ಕ್ಯಾಪ್ಟನ್ ಕೂಲ್ ಖ್ಯಾತಿಯ ಟೀಂ ಇಂಡಿಯಾದ ಮಾಜಿ ನಾಯಕ ಎಂ ಎಸ್ ಧೋನಿ ಸಿನಿಮಾ ನಿರ್ಮಾಣಕ್ಕಿಳಿದಿದ್ದಾರೆ. ಪತ್ನಿ ಸಾಕ್ಷಿ ಜೊತೆಗೂಡಿ ಧೋನಿ ಎಂಟರ್ ಟೈನ್ಮೆಂಟ್ ಬ್ಯಾನರ್ ಶುರು ಮಾಡಿರುವ ಅವರು ತಮಿಳು ಸೇರಿದಂತೆ ಬೇರೆ ಭಾಷೆಗಳ ಚಿತ್ರಗಳನ್ನು ನಿರ್ಮಿಸುವುದಾಗಿ ಘೋಷಿಸಿದ್ದಾರೆ. ಈ ಬ್ಯಾನರ್ ಯಡಿಯಲ್ಲಿ ಮೂಡಿಬರ್ತಿರುವ ’L.G.M’ ಸಿನಿಮಾದ ಫಸ್ಟ್ ಲುಕ್ ಅನಾವರಣ ಮಾಡಿ ಇಡೀ ತಂಡಕ್ಕೆ ಕ್ಯಾಪ್ಟನ್ ಕೂಲ್ ಶುಭಾಶಯ ತಿಳಿಸಿದ್ದಾರೆ. ’L.G.M’ ಸಿನಿಮಾಗೆ ವಿಕಾಸ್ ಹಸಿಜಾ ಬಂಡವಾಳ ಹೂಡಿದ್ದಾರೆ. ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿರುವ ಅವರು, ಕೊನೆಯ ಹಂತದ ಚಿತ್ರೀಕರಣದಲ್ಲಿದ್ದು, ಶೀಘ್ರದಲ್ಲಿಯೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಶುರುವಾಗಲಿವೆ. ಈ ಸಿನಿಮಾ ಮೂಲಕ ತಮಿಳು ಚಿತ್ರೋದ್ಯಮದಲ್ಲಿ ನಮ್ಮ ಪಯಣ ಆರಂಭವಾಗಿದೆ ಎಂದು ತಿಳಿಸಿದ್ದಾರೆ.
3 ದೇವಿ; ದಟ್ಟ ಅರಣ್ಯದಲ್ಲೊಂದು ದಿಟ್ಟ ಹೆಜ್ಜೆ!
ಚಿತ್ರದ ಕ್ರಿಯೇಟಿವ್ ಹೆಡ್ ಆಗಿರುವ ಪ್ರಿಯಾಂಶು ಚೋಪ್ರಾ, ’L.G.M’ ಹೊಸ ಪರಿಕಲ್ಪನೆಯಾಗಿದೆ. ಅನೇಕ ಸ್ವಾರಸ್ಯಕರ ಅಂಶಗಳು ಚಿತ್ರದಲ್ಲಿವೆ. ಪ್ರತಿಭಾನ್ವಿತ ಚಿತ್ರತಂಡ ಹಾಗೂ ತಾಂತ್ರಿಕ ಬಳಗವಿ ಚಿತ್ರದಲ್ಲಿದ್ದಾರೆ ಎಂದಿದ್ದಾರೆ. ರಮೇಶ್ ಥಮಿಳ್ಮಣಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ’L.G.M’ ಸಿನಿಮಾ ಫ್ಯಾಮಿಲಿ ಎಂಟರ್ ಟೈನರ್ ಚಿತ್ರವಾಗಿದ್ದು, ಹರೀಶ್ ಕಲ್ಯಾಣ್, ನದಿಯಾ ಹಾಗೂ ಲವ್ ಟು ಡೇ ಖ್ಯಾತಿಯ ಇವಾನಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಯೋಗಿ ಬಾಬು ಹಾಗೂ ಮಿರ್ಚಿ ವಿಜಯ್ ತಾರಾಬಳಗದಲ್ಲಿದ್ದಾರೆ. ರಮೇಶ್ ಥಮಿಳ್ಮಣಿ ಸಿನಿಮಾಗೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಸಂಗೀತ ನಿರ್ದೇಶನದ ಜವಾಬ್ದಾರಿ ಕೂಡ ನಿಭಾಯಿಸಿದ್ದಾರೆ.