ಕಾವೇರಿಯ ನಾಟಕಕ್ಕೆ ಬಲಿಯಾದ ಕೀರ್ತಿ, ಪ್ರೀತಿಯನ್ನು ದೂರ ಮಾಡಿಕೊಂಡಳು. ಈಗ ಲಕ್ಷ್ಮೀ ಹಾಗೂ ವೈಷ್ಣವ್ ಸಂಸಾರ ಮಾಡುವುದಕ್ಕೂ ಬಿಡದೆ ನಂಗೆ ಅದೇ ಪ್ರೀತಿ ಬೇಕು ಎಂದು ಕೂತಿದ್ದಾಳೆ. ಇದನ್ನು ವೈಷ್ಣವ್ ಕೂಡ ಒಪ್ಪುತ್ತಿಲ್ಲ, ಲಕ್ಷ್ಮೀ ಗಂಡನನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಈ ಹಗ್ಗಜಗ್ಗಾಟದ ನಡುವೆ ಕಡೆಗೂ ಲಕ್ಷ್ಮೀ ರೊಚ್ಚಿಗೆದ್ದಿದ್ದಾಳೆ, ಕೀರ್ತಿಗೆ ಎಚ್ಚರಿಕೆ ನೀಡಿದ್ದಾಳೆ.

ಇದನ್ನೂ ಓದಿ ಖ್ಯಾತ ಗಜಲ್ ಹಾಗೂ ಹಿನ್ನೆಲೆ ಗಾಯಕ ಪಂಕಜ್ ಉದಾಸ್ ಇನ್ನಿಲ್ಲ..!
ವೈಷ್ಣವ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವುದಕ್ಕೆ ಕೀರ್ತಿಯೇ ಕಾರಣ. ನಿತಿನ್ ಜೊತೆಗೆ ಕೈ ಜೋಡಿಸಿ, ಲಕ್ಷ್ಮೀಯನ್ನು ವೈಷ್ಣವ್ ನಿಂದ ದೂರ ಮಾಡಲು ಪ್ರಯತ್ನಿಸಿದಳು. ಆದರೆ ವೈಷ್ಣವ್ ಕಾಪಾಡುವುದಕ್ಕೆ ಹೋದಾಗ, ನಿತೀನ್ ಕಡೆಯವರು ಜೋರಾಗಿ ಹೊಡೆದರು. ಇದರಿಂದ ತಲೆಗೆ ಪೆಟ್ಟಾಗಿ ಆಸ್ಪತ್ರೆ ಸೇರಿದ್ದಾನೆ. ಇದರ ನಡುವೆ ಪೂಜೆ ಪುನಸ್ಕಾರಗಳಲ್ಲಿ ಹೆಂಡತಿ ಮಾಡಬೇಕಾದ ಜಾಗಕ್ಕೆಲ್ಲಾ ಕೀರ್ತಿ ಎಂಟ್ರಿ ಕೊಡುತ್ತಿದ್ದಾಳೆ. ಇದಕ್ಕೆಲ್ಲಾ ಆಗಲೇ ಲಕ್ಷ್ಮೀ ಬುದ್ದಿ ಮಾತು ಹೇಳಿದ್ದಳು.

ಇದನ್ನೂ ಓದಿ ಮಾರ್ಚ್ 8 ರಂದು ಎರಡು ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ “ರೆಕಾರ್ಡ್ ಬ್ರೇಕ್” .
ಲಕ್ಷ್ಮೀ ಮುಂದೆ ನಿಂತು ಕೀರ್ತಿಗೆ ಬುದ್ದಿ ಹೇಳಿದ್ದಾಳೆ. ಮನೆಗೆ ಬಾ, ಅಡುಗೆ ಮನೆಗೆ ಹೋಗಿ, ತಿಂಡಿ ತಿನ್ನು, ಮನೆಯವರ ಜೊತೆಗೆ ಸಲಿಗೆಯಿಂದ ಇರು, ಎಲ್ಲಾ ಕಡೆ ಓಡಾಡು. ಆದರೆ, ನಿನ್ನದೆ ಆದ ಲಿಮಿಟ್ಸ್ ನಲ್ಲಿ ನೀನು ಇರು. ಮ್ಯಾನರ್ಸ್ ನ ಕಳೆದುಕೊಳ್ಳಬೇಡ ಎಂದಿದ್ದಾಳೆ.
ಇದನ್ನೂ ಓದಿ ಭವಿಷ್ಯದ ನಿರ್ದೇಶಕರಿಗೆ ‘ಜುಗಲ್ ಬಂದಿ’ ಅರ್ಪಣೆ…ಅಸಿಸ್ಟೆಂಟ್ ಡೈರೆಕ್ಟರ್ ಗಳಿಗೆ ಸ್ಪೆಷಲ್ ಶೋ ಆಯೋಜನೆ
ಕೀರ್ತಿ ಮತ್ತು ವೈಷ್ಣವ್ ಫ್ರೆಂಡ್ಸ್ ಆಗಿದ್ದವರು ಎಂಬ ಕಾರಣಕ್ಕೆ ಲಕ್ಷ್ಮೀ ಸುಮ್ಮನೆ ಬಿಟ್ಟಿದ್ದಾಳೆ. ಫ್ರೆಂಡ್ಸ್ ಆದರೂ ಸರಿ, ಫ್ಯಾಮಿಲಿ ಆದರೂ ಸರಿ. ವೈಷ್ಣವ್ ವಿಚಾರಕ್ಕೆ ಬಂದರೆ ಲಕ್ಷ್ಮೀ ಸುಮ್ಮನೆ ಬಿಡುವವಳೇ ಅಲ್ಲ. ಈಗ ಕೀರ್ತಿಗೂ ಅದೇ ಎಚ್ಚರಿಕೆಯನ್ನು ನೀಡಿದ್ದಾಳೆ. ಮನೆಯೊಳಗೆ ಬಾ ಆದರೆ ಬೆಡ್ ರೂಮಿನ ಒಳಗೆ ಬರುವ ಸಾಹಸ ಮಾಡಲೇಬೇಡ. ಒಂದು ವೇಳೆ ಬರಬೇಕಾದ ಸ್ಥಿತಿ ಬಂದಾಗ ಮೊದಲು ಅನುಮತಿ ಕೇಳು. ನಾನು ಅಥವಾ ನನ್ನ ಗಂಡ ಅನುಮತಿ ನೀಡಿದರೆ ಮಾತ್ರ ಬಾ ಎಂದು ಖಡಕ್ ಎಚ್ಚರಿಕೆ ನೀಡಿದ್ದಾಳೆ.
