ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಕಳೆದ ಕೆಲವು ವಾರಗಳಿಂದ ಭಾವನಾ ಕಂಪ್ಲೀಟ್ ಸಪ್ಪಗೆ ಆಗಿಬಿಟ್ಟಿದ್ದಾಳೆ. ಮನೆಯಲ್ಲೂ ಯಾರ ಬಳಿಯೂ ಹೆಚ್ಚು ಮಾತನಾಡುತ್ತಿಲ್ಲ, ಆಫೀಸ್‌ಗೂ ಹೋಗುತ್ತಿಲ್ಲ. ಸದಾ ಅವನದ್ದೇ ಚಿಂತೆಯಲ್ಲಿ ಮುಳುಗಿದ್ದಾಳೆ. ತಾಳಿ ಕಟ್ಟಿ ಹೋದವನು ಯಾರು ಎಂದು ಯೋಚಿಸುತ್ತಾ ಕೂತಿದ್ದಾಳೆ.
ಮನಸ್ಸಿನ ನೆಮ್ಮದಿಗಾಗಿ ದೇವಸ್ಥಾನಕ್ಕೆ ಹೆಚ್ಚು ಬರುವುದಕ್ಕೆ ಶುರು ಮಾಡಿದ್ದಾಳೆ. ದೇವರ ಬಳಿ ಬೇಡಿಕೊಂಡು, ಪೂಜೆ ಮಾಡಿಸಿ, ಅಶ್ವಥ್ ಕಟ್ಟೆ ಸುತ್ತಲು ಹೋಗಿದ್ದಾಳೆ. ಅರಳಿಕಟ್ಟೆ ಸುತ್ತಿ ಅಡ್ಡ ಬಿದ್ದು ನಮಸ್ಕಾರ ಮಾಡುವಾಗಲೇ ಅವಳ ತಾಳಿ ಹೊರಗೆ ಬಂದಿದೆ. ಅದರ ಕಡೆಗೆ ಭಾವನಾ ಗಮನ ಕೊಟ್ಟಿಲ್ಲ.
ಲಕ್ಷ್ಮೀ ಕೂಡ ಅದೇ ದೇವಸ್ಥಾನಕ್ಕೆ ಬಂದಿದ್ದಾಳೆ. ಈ ಮೊದಲೇ ಮನೆಗೆ ಬಂದಿದ್ದ ಗುರುಗಳು ಭಾವನಾಗೂ ಮದುವೆ ಆಗಿ ಹೋಗಿದೆ ಎಂಬ ಮಾತನ್ನು ಹೇಳಿದ್ದರು. ಅದು ಮನೆಯಲ್ಲಿ ಯಾರಿಗೂ ಅರ್ಥವಾಗಿರಲಿಲ್ಲ. ಭಾವನಾ ಕೂಡ ತನ್ನ ತಾಯಿ ಲಕ್ಷ್ಮೀ ಬಳಿಯೂ ಆ ವಿಚಾರವನ್ನು ಹೇಳಿಕೊಂಡಿರಲಿಲ್. ಇದೀಗ ದೇವಸ್ಥಾನದಲ್ಲಿ ತಾಳಿಯ ವಿಚಾರ ಬಯಲಾಗಿದೆ. ಭಾವನಾಳ ಕುತ್ತಿಗೆಯಲ್ಲಿದ್ದ ತಾಳಿ ನೋಡಿ ಲಕ್ಷ್ಮೀ ಆತಂಕಗೊಂಡಿದ್ದಾಳೆ.
ಸಿದ್ದೇಗೌಡ್ರು ಭಾವನಾಳನ್ನು ಕಳೆದುಕೊಳ್ಳುವುದಕ್ಕೆ ಇಷ್ಟವಿಲ್ಲದೆ, ಯಾರಿಗೂ ಗೊತ್ತಾಗದ ಹಾಗೇ ತಾಳಿ ಕಟ್ಟಿದ್ದಾರೆ. ಈಗ ತಾಳಿ ಕಟ್ಟಿದ್ದು ನಾನೇ ಅಂತ ಹೇಳುವಷ್ಟು ಧೈರ್ಯವೂ ಗೌಡ್ರಿಗೆ ಇಲ್ಲ. ತಾಳಿ ಕಟ್ಟಿದವನು ಯಾರೆಂದು ತಿಳಿಯದೆ ಭಾವನಾ ಕಂಗಾಲಾಗಿದ್ದಾಳೆ.