ಬಿಗ್ ಬಾಸ್ ಸೀಸನ್ 11 ಎರಡನೇ ವಾರಕ್ಕೆ ಬೇರೆ ರೀತಿಯೇ ಬದಲಾಗಿದೆ. ಅದರಲ್ಲೂ ಜಗದೀಶ್ ನಡವಳಿಕೆ ಮೊದಲ ವಾರಕ್ಕಿಂತ ಈ ವಾರ ತದ್ವಿರುದ್ದವಾಗಿದೆ. ಮೊದಲ ವಾರವಂತು ನಾನು ಕಲರ್ಸ್ ಕನ್ನಡವನ್ನೇ ಖರೀದಿ ಮಾಡಿ ಬಿಡುತ್ತೀನಿ ಎನ್ನುತ್ತಿದ್ದರು. ಬಿಗ್ ಬಾಸ್ ನನ್ನನ್ನೆ ಹೊರ ಹಾಕಿ ಅದೇಗೆ ಶೋ ನಡೆಸುತ್ತೀರಾ ಎಂದು ಸವಾಲು ಹಾಕಿದ್ದರು. ಇದೆಲ್ಲ ಕಿಚ್ಚನ ಪಂಚಾಯ್ತಿಯಲ್ಲಿ ಚರ್ಚೆಯಾಗಿ ಒಂದಷ್ಟು ಕ್ಲಾಸ್‌ಗಳು ನಡೆದವು. ಇದೀಗ ಲಾಯರ್ ಜಗದೀಶ್ ಲವ್ವರ್ ಬಾಯ್ ಆಗಿದ್ದಾರೆ.
ಇಂದು ಕಲರ್ಸ್ ಕನ್ನಡ ತನ್ನ ಅಧಿಕೃತ ಪೇಜ್‌ನಲ್ಲಿ ಪ್ರೊಮೋವೊಂದನ್ನು ಬಿಟ್ಟಿದೆ. ಆ ಪ್ರೊಮೋ ನೋಡಿದರೇನೆ ಬಿದ್ದು ಬಿದ್ದು ನಗಬೇಕು ಅಷ್ಟು ಹಾಸ್ಯಪ್ರಧಾನವಾಗಿದೆ. ಅದರಲ್ಲೂ ಈ ವಾರ ಹಂಸ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಕ್ಯಾಪ್ಟನ್ ಆದಾಗಿನಿಂದ ಲಾಯರ್ ಜಗದೀಶ್ ಹಂಸ ಅವರನ್ನು ರೇಗಿಸುತ್ತಲೇ ಇದ್ದಾರೆ. ಇದೀಗ ಇಬ್ಬರ ನಡುವೆ ಮುಂಗಾರು ಮಳೆಯ ದೃಶ್ಯ ರಿಕ್ರಿಯೇಟ್ ಆಗಿದೆ.
ಲಾಯರ್ ಜಗದೀಶ್ ರೊಮ್ಯಾಂಟಿಕ್ ಮೂಡ್‌ನಲ್ಲಿದ್ದು, ಕ್ಯಾಪ್ಟನ್ ಐ ಲವ್ ಯೂ ಎಂದಿದ್ದಾರೆ. ನಂಗೆ ಚಿಕನ್ ಕಬಾಬ್ ಬೇಕು. ಇಲ್ಲ ಅಂದ್ರೆ ನಿನ್ನನ್ನೇ ಕಬಾಬ್ ಮಾಡಿಕೊಂಡು ತಿಂದುಬಿಡುತ್ತೇನೆ ಎಂದಿದ್ದಾರೆ. ಬಳಿಕ ವಕೀಲ್ ಸಾಬ್ ನೆಲದ ಮೇಲೆ ಮಲಗಿದ್ದರೆ ಹಂಸ ಅವರು ಜಗದೀಶ್ ಎದೆ ಮೇಲೆ ಕಾಲಿಟ್ಟು ಎಗರಿದ್ದಾರೆ. ಈ ಪ್ರೋಮೋ ನೋಡಿದ ವೀಕ್ಷಕರು ಲಾಯರ್ ಜಗದೀಶ್ ಸಖತ್ ಮನರಂಜನೆ ಕೊಡುತ್ತಿದ್ದಾರೆ ಎಂದೇ ಕೊಂಡಾಡುತ್ತಿದ್ದಾರೆ.