ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಾಹ್ನವಿ ಅದೇಗೆ ಜಯಂತ್ ಜೊತೆಗೆ ಅದೇಗೆ ಬದುಕುತ್ತಿದ್ದಾಳೆ ಎಂಬ ಪ್ರಶ್ನೆ ಈಗಾಗಲೇ ಭಾವನಾಗೂ ಕಾಡಿದೆ. ಅಜ್ಜಿಗೂ ಅದೇ ಪ್ರಶ್ನೆ ಮೂಡಿದೆ. ಆದರೆ ಜಾಹ್ನವಿಗೆ ಈ ಪ್ರಶ್ನೆ ಎಂದಿಗೂ ಕಾಡಿಲ್ಲ. ಒಂಟಿತನ ಎಂಬುದು ಬಿಟ್ರೆ ಜಯಂತ್ ಬಗ್ಗೆ ದೊಡ್ಡ ಮಟ್ಟಿಗೆ ಪ್ರೀತಿ ಇದೆ. ಒಮ್ಮೊಮ್ಮೆ ಒಂಟಿತನ ಹೆಚ್ಚಾದಾಗ ಕುಳಿತು ಕಣ್ಣೀರು ಹಾಕುತ್ತಾಳೆ. ಜಯಂತ್ ಸೈಕೋ ನಡವಳಿಕೆಯನ್ನೆ ಪ್ರೀತಿ ಎಂದು ಭಾವಿಸಿದ್ದಾಳೆ. ಈಗ ನೋಡಿದ್ರೆ ಜಾಹ್ನವಿ ಮನೆಯಲ್ಲಿ ಫ್ರೆಂಡ್ ಬಂದು ಕೂತಿದ್ದಾನೆ. ಅವನು ಬಂದಿರೋದು ಜಯಂತ್ ಗಮನಕ್ಕೆ ಬಂದಿಲ್ಲ. ಅದನ್ನ ಹೇಳುವ ಸತ್ಯವೂ ಜಾನುಗೆ ಇಲ್ಲ. ಇನ್ನೆಲ್ಲಿ ಗಂಡನಿಗೆ ಸತ್ಯ ಗೊತ್ತಾಗಿ ಬಿಡುತ್ತದೆಯೋ ಎಂಬುದು ಟೆನ್ಶನ್ ನಲ್ಲೇ ಬದುಕುತ್ತಿದ್ದಾಳೆ. ಈಗ ಅವನೆಂಥ ಸೈಕೋ ಅನ್ನೋದು ಈಗ ದಿಲೀಪ್ ಗೆ ಗೊತ್ತಾಗಿದೆ.
ಪೊಲೀಸರಿಂದ ತಪ್ಪಿಸಿಕೊಂಡು ಬಂದ ದಿಲೀಪ್ ಸೀದಾ ಜಾನು ಮನೆಗೆ ಬಂದಿದ್ದಾನೆ. ಆದರೆ ಜಾನುಗೆ ಜಯಂತ್ ಬಳಿ ಹೇಳುವ ಧೈರ್ಯವಿಲ್ಲ. ಈ ಘಟನೆಯಿಂದ ಜಯಂತ್ ಕಂಡಾಗಲೆಲ್ಲಾ ಜಾನು ಭಯ ಬಿದ್ದು ಹೋಗಿದ್ದಾಳೆ. ಜಯಂತ್ ಗೆ ಇದು ಪ್ರಶ್ನೆಯಾಗಿ ಉಳಿದಿದೆ. ಪೊಲೀಸರು ಬಂದಿದ್ದ ಕಾರಣಕ್ಕೆ ಚಿನ್ನುಮರಿ ಭಯ ಬಿದ್ದಿರಬೇಕು ಎಂದುಕೊಂಡಿದ್ದಾನೆ. ಜಾನು ಮಲಗುವ ತನಕ ಸುಮ್ಮನೆ ಇದ್ದ ಜಯಂತ್, ನಿಧಾನಕ್ಕೆ ಎದ್ದು ಬಂದಿದ್ದಾನೆ. ನೈಟ್ ಡ್ರೆಸ್ ಹಾಕಿಕೊಂಡು ಬಂದಿದ್ದಾನೆ. ಮೊದಲು ಗಿಡಗಳಿಗೆಲ್ಲಾ ನೀರು ಹಾಕಿದ್ದಾನೆ. ಆಮೇಲೆ ಮನೆಯ ಎಲ್ಲಾ ಕೆಲಸವನ್ನು ಮುಗಿಸಿದ್ದಾನೆ. ಅದರ ಜೊತೆಗೆ ಎಲ್ಲಾ ಗಿಡಗಳ ಜೊತೆಗೆ ಮಾತಾಡಿಕೊಂಡು ಕುಳಿತಿದ್ದಾನೆ. ಮಧ್ಯರಾತ್ರಿ ಜಾನುಗೆ ಅನುಮಾನ ಬರದಂತೆ ಎದ್ದು ಬಂದು ಈ ರೀತಿಯಾಗಿ ಎಲ್ಲಾ ಕೆಲಸವನ್ನು ಮುಗಿಸಿದ್ದಾನೆ.
ಜಯಂತ್ ಎಂಥ ಸೈಕೋ ಅನ್ನೋದು ಜಾಹ್ನವಿಗೆ ಮಾತ್ರ ಇನ್ನು ತಿಳಿದಿಲ್ಲ. ಆದರೆ ಈಗ ದಿಲೀಪ್ ಮುಂದೆ ಎಲ್ಲವೂ ಬಯಲಾಗಿದೆ. ಒಬ್ಬೊಬ್ಬನೇ ಮಾತಾಡುತ್ತಿದ್ದಾನೆ, ಎಲ್ಲಾ ಕೆಲಸವನ್ನು ಒಬ್ಬನೇ ಮಾಡಿ ಮುಗಿಸಿದ್ದಾನೆ. ಈ ಎಲ್ಲವನ್ನು ನೋಡಿದ ದಿಲೀಪ್ ಗೆ ಈ ಜಯಂತ್ ಇಷ್ಟು ದೊಡ್ಡ ಸೈಕೋ ಗುರು ಎನಿಸಿದೆ. ಇಂಥ ಸೈಕೋ ಜೊತೆಗೆ ಜಾನು ಹೇಗೆ ಬದುಕುತ್ತಿದ್ದಾಳೆ ಎಂಬ ಪ್ರಶ್ನೆ ಬಂದಿದೆ. ಜೊತೆಗೆ ಈ ಸೈಕೋ ವರ್ತನೆ ಜಾನುಗೆ ಗೊತ್ತಾ ಎಂಬ ಪ್ರಶ್ನೆಯನ್ನು ಹಾಕಿಕೊಂಡಿರುವ ದಿಲೀಪದ, ಮೊದಲು ಈ ವಿಚಾರವನ್ನು ಜಾನುಗೆ ಹೇಳಬೇಕು ಎಂದುಕೊಂಡಿದ್ದಾನೆ. ಈ ಮೊದಲು ಜಾಹ್ನವಿಗೆ ಒಂದು ದೊಡ್ಡ ಅನುಮಾನ ಕಾಡುತ್ತಿತ್ತು. ರಾತ್ರಿ ನೋಡಿದಾಗ ಮನೆಯೆಲ್ಲಾ ಗಲೀಜಾಗಿರುತ್ತೆ. ಬೆಳಗ್ಗೆ ಎದ್ದು ನೋಡಿದರೆ ಮನೆ ಪೂರಾ ಕ್ಲೀನ್ ಆಗಿರುತ್ತೆ. ರಾತ್ರಿ ಮನೆ ಕ್ಲೀನ್ ಮಾಡೋದು ಯಾರು ಎಂಬ ಅನುಮಾನ. ಆಗ ಜಯಂತ್ ಹೇಳಿದ್ದಿದ್ದು, ಬೆಳಗ್ಗೆನೆ ಕೆಲಸದವರು ಬರುತ್ತಾರೆ ಎಂಬುದಾಗಿ. ಆದರೆ ಆ ಕೆಲಸದವರು ಬೇರೆ ಯಾರು ಅಲ್ಲ ಇದೇ ಜಯಂತ್. ಮಧ್ಯರಾತ್ರಿಯೇ ಎದ್ದು ಎಲ್ಲಾ ಕೆಲಸವನ್ನು ಮುಗಿಸಿ ಮತ್ತೆ ಮಲಗುತ್ತಾನೆ. ಇದು ಈಗ ದಿಲೀಪ್ ಮುಂದೆ ಬಯಲಾಗಿದೆ.