ಬೆಂಗಳೂರು: ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷ್ಮೀ ಬಾರಮ್ಮಾ ಧಾರವಾಹಿ ಹಾಡು ವೀಕ್ಷಣೆಯಲ್ಲಿ ದಾಖಲೆಯೇ ಮಾಡಿದೆ.
ಹೊಸ ವರ್ಷದಂದು ಧಾರವಾಹಿಯ ಆಲ್ಬಂ ಹಾಡೊಂದು ಬಿಡುಗಡೆಯಾಗಿತ್ತು. ಸೀರಿಯಲ್ ನ ಸನ್ನಿವೇಶಕ್ಕೆ ತಕ್ಕಂತೆ ರೊಮ್ಯಾಂಟಿಕ್ ಹಾಡೊಂದನ್ನು ಬಿಡುಗಡೆ ಮಾಡಲಾಗಿತ್ತು.
ಹೊಸ ವರ್ಷದಂದು ಧಾರವಾಹಿಯ ಆಲ್ಬಂ ಹಾಡೊಂದು ಬಿಡುಗಡೆಯಾಗಿತ್ತು. ಸೀರಿಯಲ್ ನ ಸನ್ನಿವೇಶಕ್ಕೆ ತಕ್ಕಂತೆ ರೊಮ್ಯಾಂಟಿಕ್ ಹಾಡೊಂದನ್ನು ಬಿಡುಗಡೆ ಮಾಡಲಾಗಿತ್ತು.
ಈ ಹಾಡಿಗೆ ನಾಯಕ ಬ್ರೋ ಗೌಡ ಶಮಂತ್ ಅವರೇ ಧ್ವನಿ ನೀಡಿದ್ದರು. ಈ ಸುಮಧುರ ಹಾಡು ಈಗ ಕೇವಲ 12 ಗಂಟೆ ಅವಧಿಯಲ್ಲಿ 1 ಮಿಲಿಯನ್ ವೀಕ್ಷಣೆ ದಾಟಿದ ಹೆಗ್ಗಳಿಕೆ ಮಾಡಿದೆ.
ಇದಕ್ಕೆ ಮೊದಲು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲಿ ಧಾರವಾಹಿ ಟೈಟಲ್ ಹಾಡು ಮಿಲಿಯನ್ ವೀಕ್ಷಣೆ ದಾಖಲೆ ಮಾಡಿತ್ತು. ಆದರೆ ಅದು ಟೈಟಲ್ ಹಾಡಾಗಿತ್ತು. ಆದರೆ ಲಕ್ಷ್ಮೀ ಬಾರಮ್ಮಾ ಧಾರವಾಹಿಯಲ್ಲಿ ವಿಶೇಷ ಹಾಡೊಂದನ್ನು ನಿರ್ಮಿಸುವ ಮೂಲಕ ಹೊಸ ಪ್ರಯತ್ನ ಮಾಡಲಾಗಿತ್ತು.