ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ ಮುಂದಿನ ಬಹುನಿರೀಕ್ಷಿತ ಚಿತ್ರ ‘ಲಾಫಿಂಗ್ ಬುದ್ಧ ಸಿನಿಮಾವನ್ನು ಭರತ್ ರಾಜ್ ನಿರ್ದೇಶಿಸಿದ್ದಾರೆ. ಈ ಚಿತ್ರದ ಮೂಲಕ ಪ್ರಮೋದ್ ಶೆಟ್ಟಿ ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ನಡೆದ ನೈಜ ಘಟನೆಯಿಂದ ಸ್ಫೂರ್ತಿ ಪಡೆದ ಕಥೆಯಾಗಿದೆ. ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಪೊಲೀಸ್ ಪೇದೆ ಪಾತ್ರ ಮಾಡಿದ್ದಾರೆ. ದಿಗಂತ್ ಮಂಚಾಲೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಗೋವರ್ಧನ್ ಎಂಬ ಪೊಲೀಸ್ ಹೆಡ್ ಕಾನ್‌ಸ್ಟೆಬಲ್‌ನ ವೈಯಕ್ತಿಕ ಹೋರಾಟಗಳು ಮತ್ತು ಮೂರು ವ್ಯಕ್ತಿಗಳ ಜೀವನದಲ್ಲಿ ಉಂಟಾಗುವ ಪರಿಣಾಮಗಳ ಬಗ್ಗೆ ಚಿತ್ರ ಕಥೆಯಿದೆ. ಹಾಡನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು ಮತ್ತು ಎಸ್‌ಕೆ ಉಮೇಶ್, ಕೆ ಕಲ್ಯಾಣ್ ಮತ್ತು ತೇಜು ಬೆಳವಾಡಿ ಭಾಗವಹಿಸಿದ್ದರು. ಟ್ರೇಲರ್ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ. ಸಿನಿಮಾ ಆಗಸ್ಟ್ 30 ರಂದು ರಿಲೀಸ್ ಆಗಲಿದೆ.
ಪ್ರಮೋದ್ ಶೆಟ್ಟಿ ಅವರು ತಮ್ಮ ಪ್ರಮುಖ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು. ರಿಷಬ್ ಮತ್ತು ಭರತ್ ಅವರನ್ನು ಹೇಗೆ ಸಂಪರ್ಕಿಸಿದರು ಎಂಬುದನ್ನು ವಿವರಿಸಿದರು. “ನಾನು ನಿಮ್ಮ ಮೇಲೆ ಹೂಡಿಕೆ ಮಾಡುತ್ತಿಲ್ಲ ಆದರೆ ಕಥೆಯಲ್ಲಿ ಹೂಡಿಕೆ ಮಾಡುತ್ತಿದ್ದೇನೆ” ಎಂದು ರಿಷಬ್ ನನಗೆ ಹೇಳಿದ್ದಾಗಿ ಪ್ರಮೋದ್ ತಿಳಿಸಿದರು. ಲಾಕ್‌ಡೌನ್ ಸಮಯದಲ್ಲಿ ಗಮನಾರ್ಹ ತೂಕ ಬದಲಾವಣೆಗಳು ಸೇರಿದಂತೆ ಪಾತ್ರಕ್ಕಾಗಿ ತಯಾರಿ ಮಾಡುವ ಸವಾಲುಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನು ಚಿತ್ರದ `ಎಂಥಾ ಚಂದಾನೇ ಇವಳು’ ಹಾಡು ಈಗಾಗಲೇ ಪ್ರೇಕ್ಷಕರ ಮನ ಸೆಳೆದಿದ್ದು ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.