ಕೀರ್ತಿ ಇಲ್ಲಿಯವರೆಗೂ ವೈಷ್ಣವ್ ಸಿಗುತ್ತಾನೆ ಎಂಬ ಭ್ರಮೆಯಿಂದಾನೇ ಕಾದಳು. ಆದರೆ ವೈಷ್ಣವ್ ದಿನೇ ದಿನೇ ಅವಳಿಂದ ದೂರ ಹೋಗುವುದಕ್ಕೇನೆ ಪ್ರಯತ್ನಿಸಿದ. ಇದನ್ನ ತಡೆಯಲಾರದೆ ಕೀರ್ತಿ ಕಡೆಗೂ ಲಕ್ಷ್ಮೀ ಬಳಿ ಸತ್ಯ ಹೇಳಿದಳು. ಆದರೆ ಅದೇ ಕಹಿ ಸತ್ಯವನ್ನ ಕಾವೇರಿ ಬಳಿ ಕೇಳಿದರೆ, ಎಲ್ಲಾ ಮಗನ ಬದುಕಿಗಾಗಿ ಅಂತ ಹೇಳಿ ಲಕ್ಷ್ಮೀಯ ಬಾಯನ್ನೇ ಮುಚ್ಚಿಸಿದಳು.
ಕಾವೇರಿಗೆ ಕಷ್ಟ ಎಂದು ಕುಳಿತಾಗ ಕೈ ಹಿಡಿದಿದ್ದು ಭಾನುಮತಿ. ಆಕೆಯ ಕ್ಲೋಸ್ ಫ್ರೆಂಡ್. ಲಕ್ಷ್ಮೀ-ಕೀರ್ತಿ ಇಬ್ಬರಿಗೂ ಸತ್ಯ ಗೊತ್ತಾಗಿ ಹೋಯ್ತು, ಈಗೇನಪ್ಪ ಮಾಡೋದು ಎನ್ನುವಾಗಲೇ ಜೊತೆಗೂಡಿದ್ದು, ಭಾನುಮತಿ. ನಾನಿರುವಾಗ ನಿನಗ್ಯಾಕೆ ಚಿಂತೆಮ ಈಗ ಇಬ್ಬರಲ್ಲಿ ಯಾರು ಇರಬೇಕು ಅಂತ ಅಪ್ಶನ್ ಕೇಳಿ, ಭಾನುಮತಿ ಬೇರೆಯದ್ದೇ ಪ್ಲ್ಯಾನ್ ಮಾಡಿ ಬಿಟ್ಟಳು. ಅದರಲ್ಲಿ ದೇವಸ್ಥಾನಕ್ಕೆಂದು ಹೋದ ಲಕ್ಷ್ಮೀ ಹಾಗೂ ಕೀರ್ತಿ ಇಬ್ಬರ ಕಿಡ್ನ್ಯಾಪ್.
ಕಿಡ್ನ್ಯಾಪರ್ಸ್ ಕಡೆಯಿಂದ ಪದೇ ಪದೇ ಲಕ್ಷ್ಮೀ ಮೇಲೆ ಅನುಮಾನ ಬರುವಂತ ಮಾತುಗಳು. ಕೀರ್ತಿಯನ್ನೇ ಬಾಸ್ ಮಾಡಿದ್ದರು. ಬಾಸ್ ನೀವೇಳಿದಂತೆ ಮಾಡ್ತಾ ಇದ್ದೀವಿ ಅಂತ. ಲಕ್ಷ್ಮೀಗೆ ಒಂದು ಕ್ಷಣ ಗೊಂದಲವಾಗಿತ್ತು. ಕೀರ್ತಿಗೂ ಕೋಪ ಬಂದಿತ್ತು. ಆದರೆ ಏನು ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಅದೇ ಸಮಯಕ್ಕೆ ಕಾರುಣ್ಯ ಕೂಡ ಅಲ್ಲಿಗೆ ಬಂದಿದ್ದಾಳೆ. ಮಗಳನ್ನು ಬಿಡಿಸಿಕೊಂಡು ಹೋಗುವ ಪ್ರಯತ್ನ ಪಟ್ಟಿದ್ದಾಳೆ. ಆದರೆ ಕಾರುಣ್ಯಗೆ ಜಾಗ ಗೊತ್ತಾಗುವಂತೆ ಮಾಡಿದ್ದು, ಅಲ್ಲಿ ನಾಟಕ ಆಗುವಂತೆ ನೋಡಿಕೊಂಡಿದ್ದು ಕೂಡ ಭಾನುಮತಿ. ಆ ನಾಟಕ ಕೀರ್ತಿಯೇ ಕಿಡ್ನ್ಯಾಪ್ ಮಾಡಿಸಿದ್ದು ಎಂದು ಲಕ್ಷ್ಮೀ ಬಲವಾಗಿ ನಂಬುವಂತ ವಾತಾವರಣವನ್ನು ನಿರ್ಮಾಣ ಮಾಡಿತ್ತು.
ಆದರೆ ಮೊದಲು ಅಲ್ಲಿಂದ ಬಿಡಿಸಿಕೊಂಡು ಹೋಗಲು ಇಬ್ಬರು ಪ್ರಯತ್ನ ಪಟ್ಟರು. ಅಷ್ಟರಲ್ಲಿ ರೌಡಿಗಳು ಲಕ್ಷ್ಮೀಯ ಕುತ್ತಿಗೆ ಹಿಡಿದಿದ್ದರು. ಕೀರ್ತಿ ಅವಳನ್ನು ಕಾಪಾಡುವುದಕ್ಕೆ ಪ್ರಯತ್ನ ಪಟ್ಟಳು. ಅಲ್ಲಿಯೇ ಬಿದ್ದಿದ್ದ ಚಾಕು ಹಿಡಿದು ಕಾಪಾಡಿಕೊಳ್ಳುವುದಕ್ಕೆ ಪ್ರಯತ್ನ ಪಟ್ಟಳು. ಆದರೆ ರೌಡಿಗೆ ಚಾಕು ಚುಚ್ಚಲು ಹೋಗಿ ಲಕ್ಷ್ಮೀಗೆ ಚುಚ್ಚಿದಳು. ತಕ್ಷಣ ರೌಡಿಗಳು, ಬಾಸ್ ಪ್ಲ್ಯಾನ್ ಬಿ ಎಕ್ಸಿಕ್ಯೂಟ್ ಮಾಡಿಬಿಟ್ರಾ ಎಂದು ಮತ್ತೆ ಲಕ್ಷ್ಮೀ ಮನಸ್ಸಲ್ಲಿ ಅನುಮಾನ ಹುಟ್ಟಿಸಿದ.