ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಬಿಡುಗಡೆಯಾದ ‘ಲ್ಯಾಂಡ್ಲಾರ್ಡ್’ ಚಿತ್ರದ ಟೀಸರ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ದುನಿಯಾ ವಿಜಯ್ ತಮ್ಮ ಮಾಸ್ ಅವತಾರದಲ್ಲಿ ಮಿಂಚಿದ್ದು, ಟೀಸರ್‌ನಲ್ಲಿ ಅವರ ಪವರ್‌ಪ್ಯಾಕ್ ಲುಕ್ ಮತ್ತು ಡೈಲಾಗ್‌ಗಳು ಫ್ಯಾನ್ಸ್‌ನ್ನು ಕಣ್ತುಂಬಿಕೊಂಡಿವೆ.

“ಆಳಿದವರ ಎದುರು ಅಳಿಯದೇ ಉಳಿದವ ಮಾರಿಯಾದನು… ತಲೆ ಬಗ್ಸೋಕೆ, ತಲೆ ಬಾಕ್ಸೋಕೆ ವ್ಯತ್ಯಾಸ ಇದೆ” — ಎಂಬ ವಿಜಯ್ ಅವರ ಡೈಲಾಗ್ ಈಗಲೇ ಟ್ರೆಂಡಿಂಗ್ ಆಗಿದೆ.
ಚಿತ್ರದಲ್ಲಿ ವಿಜಯ್ ಕುಮಾರ್ (ದುನಿಯಾ ವಿಜಯ್) ಜೊತೆ ಅವರ ಪುತ್ರಿ ರಿತನ್ಯ ಮತ್ತು ರಚಿತಾ ರಾಮ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅವಿನಾಶ್ ಮತ್ತು ಮಿತ್ರ ವಿಭಿನ್ನ ಲುಕ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಜಡೇಶ್ ಕೆ. ಹಂಪಿ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರವನ್ನು ಹೇಮಂತ್ ಗೌಡ ಕೆ.ಎಸ್. ಮತ್ತು ಕೆ.ವಿ. ಸತ್ಯಪ್ರಕಾಶ್ ಅವರು ‘ಸಾರಥಿ ಫಿಲ್ಮ್ಸ್’ ಬ್ಯಾನರ್‌ನಡಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಆಡಿಯೋ ಹಕ್ಕುಗಳನ್ನು ಆನಂದ್ ಆಡಿಯೋ ಪಡೆದುಕೊಂಡಿದೆ.
ಕನ್ನಡ ರಾಜ್ಯೋತ್ಸವದ ದಿನವೇ ಅಭಿಮಾನಿಗಳಿಗೆ ಟೀಸರ್ ಉಡುಗೊರೆಯಾಗಿ ಬಿಡುಗಡೆಯಾಗಿದ್ದು, ಈ ಸಿನಿಮಾ ಜನವರಿ 23, 2025ರಂದು ತೆರೆಗೆ ಬರಲಿದೆ. ವಿಜಯ್ ಅಭಿಮಾನಿಗಳು ಈಗಾಗಲೇ ಚಿತ್ರದ ರಿಲೀಸ್‌ಗಾಗಿ ಆತುರದಿಂದ ಕಾಯುತ್ತಿದ್ದಾರೆ.
