ಯಲ್ಲು ಪುಣ್ಯಕೋಟಿ ಅವರ ನಿರ್ದೇಶನದಲ್ಲಿ, ಅಜಯ್ ನಾಯಕನಾಗಿ ನಟಿಸಿರುವ ಅವಳ್ ಲೈಲಾ ಅಲ್ಲ ನಾನ್ ಮಜ್ನು ಅಲ್ಲ ಚಿತ್ರ ಈ ಶುಕ್ರವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ.
ನಿಹಾರಿಕಾ ಹಾಗೂ ಅಶ್ವಿನಿ ಎಂಬ ಇಬ್ಬರು ನಾಯಕಿಯರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹಾಸ್ಯನಟ ಡಿಂಗ್ರಿ ನರೇಶ್ ನಾಯಕನ ಸ್ನೇಹಿತನಾಗಿ ಕಾಣಿಸಿಕೊಂಡಿದ್ದಾರೆ.
ಸಂತು ಎಂಬ ಯುವಕನ ಜೀವನದಲ್ಲಿ ಇಬ್ಬರು ಯುವತಿಯರು ಎಂಟ್ರಿ ಕೊಟ್ಟಾಗ ಆತನ ಜೀವನ ಏನೆಲ್ಲಾ ಟ್ವಿಸ್ಟ್ ಅಂಡ್ ಟರ್ನ್ಸ್ ಪಡೆಯಿತು ಎಂದು ಈ ಚಿತ್ರದಲ್ಲಿ ಹೇಳಲಾಗಿದೆ. ಲವ್, ಸೆಂಟಿಮೆಂಟ್ ಜೊತೆಗೆ ಒಂದಷ್ಟು ಸಸ್ಪೆನ್ಸ್ ಕೂಡ ಚಿತ್ರದಲ್ಲಿದೆ, ನಾವು ಆಕಸ್ಮಿಕವಾಗಿ ಏನಾದರೂ ಮಾತನ್ನು ಹೇಳಿದರೆ, ಅದು ಆತನ ಲೈಫ್‌ನಲ್ಲಿ ಹೇಗೆ ರಿಫ್ಲೆಕ್ಟ್ ಆಗುತ್ತದೆಂದು ಈ ಚಿತ್ರ ಹೇಳುತ್ತದೆ. ಜೊತೆಗೆ ೪ ಸುಂದರ ಹಾಡುಗಳಿದ್ದು, ಕೌಶಿಕ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಳ್ಳಿ ಮತ್ತು ನಗರದಲ್ಲಿ ನಡೆಯುವ ಈ ಕಥೆಗೆ ಚಿತ್ರದುರ್ಗ, ಹೊಸಪೇಟೆ, ಬೆಂಗಳುರು, ಹಿರಿಯೂರು, ಬಳ್ಳಾರಿ, ರಾಯಚೂರು ಕೊಪ್ಪಳ ಸುತ್ತಮುತ್ತ ಚಿತ್ರೀಕರಿಸಲಾಗಿದೆ.