Sandalwood Leading OnlineMedia

ಲಹರಿ ಮ್ಯೂಸಿಕ್ ಸಂಸ್ಥೆಗೆ ಮತ್ತೊಂದು ಗರಿ: ಅಂಗ ಸಂಸ್ಥೆ ಎಂಆರ್ ಟಿ ಆಡಿಯೋ ಸಂಸ್ಥೆಗೆ ಗೋಲ್ಡ್ ಅವಾರ್ಡ್- ಇದು ಹೊಸ ದಾಖಲೆ

ಲಹರಿ ಮ್ಯೂಸಿಕ್ ಸಂಸ್ಥೆಗೆ ಮತ್ತೊಂದು ಗರಿ: ಅಂಗ ಸಂಸ್ಥೆ ಎಂಆರ್ ಟಿ ಆಡಿಯೋ ಸಂಸ್ಥೆಗೆ ಗೋಲ್ಡ್ ಅವಾರ್ಡ್- ಇದು ಹೊಸ ದಾಖಲೆ

ಪ್ರಶಸ್ತಿಗಳು ಸುಮ್ಮನೆ ಹುಡುಕಿ ಬರೋದಿಲ್ಲ. ಅದಕ್ಕೆ ಪ್ರಾಮಾಣಿಕತೆ, ಪರಿಶ್ರಮ ಬೇಕು. ಇಲ್ಲೀಗ ಹೇಳ ಹೊರಟಿರುವ ವಿಷಯ, ಲಹರಿ‌ ಮ್ಯೂಸಿಕ್ ಸಂಸ್ಥೆಗೆ ಹುಡುಕಿ ಬಂದ ಪ್ರಶಸ್ತಿ.
ಹೌದು, ಈ ವರ್ಷ ಲಹರಿ ಮ್ಯೂಸಿಕ್ ಸಂಸ್ಥೆಗೆ ಯುಟ್ಯೂಬ್ ಡೈಮಂಡ್ ಅವಾರ್ಡ್ ಬಂತು. ಅದಷ್ಟೇ ಅಲ್ಲ, ಸಂಸ್ಥೆ ನಿರ್ಮಾಣ ಮಾಡಿದ ಆಲ್ಬಂ ಸಾಂಗ್ ಗೆ ಗ್ರ್ಯಾಮಿ ಅವಾರ್ಡ್ ಬಂತು. ಈಗ ಲಹರಿ‌ ಸಂಸ್ಥೆಯ ಮತ್ತೊಂದು ಅಂಗ ಸಂಸ್ಥೆ ಎಂಆರ್ ಟಿ ಮ್ಯೂಸಿಕ್ ಗೆ ಗೋಲ್ಡ್ ಅವಾರ್ಡ್ ಕೂಡ ಲಭಿಸಿದೆ.

ಈ ಕುರಿತು ಲಹರಿ ವೇಲು ಖುಷಿಯನ್ನು ಹಂಚಿಕೊಂಡಿದ್ದಾರೆ. ‘ವಿಶೇಷವೆಂದರೆ ಇದು ಶುರುವಾಗಿ ಕೇವಲ ಆರು ತಿಂಗಳಾಗಿದೆ. ಅದಾಗಲೇ ಈ ಅವಾರ್ಡ್ ಲಭಿಸಿದೆ. ಇದು ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ. ಸಂಗೀತ ಸಂಸ್ಥೆಯ ಎಲ್ಲಾ ಹಾಡುಗಳು ಸೇರಿದಂತೆ ಅಣ್ಣಾವ್ರ ಹಾಡು, ಅಂಬರೀಷ್ ಮತ್ತು ವಿಷ್ಣುವರ್ಧನ್ ಸಿನಿಮಾಗಳ ಗೀತೆಗಳು ಮತ್ತು ಕೆಜಿಎಫ್ 2 ಹಿಂದಿ ಭಾಷೆಯ ಹಾಡುಗಳನ್ನು ಮೊದಲ ಸಲ ಉತ್ತರ ಭಾರತ ಮಾರುಕಟ್ಟೆಯನ್ನು ನಾವೇಕೆ ಪ್ರವೇಶ ಮಾಡಬಾರದು ಅಂತ ಅಲ್ಲಿಯೂ ಕಾಲಿಟ್ಟು, ಅಲ್ಲೂ ಸಹ ಆಡಿಯೋ ಸೂಪರ್ ಹಿಟ್ ಆಗಿದೆ. ಹಾಗಾಗಿ ಗೋಲ್ಡ್ ಅವಾರ್ಡ್ ಗೆ ಇದೂ ಕಾರಣವಾಗಿದೆ.

ಎಂಆರ್ ಟಿ ಮ್ಯೂಸಿಕ್ ಲಹರಿ ಸಂಸ್ಥೆಯ ಅಂಗ ಸಂಸ್ಥೆ. ಕೇವಲ ಆರು ತಿಂಗಳಲ್ಲಿ ಬಂದಿರೋದು ದಾಖಲೆ. ಮುಂದಿನ ದಿನಗಳಲ್ಲಿ ಎಂಆರ್ ಟಿ ಸಂಸ್ಥೆಗೆ ಆದಷ್ಟು ಬೇಗ ಡೈಮಂಡ್ ಅವಾರ್ಡ್ ಬರುವಂತೆಯೇ ಶ್ರಮ ವಹಿಸುತ್ತೇವೆ ಎನ್ನುವ ಲಹರಿ ವೇಲು, ಈ ಪ್ರಶಸ್ತಿಗೆ ಕಾರಣರಾದ ಎಲ್ಲರಿಗೂ ನಾನು ಚಿರ ಋಣಿ. ಪ್ರಮುಖವಾಗಿ ಕಲಾ ಪ್ರೇಮಿಗಳು, ಸಿನಿಮಾ ನಿರ್ದೇಶಕರು, ನಿರ್ಮಾಪಕರು ಹಾಗು ಪತ್ರಕರ್ತರಿಗೆ ಧನ್ಯವಾದಗಳು ಎಂದಿದ್ದಾರೆ.

 

Share this post:

Related Posts

To Subscribe to our News Letter.

Translate »