Left Ad
ವಸಂತ್ ಆಗಿದ್ದವರು ಕುಮಾರ ಬಂಗಾರಪ್ಪ ಆಗಿ ಬದಲಾಗಿದ್ದೇಗೆ..? ದೊಡ್ಡರಂಗೇಗೌಡರು ಹೇಳಿದ ಕಥೆ - Chittara news
# Tags

ವಸಂತ್ ಆಗಿದ್ದವರು ಕುಮಾರ ಬಂಗಾರಪ್ಪ ಆಗಿ ಬದಲಾಗಿದ್ದೇಗೆ..? ದೊಡ್ಡರಂಗೇಗೌಡರು ಹೇಳಿದ ಕಥೆ

ಹತ್ತು ಹನ್ನೊಂದು ವರ್ಷದ ಒಬ್ಬ ಹುಡುಗ ಗಿಟಾರ್ ಹಿಡಿದು “ಸಂಗೀತ ಸಾಮ್ರಾಟ್” ವಿಜಯ್ ಭಾಸ್ಕರ್ ಹತ್ತಿರ ಕೆಲಸ ಕೇಳಿಕೊಂಡು ಬಂದು, ಕೈಕಟ್ಟಿ ನಿಂತು ಯಾಚಿಸುತ್ತಾನೆ. ನಿಮ್ಮ ಬಳಿ ಗಿಟಾರ್ ನುಡಿಸಿಕೊಂಡು ಇರುತ್ತೇನೆ. ನಾನು ಸಹ ಆ ಮೂಲಕ ಹೆಚ್ಚಿನ ಜ್ಞಾನ ಪಡೆಯುತ್ತೇನೆ. ಒಂದು ಅವಕಾಶ ಕೊಡಿ ವಾದ್ಯಾರ್ (ಗುರುಗಳೇ) ಎಂದು ವಿನಮ್ರವಾಗಿ ಪ್ರಾರ್ಥಿಸುತ್ತಾನೆ.

 

`ಎಲ್ಲಿ ನುಡಿಸಿ ತೋರಿಸು, ನಿನಗೆ ಗೊತ್ತಿರುವುದೆಲ್ಲವನ್ನು ನನ್ನೆದುರು ಈಗಲೇ ನುಡಿಸು’ ಎಂದು ಆದೇಶ ನೀಡುತ್ತಾರೆ. ವಿಧೇಯ ವಿದ್ಯಾರ್ಥಿಯಾಗಿ ಎಸ್ ಪಿ ವೆಂಕಟೇಶ್ ತನಗೆ ಗೊತ್ತಿರುವ ಎಲ್ಲಾ ರಾಗಗಳನ್ನು ನುಡಿಸುತ್ತಾನೆ, ಗುರುಗಳ ಮೆಚ್ಚುಗೆ ಗಳಿಸುತ್ತಾನೆ. ಅಂದಿನಿಂದಲೇ ವೆಂಕಟೇಶ್ ಶ್ರೀವಿಜಯ್ ಭಾಸ್ಕರ್ಗೆ ಪ್ರಿಯ ವಿದ್ಯಾರ್ಥಿ ಆಗುತ್ತಾನೆ. ಪ್ರತಿದಿನ ಕೆಲಸ ಕಲಿಯುತ್ತಾನೆ.

ಅಲ್ಲಿಂದ ೧೮ ವರ್ಷಗಳ ಕಾಲ ವೆಂಕಟೇಶ್, ಗುರುವಿಗೆ ತಕ್ಕ ಶಿಷ್ಯನಾಗಿ ಸಂಗೀತದ ಎಲ್ಲಾ ಆಯಾಮಗಳನ್ನು ಕಲಿಯುತ್ತಾನೆ. ಸಂಗೀತ ಪಾರಂಗತನಾಗುತ್ತಾನೆ. ವಾದ್ಯಾರ್, ನೀವು ಕುಳಿತು ಸುಮ್ಮನೆ ನೋಡುತ್ತಾ ಇರಿ. ನಿಮ್ಮ ಒಂದು ಟ್ಯೂನ್ಗೆ ನೊಟೇಷನ್ ಹಾಕಿ ಎಲ್ಲಾ ಸಂಗೀತಗಾರರಿಗೂ ಬರೆಸಿ, ಪ್ರಶಿಕ್ಷಣ ಇತ್ತು ತಾನೇ ಸ್ವತಃ ಗುರುವಿನ ನೇತೃತ್ವದಲ್ಲಿ ಧ್ವನಿ ಮುದ್ರಣ ಮಾಡಿ ಸೈ ಎನ್ನಿಸಿಕೊಳ್ಳುತ್ತಾನೆ.

 

ಇದನ್ನು ಓದು:  ಟ್ರೋಫಿ ಗೆದ್ದ ಸ್ಮೃತಿ ಮಂದಾನ ಕೊಹ್ಲಿ ಬಗ್ಗೆ ಹೇಳಿದ್ದೇನು ?

 

ಆ ತರುಣನೇ ಮುಂದೆ ಎಸ್ ಪಿ ವೆಂಕಟೇಶ್ ಎಂಬ ಸಂಗೀತ ನಿರ್ದೇಶಕನಾಗಿ ಬೆಳಕಿಗೆ ಬರುತ್ತಾನೆ. ಆ ಕಾಲಕ್ಕೆ ಕೆ.ವಿ ಜಯರಾಂಗೆ ಒಂದು ಸುವರ್ಣ ಅವಕಾಶ ಬಂತು. ಅದೇ “ಶರವೇಗದ ಸರದಾರ” ಎಂಬ ಚಿತ್ರ ನಿರ್ದೇಶಿಸುವ ಕಾರ್ಯ. ಬಂಗಾರಪ್ಪ ಅವರು ನೀನು ಮಾಡು ಚೆನ್ನಾಗಿ ಬರುತ್ತೆ, ನಿನ್ನ ಬಗ್ಗೆ ದೊಡ್ಡರಂಗೇಗೌಡರು ಹೇಳಿದ್ದಾರೆ ಎಂದು ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಾರೆ. ಕುಮಾರ್ ಬಂಗಾರಪ್ಪ ಒಪ್ಪಿಕೊಳ್ಳುತ್ತಾರೆ, ಅಪ್ಪಿಕೊಳ್ಳುತ್ತಾರೆ. ಹೀಗೊಬ್ಬ ಸಂಗೀತಗಾರನ ಉದಯವಾಗುತ್ತದೆ. ಆಗ ಬಂಗಾರಪ್ಪ ಅವರು ಮುಖ್ಯಮಂತ್ರಿ. ಹಿರಿಯ ಮಗ ವಸಂತ್ ಬಗ್ಗೆ ಎಲ್ಲಿಲ್ಲದ ಪ್ರೀತಿ.

ವಸಂತ್ ಕನ್ನಡದ ವರನಟ ಡಾ.ರಾಜ್ಕುಮಾರ್ ಹಾಗೆ ಹೆಸರು ಗಳಿಸಬೇಕೆಂಬ ಹಂಬಲ. ಅವರ ಅಭೀಪ್ಸೆ ಪೂರೈಸುವುದಕ್ಕೆ ಹೊರಟವರು ವಸಂತ್. ಅವರಿಗೆ ನಾವು ಇಟ್ಟ ಹೆಸರು `ಕುಮಾರ್ ಬಂಗಾರಪ್ಪ’ ಎಂದು. ಅದೇ ಹೆಸರಲ್ಲಿಯೇ ಪ್ರಖ್ಯಾತರಾದರು. ಅವರಿಗೆ ಸಂಪೂರ್ಣ ಸಹಕಾರ ನೀಡಿದ್ದು ಮಧು ಬಂಗಾರಪ್ಪ.

ಅವರಿಬ್ಬರು ಸದಾ ರಾಮ-ಲಕ್ಷ್ಮಣರಂತೆ ಇದ್ದರು. ಆ ಪ್ರೀತಿ-ವಾತ್ಸಲ್ಯ-ಅಕ್ಕರೆಯನ್ನು ನಾನು ಕಣ್ತುಂಬ ನೋಡಿದ್ದೇನೆ. ಸಿಎಂ ಅಧಿಕೃತ ಕಾರ್ಯಾಲಯ ಕೃಷ್ಣಗೆ ಹೊಂದಿಕೊಂಡಂತೆ ಒಂದು ದೊಡ್ಡ ಹಾಲ್, ಕಿಚನ್ಗಳು ಇದ್ದವು. ದೊಡ್ಡ ಹಾಲ್ನಲ್ಲಿ ಕಂಪೋಸಿAಗ್ ಆರಂಭ ಮಾಡಿದೆವು. ಆಗ ಕೆವಿ ಜಯರಾಂ, ಈಗಾಗಲೇ ವೆಂಕಟೇಶ್ ಹೆಸರಿನ ಸಂಗೀತ ನಿರ್ದೇಶಕ ಜಿಕೆಯು ಇದ್ದಾರೆ. ಜನರಿಗೆ ಗೊಂದಲ ಆಗುವುದು ಬೇಡ ಎಂದರು. ನೀವೂ ಹೇಳುತ್ತಾ ಇರುವುದು ಸರಿಯಾಗಿಯೇ ಇದೆ.ಏನಾದರೂ ಒಂದು ಆಕರ್ಷಕ ಹೆಸರನ್ನು ಇಡೋಣಾ ಎಂದು ಎಲ್ಲರೂ ತೀರ್ಮಾನಿಸಿದೆವು. ಆಗ ನಾನು ಸೂಚಿಸಿದ ಹೆಸರೇ `ಸಂಗೀತ ರಾಜ’(ಎಸ್ಪಿ ವೆಂಕಟೇಶ್). ಅದೇ ಹೆಸರಿನಲ್ಲಿ ಹತ್ತಾರು ಕನ್ನಡ ಚಿತ್ರಗಳಿಗೆ ಅವರು ಸಂಗೀತ ನೀಡಿದರು, ಪ್ರಖ್ಯಾತರಾದರು.

 

ಇದನ್ನು ಓದು :ನ್ಯೂ ಕ್ರಶ್ ಶ್ರೇಯಾಂಕ ಪಾಟೀಲ್ ಬಗ್ಗೆ ನಿಮಗೆಷ್ಟು ಗೊತ್ತು!

 

ಒಂದು ಮಧ್ಯಾಹ್ನ ೪ ಗಂಟೆ ಸಮಯ. ಸಿಎಂ ಬಂದರು. ನಿಮ್ಮ ಟ್ಯೂನ್ಗಳನ್ನು ಹಾಡಿ ತೋರಿಸಿ ಎಂದರು. ಎಲ್ಲವೂ ಅವರಿಗೆ ಇಷ್ಟವಾದವು. ಇದು ೭೦ ಎಂಎಂ ಸಿನಿಮಾ. ಮ್ಯೂಸಿಕ್ ರಿಚ್ ಆಗಿರಲಿ ಎಂದರು. ಕುಮಾರ್, ನೀವೆಲ್ಲಾ ಎಲ್ಲಾದರೂ ಒಂದು ನಿಸರ್ಗಧಾಮದಲ್ಲಿ ಕುಳಿತು ಹಾಡು ಮಾಡಿದ್ದರೆ ಗೌಡರಿಗೆ ಇನ್ನೂ ಸ್ಪೂರ್ತಿಯೂ ಸಿಗುತ್ತಿತ್ತೇನೋ ಎಂದು ಹೇಳಿ, ಅವರ ಪಿಎಗೆ ನಂದಿ ಹಿಲ್ಸ್ನ ನಂಬರ್ ತಗೋ ಅಂದರು.

 

ಅರ್ಧ ಗಂಟೆಯಲ್ಲಿ  ಹೊಟೇಲ್ ಬುಕ್ ಆಯ್ತು. ಅಲ್ಲಿಗೆ ಹೋಗಿ ಹಾಯಾಗಿ ಹಾಡು ಮಾಡಿಕೊಂಡು ಬನ್ನಿ ಎಂದರು. ಮೂರು ನಾಲ್ಕು ಕಾರು ಮಾಡಿದರು. ವಾದ್ಯಗಾರರೆಲ್ಲ ಒಂದು ಕಾರಲ್ಲಿ ಕುಳಿತರು. ನಾನು, ವಸಂತ್, ಕೆವಿ ಜಯರಾಂ ಇನ್ನೊಂದು ಕಾರಲ್ಲಿ ಕುಳಿತೆವು. ಸಂಗೀತರಾಜ ಹಾಗೂ ಅವರ ಇಬ್ಬರು ಸಹಾಯಕರು ಮತ್ತೊಂದು ಕಾರಲ್ಲಿ. ಸಂಜೆ ವೇಳೆ ನಾವೆಲ್ಲಾ ನಂದಿ ಬೆಟ್ಟಕ್ಕೆ ತಲುಪಿದೆವು. ಟೀ ಕುಡಿದು ಕಂಪೋಸಿಂಗ್ ಗೆ ಕುಳಿತೆವು. ಮೊದಲಿಗೆ ಅನುರಾಗವೇ ಹೂವಾಗಿದೆ ಗೀತೆ ಬರೆದೆ. ಕೆ ವಿ ಜಯರಾಂ ಚೆನ್ನಾಗಿದೆ ಎಂದರು.

 

 

Spread the love
Translate »
Right Ad