ಏನೂ ಇಲ್ಲಾ ಅಂತ ಪ್ರೀತಿಯಿಂದ ತಲೆ ಸವರಿಸಿರಾ. ಆದ್ರೆ ನಿಜವಾಗಲೂ ನೀವು ನನ್ ತಲೆ ಸವರೋಕೆ ಹೇಳಿದ್ದು ಅಂತ ನನಗೆ ಗೊತ್ತಾಗಿದೆ ಎನ್ನುತ್ತಾಳೆ. ಲಕ್ಷ್ಮೀ ಅತ್ತೆ ಹತ್ತಿರ ಬಂದು ಸತ್ಯ ವಿಚಾರದ ಬಗ್ಗೆ ತಾನೇ ಮಾತಾಡ್ತಾ ಇದ್ದಾಳೆ. ಅವಳಿಗೆ ತುಂಬಾ ತೊಂದರೆ ಆಗಿದೆ. ಆದ್ರೆ ಅದು ಅತ್ತೆಯಿಂದ ಆಗಿದ್ದು ಅನ್ನುವ ವಿಷಯ ಅವಳಿಗೆ ಈಗ ಗೊತ್ತಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ನೀಡಿದ್ದೇವೆ ಗಮನಿಸಿ.
ಮನೆಯ ತುಂಬಾ ದೀಪಗಳು ಉರಿಯುತ್ತಾ ಇರುತ್ತದೆ. ಆ ಸಂದರ್ಭದಲ್ಲಿ ಕಾವೇರಿ ಇದ್ದಲ್ಲಿಗೆ ಲಕ್ಷ್ಮೀ ಬರುತ್ತಾಳೆ. ನಾನು ಈ ಮನೆಗೆ ಬಂದಿರೋದು ನನ್ನ ಭಾಗ್ಯಾ. ಈ ಮನೆಯವರು ತುಂಬಾ ಚೆನ್ನಾಗಿ ನೋಡಿಕೊಳ್ತಾರೆ. ಎಲ್ಲರೂ ತುಂಬಾ ಪ್ರೀತಿ ಮಾಡ್ತಾರೆ. ಹೀಗೆ ನಾನು ಅಂದುಕೊಂಡಿದ್ದೆ ಆದ್ರೆ ಅದು ನನ್ನ ಭಾಗ್ಯ ಅಲ್ಲಾ ಅತ್ತೆ.
ಅದು ನೀವು ನನಗೆ ಕೊಟ್ಟ ಭಾಗ್ಯ, ನೀವೇ ನನ್ನನ್ನು ಆರಿಸಿಕೊಂಡು ಬಂದು ತಂದು ಈ ಮನೆ ಸೊಸೆ ಮಾಡಿಕೊಂಡಿದ್ದು. ನನಗೆ ಆ ಭಾಗ್ಯ ಇದೆ ಎನ್ನುವ ಕಾರಣಕ್ಕೆ ನಾನು ಈ ಮನೆ ಸೊಸೆಯಾಗಿದ್ದಲ್ಲಾ ಅತ್ತೆ ಎಂದು ಹೇಳುತ್ತಾಳೆ. ಆಗ ಕಾವೆರಿಗೆ ಅನುಮಾನ ಆರಂಭ ಆಗುತ್ತದೆ ಅವಳು ಕಂಗಾಲಾಗುತ್ತಾಳೆ.
ನಂತರ ಕಾವೇರಿ ಏನ್ ಮಾತಾಡ್ತಾ ಇದೀಯಾ ನೀನು ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಅವಳು ಹೇಳುತ್ತಾಳೆ ನಾನು ಕೀರ್ತಿನಾ ಭೇಟಿ ಆಗಿ ಬಂದೆ ಎಂದು ಆ ಮಾತನ್ನು ಕೇಳಿದ ತಕ್ಷಣ ಕಾವೇರಿ ಕಕ್ಕಾಬಿಕ್ಕಿ ಆಗ್ತಾಳೆ. ಅವಳು ಎಲ್ಲಾ ಸತ್ಯವನ್ನು ಹೇಳಿರಬಹುದು ಎಂದು ಅವಳು ಅಂದುಕೊಳ್ಳುತ್ತಾಳೆ.
ನಾನು ಹೇಳದೇ ಕೇಳದೇ ಯಾವತ್ತೂ ಹೋಗದೇ ಇರುವವಳು ನನ್ನ ದೊಡ್ಡಪ್ಪನ ಮನೆಗೆ ಹೋದ್ರೆ ನೀವು ಯಾಕೆ ಅದನ್ನು ಪ್ರಶ್ನೆ ಮಾಡಲಿಲ್ಲ. ಯಾಕೆ ಎಲ್ಲಿಗೆ ಹೋಗಿದ್ದೆ ಎಂದು ಯಾಕೆ ನೀನು ಕೇಳಿಲ್ಲಾ ಎಂದು ಕೇಳುತ್ತಾಳೆ. ಆಗ ಕಾವೆರಿ ಹತ್ತಿರ ಉತ್ತರ ಇರೋದಿಲ್ಲಾ. ನಾನು ಯಾರನ್ನೂ ಎಲ್ಲಿಗೆ ಹೋಗಿದ್ದೆ ಎಂದು ಪ್ರಶ್ನೆ ಮಾಡೋದಿಲ್ಲ ಎಂದು ಅವಳು ಹೇಳುತ್ತಾಳೆ.
ಹಿಂದಿನ ಸಂಚಿಕೆಯಲ್ಲಿ – ನಾನು ಸ್ವಾರ್ಥಿನೇ ನನಗೂ ನನ್ನವನನ್ನು ಪಡಿಬೇಕು ಅಂತ ಇತ್ತು, ಅದಕ್ಕಾಗಿ ನಾನು ಹೀಗೆಲ್ಲಾ ಮಾಡ್ದೆ. ಆದ್ರೆ ಇನ್ಮೇಲೆ ಹಾಗಲ್ಲಾ. ನಾನು ಅವನ ಜೊತೆ ನಿಯತ್ತಾಗಿ ಬದುಕುತ್ತೇನೆ. ನನಗೆ ನನ್ನ ಪ್ರೀತಿನಾ ವಾಪಸ್ ಕೊಡು ಎಂದು ಅವಳು ತುಂಬಾ ರಿಕ್ವೆಸ್ಟ್ ಮಾಡಿಕೊಳ್ಳುತ್ತಾಳೆ. ಆದರೆ ಲಕ್ಷ್ಮೀ ಅವಳ ಮಾತಿಗೆ ಒಪ್ಪುತ್ತಾ ಇಲ್ಲಾ. ತನಗೆ ತಾಳಿ ಕಟ್ಟಿದ ಗಂಡನನ್ನಾ ಕೇಳಿದ್ರೆ ನಾನು ಹೇಗೆ ಕೊಡ್ಲಿ ಎಂದು ಅವಳು ಹೇಳುತ್ತಾ ಇದ್ದಾಳೆ.
ನನ್ನ ವೈಷ್ಣವ್ನನ್ನು ನನಗೆ ಬಿಟ್ಟುಕೊಡು ಎಂದು ಕೀರ್ತಿ ಪದೇ ಪದೇ ಕೇಳುತ್ತಾ ಇದ್ದಾಳೆ. ಇಲ್ಲಾ ಕೀರ್ತಿ ಆಗೋದಿಲ್ಲಾ. ನಾನು ವೈಷ್ಣವ್ ಅವರನ್ನು ಬಿಟ್ಟು ಕೊಡೋಕಾಗಲ್ಲಾ ಎಂದು ಹೇಳುತ್ತಾಳೆ. ಆದ್ರೆ ಇದೇ ಅವಕಾಶವನ್ನು ಬಳಸಿಕೊಂಡು ತಾನು ತನ್ನ ಪ್ರಿಯಕರನನ್ನು ಪಡೆದುಕೊಳ್ಳಬೇಕು ಎಂಬುದು ಕೀರ್ತಿ ಯೋಚನೆ