ಭಾಗ್ಯಲಕ್ಷ್ಮೀ ಧಾರವಾಹಿಯಲ್ಲಿ ತಾಂಡವ್ ದಿನೇ ದಿನೇ ವಿಚಿತ್ರವಾಗಿ ಆಡುವುದಕ್ಕೆ ಶುರು ಮಾಡಿದ್ದಾರೆ. ಅಹಂಕಾರ ನೆತ್ತಿಗೇರಿದೆ. ಮನೆ ನಡೆಸಬೇಕು, ಶ್ರೇಷ್ಠಾ ಸಾಲ ತೀರಿಸಬೇಕು, ಮಕ್ಕಳ ವಿದ್ಯಾಭ್ಯಾಸ ನೋಡಿಕೊಳ್ಳಬೇಕು. ಇದೆಲ್ಲದಕ್ಕೂ ಹಣ ಹೊಂದಿಸಬೇಕು.
ಸದ್ಯಕ್ಕೆ ಕುಸುಮಾ, ಧರ್ಮರಾಜ್ ಬಳಿ ಇರುವ ಹಣ ಖರ್ಚಾಗುತ್ತಿದೆ. ಸಾಲ ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಸ್ವಲ್ಪ ದಿನ ಕಳೆಯುವಷ್ಟರಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಇಷ್ಟೆಲ್ಲಾ ಕಷ್ಟವನ್ನು ಮನೆಯವರು ಅನುಭವಿಸುತ್ತಿದ್ದರು ತಾಂಡವ್ ಮಾತ್ರ ಡೋಂಟ್ ಕೇರ್ ಎನ್ನುತ್ತಿದ್ದಾನೆ.
ಇದನ್ನೂ ಓದಿ:ಅಶ್ವಿನಿ ಪುನೀತ್ ರಾಜಕುಮಾರ್ ಅವರಿಂದ ಬಿಡುಗಡೆಯಾಯಿತು ರಿಷಿ ಅಭಿನಯದ “ರುದ್ರ ಗರುಡ ಪುರಾಣ” ಚಿತ್ರದ ಫಸ್ಟ್ ಲುಕ್. .
ಮತ್ತೊಂದೆಡೆ ಸುನಂದಾ, ಕುಸುಮಾ ಪರ ತಿರುಗಿ ಬಿದ್ದಿದ್ದಾಳೆ. ಮಗ ಸೊಸೆಯನ್ನು ಒಂದು ಮಾಡುತ್ತೇನೆ ಎಂದು ದೂರ ಮಾಡುತ್ತಿದ್ದೀರಿ. ಇದೇನಾ ನೀವು ಮಾಡುತ್ತಿರುವುದು. ನಿಮ್ಮ ಹಟದಿಂದ ನನ್ನ ಮಗಳ ಜೀವನ ಹಾಳಾಗುತ್ತಿದೆ ಎನ್ನುತ್ತಾಳೆ. ಸುನಂದಾ ಮಾತನ್ನು ಕೇಳಿ ಭಾಗ್ಯಾ, ಕುಸುಮಾ, ಧರ್ಮರಾಜ್ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಮಗ ಸೊಸೆ ಜೊತೆಯಾಗಿರಬೇಕು, ನಾವೆಲ್ಲರೂ ಸಂತೋಷವಾಗಿರಬೇಕು ಎಂಬ ಕಾರಣಕ್ಕೆ ನಾವೆಲ್ಲರೂ ಇಷ್ಟು ಕಷ್ಟ ಪಡುತ್ತಿದ್ದೇವೆ ಎಂದು ಕುಸುಮಾ ಹೇಳುತ್ತಾಳೆ.
ನೀವು ಏನೂ ಮಾಡುತ್ತಿಲ್ಲ. ಅವರ ಸಂಸಾರ ಸರಿ ಆಗಬೇಕು ಎಂದಾದರೆ ಮೊದಲು ಭಾಗ್ಯಾ, ಅಳಿಯನ ಬಳಿ ಕ್ಷಮೆ ಕೇಳಬೇಕು. ಅವಳು ಶಾಲೆಗೆ ಹೋಗುವುದನ್ನು ನಿಲ್ಲಿಸಿ ಗಂಡ ಮಕ್ಕಳನ್ನು ನೋಡಿಕೊಂಡಿರಲಿ ಸಾಕು, ಈ ರೀತಿ ಅವಳು ಕಷ್ಟಪಡುತ್ತಿರುವುದನ್ನು ನನ್ನಿಂದ ನೋಡಲಾಗುತ್ತಿಲ್ಲ ಎನ್ನುತ್ತಾಳೆ.
ಇದನ್ನೂ ಓದಿ :“My biggest fear is – rewriting Math exam’’–Sparsha Rekha ; Chittara Exclusive
ಕುಸುಮಾ ಮಾತಿಗೆ ಉತ್ತರಿಸುವ ಭಾಗ್ಯಾ, ನೋಡಲು ಆಗದಿದ್ದರೆ ನೀನು ಮನಗೆ ವಾಪಸ್ ಹೋಗು ಎನ್ನುತ್ತಾಳೆ. ತನ್ನ ಪರ ಮಾತನಾಡುವ ಸುನಂದಾಳನ್ನು ತಾಂಡವ್ ತನ್ನ ಕಡೆ ಬರುವಂತೆ ಆಹ್ವಾನಿಸುತ್ತಾನೆ. ಅತ್ತ ಪೂಜಾ ಶ್ರೇಷ್ಠಾ ಮನೆಗೆ ಬರುತ್ತಾಳೆ. ಇಲ್ಲಿಕೆ ಏಕೆ ಬಂದೆ ಎಂದು ಶ್ರೇಷ್ಠಾ ಕೇಳುತ್ತಾಳೆ.
ಇನ್ಮುಂದೆ ನಾನು ಇಲ್ಲೇ ಇರುತ್ತೇನೆ. ನನ್ನ ಬಾವನನ್ನು ಹೇಗೆ ಮದುವೆ ಆಗುತ್ತೀಯ? ನನ್ನ ಕಣ್ತಪ್ಪಿಸಿ ಇಬ್ಬರೂ ಏನು ಮಾಡಲು ಸಾಧ್ಯ ನೋಡುತ್ತೇನೆ ಎಂದು ಚಾಲೆಂಜ್ ಹಾಕಿದ್ದಾಳೆ.
ಮತ್ತೊಂದೆಡೆ ಭಾಗ್ಯಾ, ಕೆಲಸ ಕೊಡಿಸುವ ಬ್ರೋಕರ್ಗೆ ಕರೆ ಮಾಡಿ ನಾನು ಕೆಲಸ ಹುಡುಕುತ್ತಿರುವುದು ಮನೆಯಲ್ಲಿ ಯಾರಿಗೂ ಗೊತ್ತಿಲ್ಲ, ಆಗಲೇ ನನ್ನ ಅತ್ತೆ ಮಾತನಾಡಿದ್ದು ಕ್ಷಮಿಸಿ ಎನ್ನುತ್ತಾಳೆ. ಆಯ್ತು ನಾನು ಮತ್ತೆ ಫೋನ್ ಮಾಡುತ್ತೇನೆ. ನಾನು ಹೇಳಿದ ಜಾಗಕ್ಕೆ ಬಾ ಎಂದು ಬ್ರೋಕರ್ ಹೇಳುತ್ತಾನೆ.
ಇದನ್ನೂ ಓದಿ :ಶಕುಂತಲಾ ದೇವಿ ಸಂಚು ತಿಳಿಯದೆ ಗೌತಮ್ ಮೇಲೆ ಕೋಪ ಮಾಡಿಕೊಂಡಳಾ ಭೂಮಿಕಾ
ಭಾಗ್ಯಾ ಕೂಡಾ ತಲೆ ಆಡಿಸುತ್ತಾಳೆ. ಕುಸುಮಾ ಕೂಡಾ ಮನೆ ಪರಿಸ್ಥಿತಿ ಬಗ್ಗೆ ಯೋಚಿಸುತ್ತಾಳೆ. ವಯಸ್ಸಾದ ಸಮಯದಲ್ಲಿ ಮಗ ಈ ರೀತಿ ಮಾಡುತ್ತಾನೆ ಎಂದು ಯೋಚಿಸಿರಲಿಲ್ಲ. ಮನೆ ನಡೆಸಲು ನಾನೇ ಏನಾದರೂ ಮಾಡಬೇಕು. ಭಾಗ್ಯಾ ಈ ಮನೆಯ ಗೃಹಲಕ್ಷ್ಮಿ. ಅವಳು ಮನೆ ಮಕ್ಕಳು, ಮಾವನನ್ನು ನೋಡಿಕೊಂಡು ಮನೆಯಲ್ಲೇ ಇರಲಿ, ನಾನು ಕೆಲಸಕ್ಕೆ ಹೋಗುತ್ತೇನೆ ಎಂದು ಮನಸ್ಸಿನಲ್ಲೇ ನಿರ್ಧರಿಸುತ್ತಾಳೆ.