟೆ ಹೊತ್ತಿಗೆ ನಿಧನರಾದರು. ಸುಮಾರು ೬೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಲೀಲಾವತಿ ಅವರ ಬದುಕು ಆರಂಭದಲ್ಲಿ ಸುಖವಾಗೇನೂ ಇರಲಿಲ್ಲ. ಹುಟ್ಟಿನಿಂದ ಇಂದು ಕೊನೆ ಉಸಿರೆಳೆವ ತನಕ ನೋವು-ಅಪಮಾನ-ಹಿಂಸೆಯನ್ನೇ ಅನುಭವಿಸಿಕೊಂಡು ಬಂದವರು. ಒಂದು ರೀತಿ ಕೆಬೆಂಕಿಯಲ್ಲಿ ಅರಳಿದ ಹೂವು ಅಂತಾನೂ ಅವರನ್ನು ಕರೆಯಬಹುದು. ಲೀಲಾವತಿಯಷ್ಟು ಕಷ್ಟ-ನಷ್ಟ ಅನುಭವಿಸಿದ ಬೇರೆ ಯಾವ ನಟಿಯಾಗಿದ್ದರೂ, ಇಷ್ಟರಲ್ಲಾಗಲೇ ಆತ್ಮಹತ್ಯೆ ಮಾಡಿಕೊಂಡಿರುತ್ತಿದ್ದರು.
ಇದನ್ನೂ ಓದಿ ’ಯೂಸ್ ಲೆಸ್ ಫೆಲೋ’ ಸಿನಿಮಾದ ಟ್ರೇಲರ್ ರಿಲೀಸ್..ಡಿ.15ಕ್ಕೆ ತೆರೆಗೆ ಬರಲಿದೆ ‘ಮೋಜೋ’ ಹೀರೋ ಮನು ಹೊಸ ಕನಸು..
ಭ್ರಾಮಕ ಸಿನಿ ಜಗತ್ತಿನಲ್ಲಿ ನಟಿಯರು ಕಷ್ಟ ಸಹಿಸಿ ಎದುರಿಸಿ ನಿಲ್ಲುವವರು ಬಹಳ ಕಡಿಮೆ. ಹೀಗಾಗಿ ಕಲಾ ಬದುಕಿನ ಹುಚ್ಚುಹೊಳೆಯಲ್ಲಿ ಮೈ-ಮನ ಕೊಚ್ಚಿಕೊಂಡು ಹೋಗುವ ಅಲೆಗಳನ್ನೆದುರಿಸಿ ಗಟ್ಟಿಯಾಗಿ ನಿಲ್ಲಲಾರದವರು ಆತ್ಮಹತ್ಯೆ ಹಾದಿಹಿಡಿಯುತ್ತಾರೆ. ಕಲ್ಪನಾ-ಮೀನಾಕುಮಾರಿ-ಶೋಭಾರಂತೆ ಸಾವಿನ ಹಾದಿತುಳಿಯದೆ, ಮೈಮನ ಗಟ್ಟಿ ಮಾಡಿಕೊಂಡು ಕಷ್ಟ ಮೆಟ್ಟಿ ನಿಂತವರು ಲೀಲಾವತಿ. ಬಹುಶಃ ಅವರ ಕರುಳಕುಡಿ ವಿನೋದ್ ರಾಜ್‌ಗಾಗಿ ಜೀವ ಹಿಡಿದುಕೊಂಡು ಬದುಕಿದ್ದರೆನಿಸುತ್ತೆ. ವೈಯಕ್ತಿಕ ಜೀವನದ ಸೋಲು-ನೋವು-ಅಪಮಾನ-ಹಿಂಸೆಯನ್ನೆಲ್ಲಾ ಸಹಿಸಿಕೊಂಡು ತನ್ನ ಮಗುವಿಗಾಗಿ ಜೀವ ಸವೆಸಿದ ತಾಯಿ ಲೀಲಾವತಿ ಅವರು, ಜೋರುಯೌವನದ ಬದುಕನ್ನು ಹೇಗೆ ಕಂಡಿದ್ದರೋ ಗೊತ್ತಿಲ್ಲ. ವೃದ್ದಾಪ್ಯದಲ್ಲಿ ಮಗನೊಂದಿಗೆ ಜೀವನದ ನೋವು-ನಲಿವನ್ನು ಸಹ ಅಷ್ಟೇ ಆಪ್ಯಾಯಮಾನದಿಂದ ಅನುಭವಿಸಿದ್ದರು. ಇದಕ್ಕೆ ಅವರು ಬರೆದ ಬದುಕಿನ ಷರಾ ಎಂದರೆ; “ಜೀವನ ಚಕ್ರ ಉರುಳಿದಂತೆ ಬದುಕಿನ ಚಿತ್ರಗಳು, ಮತ್ತದರ ಪಾತ್ರಗಳು ಬದಲಾಗುತ್ತವೆ”. ಅವರು ಪತ್ರಕರ್ತರ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತಿದ್ದರು. ಆದರೆ, ಕೆಲವೊಂದು ವೈಯಕ್ತಿಕ ವಿಷಯ ಕೇಳಿದರೆ, ಅವರಿಗೆ ಸರ‍್ರ್ ಅಂತ ಕೋಪ ಬರುತ್ತಿತ್ತು. ಏಕೆಂದರೆ ಜೀವನವನ್ನ ಅದಮ್ಯವಾಗಿ ಪ್ರೀತಿಸುವವರಿಗೆ ವೈಯಕ್ತಿಕ ವಿಚಾರಗಳ ಲೆಕ್ಕಾಚಾರ ಇಡಬಾರದು ಅನ್ನೋದು ಅವರ ವಾದವಾಗಿತ್ತು.
ಇದನ್ನೂ ಓದಿ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ “ಕದನ ವಿರಾಮ” ಚಿತ್ರಕ್ಕೆ ಚಾಲನೆ
೧೯೫೮ರಲ್ಲಿ “ರಾಣಿ ಹೊನ್ನಮ್ಮ” ಚಿತ್ರದ ಮೂಲಕ ನಾಯಕಿಯಾದರು. ಈ ಚಿತ್ರದ ನಿರ್ದೇಶಕರು ಕು.ರಾ.ಸೀತಾರಾಮಶಾಸ್ತಿç. ೧೯೩೫ರಲ್ಲೇ ‘ರಾಜಸೂಯ ಯಾಗ’ ಚಿತ್ರಕ್ಕೆ ಸಾಹಿತಿಯಾಗಿ ಚಿತ್ರರಂಗ ಪ್ರವೇಶಿಸಿದ ಕು.ರಾ.ಸೀ ಅವರು ೧೯೫೪ರಲ್ಲಿ ಬಿಡುಗಡೆಯಾದ ‘ಬೇಡರಕಣ್ಣಪ್ಪ’ ಚಿತ್ರಕ್ಕೆ ನಾಯಕ ಪಾತ್ರ ಮಾಡುವಂತೆ ಗುಬ್ಬಿವೀರಣ್ಣ ಒತ್ತಾಯಿಸಿದ್ದರು. ಆದರೆ. ತಮಗೆ ಅಭಿನಯದಲ್ಲಿ ಆಸಕ್ತಿ ಇಲ್ಲ ಅಂತ ಹಾಂಗ್‌ಕಾAಗ್ ಶಾ ಸ್ಟುಡಿಯೋದಲ್ಲಿ ಆಧುನಿಕ ಸಿನಿಮಾ ತಂತ್ರಜ್ಞಾನ ಕಲಿಯಲು ಹೋದರು. ಹೀಗಾಗಿ ಕುರಾಸೀ ಅವರ ಬದಲು ರಾಜಕುಮಾರ್ ಅವರಿಗೆ ‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿ, ಇತಿಹಾಸ ನಿರ್ಮಿಸಿದರು. ಹಾಂಗ್‌ಕಾAಗ್‌ನಿAದ ಮರಳಿ ಬಂದ ಕುರಾಸೀ ಅವರು ನಿರ್ದೇಶಿಸಿದ ಮೊದಲ ಚಿತ್ರ ‘ರಾಣಿಹೊನ್ನಮ್ಮ’. ಈ ಚಿತ್ರಕ್ಕೆ ರಾಜಕುಮಾರ್ ಅವರನ್ನೇ ನಾಯಕರಾಗಿ ಆರಿಸಿಕೊಂಡರಲ್ಲದೆ, ಸಣ್ಣಪುಟ್ಟ ಪಾತ್ರ ಮಾಡುತ್ತಿದ್ದ ಲೀಲಾವತಿ ಅವರನ್ನು ಮೊದಲ ಬಾರಿ ನಾಯಕಿಯಾಗಿಸಿದರು. ಇಲ್ಲಿಂದ ಲೀಲಾವತಿ ಮತ್ತು ರಾಜಕುಮಾರ್ ಜೋಡಿ ಬಹಳಷ್ಟು ಚಿತ್ರಗಳಲ್ಲಿ ಅಭಿನಯಿಸಿ ಜನಮನ ಸೆಳೆದರು.
ಇದನ್ನೂ ಓದಿ ‘ಮೂರನೇ ಕೃಷ್ಣಪ್ಪ’ ಸಿನಿಮಾದ ಮೆಲೋಡಿ ಸಾಂಗ್ ರಿಲೀಸ್..’ಅಕಿರ’ ಡೈರೆಕ್ಷನ್ ಹೊಸ ಕನಸ್ಸು ಇದು..
ಅದರಲ್ಲೂ ‘ವೀರಕೇಸರಿ’ ಚಿತ್ರದಲ್ಲಿ ರಾಜಕುಮಾರರೊಂದಿಗೆ ನಟಿಸಿದ ಪ್ರಣಯದ ದೃಶ್ಯಗಳು ಆ ಕಾಲದಲ್ಲಿ ಮೋಡಿ ಮಾಡಿತ್ತು. ಚಿತ್ರಕ್ಕೆ ಘಂಟಸಾಲ ಅವರು ನೀಡಿದ ಸಂಗೀತ ಅತ್ಯಮೋಘವಾಗಿತ್ತು. ‘ಮೆಲ್ಲುಸಿರೆ ಸವಿಗಾನ’ ‘ಸ್ವಾಭಿಮಾನದ ನಲ್ಲೆ’ ಹಾಡುಗಳು ಈಗಲೂ ಜನಪ್ರಿಯ ಹಾಡಾಗಿ ರಸಿಕರ ಕಿವಿಯಲ್ಲಿ ಗುಂಗುಡುತ್ತಿದೆ. ಹೀಗೇ ಜನಪ್ರಿಯತೆಯ ಶಿಖರದಲ್ಲಿರುವಾಗಲೇ ಲೀಲಾವತಿ ಅವರು ವಿವಾಹವಾಗಿ ಒಂದು ಮಗುವಿನ ತಾಯಿಯಾದರು. ಆಗ ಅವರ ವಯಸ್ಸು ೨೭ ದಾಟಿರಲಿಲ್ಲ. ಹೀಗೇ ಕೇವಲ ಹತ್ತೇ ವರ್ಷಕ್ಕೆ ನಾಯಕಿ ಪಾತ್ರ ಬಿಟ್ಟು ತಾಯಿ ಪಾತ್ರ ಮಾಡಲು ಶುರು ಮಾಡತೊಡಗಿದರು. ಇಷ್ಟು ಚಿಕ್ಕ ವಯಸ್ಸಿಗೇ ತಾಯಿ-ತಂಗಿ ಪಾತ್ರ ಮಾಡುತ್ತಿದ್ದೀರಲ್ಲ ಅಂತ ಪತ್ರಕರ್ತರು ಕೇಳಿದಾಗ “ನಾನು ಒಬ್ಬ ಮಗನ ತಾಯಿಯಾಗಿದ್ದೇನೆ. ತಾಯಿ ಪಾತ್ರ ಅಂದ್ರೆ ರೀಲ್‌ನಲ್ಲಾದರೂ-ರಿಯಲ್ಲಾಗಿಯಾದರೂ ನನಗಿಷ್ಟ” ಅನ್ನುತ್ತಿದ್ದರು. “ನನ್ನ ದೇಹಕ್ಕೆ ಎಷ್ಟು ವಯಸ್ಸಾಗಿದೆಯೊ ಗೊತ್ತಿಲ್ಲ. ಆದರೆ, ನನ್ನ ಮನಸ್ಸು ಮಾತ್ರ ತಾಯಿ ಮನಸ್ಸು. ಅದು ಆಗಲೂ-ಈಗಲೂ ಯಾವಾಗಲೂ ಆಚೀಚೆಗೆ ಆ ಮನಸ್ಥಿತಿ ಅಲ್ಲಾಡುವುದಿಲ್ಲ” ಅಂತ ಸಮರ್ಥಿಸುತ್ತಿದ್ದರು.
ಇದನ್ನೂ ಓದಿ ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್ಮೇಲ್ ಮಾಡಿದ್ದಕ್ಕೆ ಮಹಿಳೆ ಆತ್ಮಹತ್ಯೆ; ‘ಪುಷ್ಪ’ ಚಿತ್ರದ ನಟ ಅರೆಸ್ಟ್
ದಕ್ಷಿಣಕನ್ನಡ ಜಿಲ್ಲೆ ಬೆಳ್ತಂಗಡಿಯಲ್ಲಿ ಹುಟ್ಟಿದ ಲೀಲಾವತಿ ಅವರಿಗೆ ಹುಟ್ಟಿದ ದಿನಾಂಕ ಗೊತ್ತಿಲ್ಲ. ಅಂದಾಜು ೧೯೩೭ ಹುಟ್ಟಿದ ವರ್ಷ ಅಂತ ಭಾವಿಸಿದ್ದಾರೆ. ಏಕೆಂದರೆ ಲೀಲಾವತಿ ಅವರು ೫ ವರ್ಷ ಮಗುವಾಗಿದ್ದಾಗಲೇ ಅಪ್ಪ-ಅಮ್ಮನನ್ನು ಕಳೆದುಕೊಂಡು ತಬ್ಬಲಿಯಾಗಿದ್ದರು. ಈ ಅನಾಥ ಮಗುವನ್ನು ಸಾಕಿ ಸಲಹಿ, ಲೀಲಾ ಕಿರಣ್ ಅಂತ ಹೆಸರಿಟ್ಟಿದ್ದು ಕ್ರೆöÊಸ್ತ ಮಿಷನರಿ. ಹೀಗಾಗಿ ಅವರು ಕ್ರೆöÊಸ್ತ ಧರ್ಮ ಪಾಲಿಸುತ್ತಿದ್ದರು. ಚೆನ್ನೆöÊನ ಮಹಾಲಿಂಗ ಭಾಗವತರ್ ಅವರನ್ನು ವಿವಾಹವಾದ ನಂತರ ಮಗ ವಿನೋದ್‌ರಾಜ್‌ರೊಂದಿಗೆ ಹಿಂದೂ ಧರ್ಮ ಪಾಲಿಸುತ್ತಿದ್ದರು. ಅವರದು ಪಾರದರ್ಶಕ ಬದುಕು. ಅಲ್ಲಿ ಪರದೆ ಬಿಟ್ಟು ಬಚ್ಚಿಡುವುದು ಏನೂ ಇಲ್ಲ ಎನ್ನುತ್ತಿದ್ದರು. ಅನಾಥರಾಗಿದ್ದರಿಂದ ಅವರ ಬಾಲ್ಯ ಸಂತೋಷವಾಗೇನೂ ಇರಲಿಲ್ಲ. ಅಪ್ಪ-ಅಮ್ಮ ಇಲ್ಲದೆ ಬಾಲ್ಯದಲ್ಲೇ ನೊಂದು ಬೆಂದು ಬೆಳೆದ ಬಾಲೆ. ಹೀಗಾಗಿ ಲೀಲಾವತಿ ಅವರು ನಿಜ ಬದುಕಿನ ‘ಬೆಂಕಿಯಲ್ಲಿ ಅರಳಿದ ಹೂವು’. ಅವರು ಓದಿದ್ದು ೨ನೇ ತರಗತಿ ಮಾತ್ರ. ಶಾಲೆಯಲ್ಲಿ ಪ್ರದರ್ಶಿಸುತ್ತಿದ್ದ ನೃತ್ಯ ಅವರನ್ನು ನಾಟಕ, ಯಕ್ಷಗಾನದ ಬಾಲ ಪಾತ್ರಗಳನ್ನು ಮಾಡಿಸಿತ್ತು. ಹೀಗೇ ಕಲೆ ಬದುಕು ಅರಸಿ ಹೋದಾಗ ಮೊದಲ ಬಾರಿ ನಟಿಸಿದ ಕನ್ನಡ ಸಿನಿಮಾ ‘ಮಾಂಗಲ್ಯ ಯೋಗ’. ಕೊನೆಯ ಸಿನಿಮಾ ಮಗ ವಿನೋದ್‌ರಾಜ್‌ಗಾಗಿ ಇವರೇ ನಿರ್ಮಿಸಿದ ‘ಯಾರದು’ ಚಿತ್ರ.
ಇದನ್ನೂ ಓದಿ ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್ಮೇಲ್ ಮಾಡಿದ್ದಕ್ಕೆ ಮಹಿಳೆ ಆತ್ಮಹತ್ಯೆ; ‘ಪುಷ್ಪ’ ಚಿತ್ರದ ನಟ ಅರೆಸ್ಟ್
ಕನ್ನಡದಲ್ಲಿ ೪೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಲೀಲಾವತಿ ಅವರು ತಮಿಳು, ತೆಲುಗು, ಮಲಯಾಳಂ, ತುಳು ಚಿತ್ರಗಳಲ್ಲಿ ಒಟ್ಟು ೨೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಮೇರು ನಟರಾದ ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಉದಯಕುಮಾರ್, ಕಲ್ಯಾಣಕುಮಾರ್, ರಾಜೇಶ್. ತೆಲುಗಿನಲ್ಲಿ ಎನ್.ಟಿ.ಆರ್, ನಾಗೇಶ್ವರರಾವ್, ತಮಿಳಿನಲ್ಲಿ ಎಂಜಿ.ಆರ್, ಶಿವಾಜಿಗಣೇಶನ್, ಮಲಯಾಳಂನಲ್ಲಿ ಜಯನ್, ಪ್ರೇಮ್ ನಜೀರ್ ಮತ್ತಿತರ ನಟರೊಂದಿಗೆ ಅಭಿನಯಿಸಿದ್ದಾರೆ. ಡಾ.ರಾಜ್‌ರೊಂದಿಗೆ ಸಂತ ತುಕರಾಮ್, ಕುಲವಧು, ಕಿತ್ತೂರು ಚೆನ್ನಮ್ಮ, ನಂದಾದೀಪ, ವೀರ ಕೇಸರಿ, ಮದುವೆ ಮಾಡಿ ನೋಡು, ಗಂಗೆ ಗೌರಿ, ಎರಡು ನಕ್ಷತ್ರಗಳು, ಶ್ರಾವಣ ಬಂತು, ಭಕ್ತ ಕುಂಬಾರ ಮತ್ತಿತರ ಚಿತ್ರಗಳಲ್ಲಿ ಗಮನಾರ್ಹ ಪಾತ್ರ ಮಾಡಿದ್ದರು. ವಿಷ್ಣುವರ್ಧನ್ ಮೊದಲ ಚಿತ್ರ ‘ನಾಗರಹಾವು’ ಚಿತ್ರದಲ್ಲಿ ಸಾಕು ತಾಯಿಯಾಗಿ, ಗೆಜ್ಜೆ ಪೂಜೆ ಚಿತ್ರದಲ್ಲಿ ಶೋಷಿತ ಹೆಣ್ಣಿನ ತಾಯಿಯಾಗಿ ಪಾತ್ರ ಮಾಡಿದ್ದ ಲೀಲಾವತಿ ಅವರು, ‘ನಾನಿನ್ನ ಮರೆಯಲಾರೆ’ ಚಿತ್ರದಲ್ಲಿ ಗರ್ವಿಷ್ಟ ಶ್ರೀಮಂತೆ ಪಾತ್ರದಲ್ಲೂ ಮಿಂಚಿದ್ದರು. ಯಾವ ಪಾತ್ರ ಕೊಟ್ಟರೂ, ಜೀವ ತುಂಬಿ ಅಭಿನಯಿಸುತ್ತಿದ್ದ ಲೀಲಾವತಿ ಅಭಿಜಾತ ಕಲಾವಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ.
